ETV Bharat / state

ಊರು ತುಂಬ ಬೂಟ್​​ ಪಾಲಿಶ್​ ಮಾಡಿದ್ರೆ ಹೆಚ್ಚು ಹಣ ಬರ್ತಿತ್ತು: ಕರವೇ ಚಳವಳಿಗೆ ಶಾಸಕ ಚರಂತಿಮಠ ವ್ಯಂಗ್ಯ - ಬಾಗಲಕೋಟೆ ಕರವೇ ಬೂಟ್​ ಪಾಲಿಶ್ ಪ್ರತಿಭಟನೆ

ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುದಾನ ನೀಡುತ್ತಿಲ್ಲ ಎಂದು ಕರವೇ (Karnataka Rakshana Vedike) ಕಳೆದ ದಿನ ಶೂ ಪಾಲಿಶ್ ಚಳವಳಿ ಮಾಡಿತ್ತು..

mla-veeranna-ch-karave-boot-polish-movement
ಶಾಸಕ ಚರಂತಿಮಠ
author img

By

Published : Nov 12, 2021, 6:35 PM IST

ಬಾಗಲಕೋಟೆ : ಡಿಸಿ ಕಚೇರಿ ಮುಂದೆ ಎಷ್ಟು ಜನ ಬರ್ತಾರೆ. ಅದು ಬಿಟ್ಟು ಊರ ತುಂಬ, ಕುತ್ಕೊಂಡು ಬೂಟ್​ ಪಾಲಿಶ್​ ಮಾಡಿದ್ರೆ, ಹೆಚ್ಚು ಹಣ ಕಲೆಕ್ಟ್​ ಆಗುತ್ತೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಬೂಟ್​ ಪಾಲಿಶ್​ ಚಳವಳಿ (Karave Boot Polish Movement) ವಿರುದ್ಧ ಶಾಸಕ ವೀರಣ್ಣ ಚರಂತಿಮಠ (MLA Veeranna Charantimath) ವ್ಯಂಗ್ಯವಾಡಿದರು.

ಕರವೇ ಚಳವಳಿ ಕುರಿತಂತೆ ಬಿಜೆಪಿ ಶಾಸಕ ಚರಂತಿಮಠ ಪ್ರತಿಕ್ರಿಯೆ ನೀಡಿರುವುದು.. 0

ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನುದಾನ ನೀಡುತ್ತಿಲ್ಲ ಎಂದು ಕರವೇ (Karnataka Rakshana Vedike) ಕಳೆದ ದಿನ ಶೂ ಪಾಲಿಶ್ ಚಳವಳಿ ಮಾಡಿತ್ತು.

ಈ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕರು, ಬಿಜೆಪಿ ಸರ್ಕಾರ ವೈದ್ಯಕೀಯ ಕಾಲೇಜ್​ಗೆ ಹಣ ಬಿಡುಗಡೆ ಮಾಡಿಲ್ಲ ಅಂತಾ ಕರವೇ ಕಾರ್ಯಕರ್ತರು ಹೇಳುತ್ತಿದ್ದಾರೆ. ಆದ್ರೆ, ವೈದ್ಯಕೀಯ ಕಾಲೇಜ್ ಅಪ್ರೂವಲ್ ಆಗಿಲ್ಲ, ಬರೀ ಸಿದ್ದರಾಮಯ್ಯ ಬಜೆಟ್​ನಲ್ಲಿ ಘೋಷಣೆ ಆಗಿದೆ ಅಷ್ಟೇ ಎಂದರು.

ಕಳೆದ ಬಜೆಟ್​ನಲ್ಲಿ ವೈದ್ಯಕೀಯ ಕಾಲೇಜ್​ನ ಪ್ರಸ್ತಾಪವೇ ಆಗಿಲ್ಲ. ಕಾಲೇಜ್ ಘೋಷಣೆ ಮಾಡಿದ್ರಲ್ಲ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಇದ್ರೂ ಆಗ ಮಾಡಿಲ್ಲ. ಆಗಿನ ಜಿಲ್ಲೆಯ ಸಚಿವರು ಕಾಲೇಜ್​ಗೆ ಬೇಕಾದ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಆರಂಭಿಸಬೇಕಿತ್ತು.

ಅದು ಬಿಜೆಪಿ ತಪ್ಪಲ್ಲ. ಈಗಲೂ ನಾವು ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಬೇಕು ಅಂತಾನೇ ಹೇಳಿದ್ದೇವೆ. ಹಣಕಾಸಿನ ಮುಗ್ಗಟ್ಟಿನಿಂದ ಕಾಲೇಜಿಗೆ ಅನುದಾನ ನೀಡಿಲ್ಲ ಎಂದು ತಿಳಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಎಪಿಎಂಸಿ ಜಮೀನು ಅಲ್ಲದೆ, ಖಾಸಗಿ ಪಾಲಾಗಿರುವ ಜಮೀನಿನಲ್ಲಿ ರೈತ ಭವನ ನಿರ್ಮಾಣ ಮಾಡಿ, ಕೋಟ್ಯಂತರ ರೂ. ಹಾಳಾಗುವಂತೆ ಮಾಡಿದ್ದಾರೆ. ಕರವೇ ಸಂಘಟನೆ ಅದರ ಬಗ್ಗೆ ಹೋರಾಟ ಮಾಡಲಿ ಎಂದು ಟಾಂಗ್ ನೀಡಿದರು.

ಆ ಮಾತು ಕಾಶಪ್ಪನವರ ಸಣ್ಣತನ ತೋರುತ್ತೆ: ಇದೇ ಸಮಯದಲ್ಲಿ ವೀರ ಸಾವರಕರ್ ಬಗ್ಗೆ ಕಾಶಪ್ಪನವರ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಆ ರೀತಿ ಹೇಳಿದ್ದು ಅದು ಅವರ ಸಣ್ಣತನ ತೋರಿಸುತ್ತೆ. ದೇಶದ ಸ್ವಾತಂತ್ರ್ಯಕ್ಕಾಗಿ ಅಂಡಮಾನ್ ನಿಕೋಬಾರ್​ನ ದ್ವೀಪಗಳಲ್ಲಿ ಇದ್ದರು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಶಪ್ಪನವರ್ ಹೇಳಿಕೆಯಿಂದ ಸಾವರಕರ್​​​ ಇಮೇಜ್​ ಕಡಿಮೆಯಾಗಲ್ಲ ಎಂದರು.

ಇದೇ ಸಂದರ್ಭದಲ್ಲಿ ಬೀಳೂರು ಗುರುಬಸವ ಪತ್ತಿನ ಸಹಕಾರಿ ಸಂಘವು 2021ರ ಸಾಲಿನಿಂದ ಮಾರ್ಚ 31ರವರೆಗೆ 1.68.87.505 ಗಳಷ್ಟು ಲಾಭ ಗಳಿಸಿದೆ. ಸಂಘವು ತನ್ನ ಸದಸ್ಯರಿಗೆ ಪ್ರತಿ ಶತ 15 ರೂ. ಡಿವ್ಹಿಡೆಂಡ್ ಕೂಡುತ್ತಾ ಬಂದಿದೆ ಎಂದು ಶಾಸಕ ಚರಂತಿಮಠ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.