ETV Bharat / state

ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ, ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಖರೀದಿ: ಶಾಸಕ ಚರಂತಿಮಠ - ಶಾಸಕ ವೀರಣ್ಣ ಚರಂತಿಮಠ

ಪ್ರತಿ ಕ್ವಿಂಟಾಲ್​​ಗೆ 6 ಸಾವಿರ ರೂಪಾಯಿಯಂತೆ ಉತ್ತಮ ಗುಣಮಟ್ಟದ ತೊಗರಿಯನ್ನು ರೈತರಿಗೆ ಯಾವುದೇ ತೊಂದರೆಯಾಗದಂತೆ ಖರೀದಿಸಲಾಗುತ್ತದೆ. ಈಗಾಗಲೇ 6,805 ರೈತರು ಹೆಸರು ನೋಂದಾಯಿಸಿದ್ದಾರೆ ಎಂದು ಚರಂತಿಮಠ ತಿಳಿಸಿದ್ದಾರೆ.

mla veeranna charanti matta talk
ಶಾಸಕ ಚರಂತಿಮಠ
author img

By

Published : Jan 19, 2021, 8:49 PM IST

ಬಾಗಲಕೋಟೆ: ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಕೇಂದ್ರಕ್ಕೆ ಶಾಸಕ ವೀರಣ್ಣ ಚರಂತಿಮಠ, ನಗರದ ಎಪಿಎಂಸಿ ಆವರಣದಲ್ಲಿ ಚಾಲನೆ ನೀಡಿದರು.

ಓದಿ: ಬ್ಯಾನರ್​ನಲ್ಲಿ ನನ್ನ ಫೋಟೋ ಇಲ್ಲ, ವೇದಿಕೆ ಮೇಲೆ ಬರಲ್ಲ.. ಶಾಸಕ ಜಿಟಿಡಿ ತಗಾದೆ

ಇದೇ ಪ್ರಥಮ ಬಾರಿಗೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ತೊಗರಿಯನ್ನು ಖರೀದಿಸುವಂತೆ ಸರಕಾರ ಆದೇಶಿಸಿದ್ದು, ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಈ ಹಿಂದೆ ಕೇವಲ ಐದಾರು ಕ್ವಿಂಟಲ್ ಮಾತ್ರ ಖರೀದಿಸಲಾಗುತಿತ್ತು. ಆದರೆ ಸರ್ಕಾರವು ಈ ಬಾರಿ ಖರೀದಿ ಪ್ರಮಾಣವನ್ನು ಪ್ರತಿ ಎಕರೆಗೆ 7 ಕ್ವಿಂಟಾಲ್‍ನಂತೆ ಗರಿಷ್ಠ 20 ಕ್ವಿಂಟಾಲ್‍ಗಳಷ್ಟು ಖರೀದಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಶಾಸಕ ಚರಂತಿಮಠ

ಪ್ರತಿ ಕ್ವಿಂಟಾಲ್​​ಗೆ 6 ಸಾವಿರದಂತೆ ಉತ್ತಮ ಗುಣಮಟ್ಟದ ತೊಗರಿಯನ್ನು ರೈತರಿಗೆ ಯಾವುದೇ ತೊಂದರೆಯಾಗದಂತೆ ಖರೀದಿಸಲಾಗುತ್ತದೆ. ಈಗಾಗಲೇ 6,805 ರೈತರು ಹೆಸರು ನೋಂದಾಯಿಸಿದ್ದಾರೆ ತಿಳಿಸಿದರು.

ಎಪಿಎಂಸಿಯಲ್ಲಿ ಕೆಲಸ ಮಾಡುತ್ತಿರುವ ಹಮಾಲರಿಗೆ 20 ವರ್ಷಗಳ ಹಿಂದೆ ಕಟ್ಟಿದ ಮನೆಗಳ ನೀಡಿದ ಸಾಲದ ಬಡ್ಡಿ, ಚಕ್ರಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ಈ ನಿಟ್ಟಿನಲ್ಲಿ ಉಸ್ತುವಾರಿ ಮಂತ್ರಿಗಳಿಗೆ ಪ್ರಸ್ತಾವನೆಯೊಂದನ್ನು ನೀಡಲಾಗಿತ್ತು. ಈಗ ಹಮಾಲರಿಂದ ಕೇವಲ ಅಸಲನ್ನು ಮಾತ್ರ ತುಂಬಿಸಿಕೊಳ್ಳುವಂತೆ ಎಪಿಎಂಸಿ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.