ETV Bharat / state

ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿ ಶೀಘ್ರ ಮುಗಿಸಲು ಶಾಸಕ ಚರಂತಿಮಠ ಸೂಚನೆ - railway-stetion-visit-

ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು ಎಂದು ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷರಾದ ವೀರಣ್ಣ ಚರಂತಿಮಠ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

railway-stetion
ಶಾಸಕ ಚರಂತಿಮಠರ ಒತ್ತಾಯ
author img

By

Published : Sep 18, 2020, 7:43 PM IST

ಬಾಗಲಕೋಟೆ: ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿಯನ್ನು ಶೀಘ್ರ ಮುಗಿಸಬೇಕು ಎಂದು ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ವೀರಣ್ಣ ಚರಂತಿಮಠ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು.

ವಿಜಯಪುರದಿಂದ ವಿಶೇಷ ನಿರೀಕ್ಷಣಾ ರೈಲು ಮೂಲಕ ಬಾಗಲಕೋಟೆ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ರೈಲ್ವೆ ಇಲಾಖೆಯ ಡಿಆರ್​ಎಂ ಅರವಿಂದ ಅವರಿಗೆ ಶಾಸಕರಾದ ವೀರಣ್ಣ ಚರಂತಿಮಠರು ಹೂಗುಚ್ಛ ನೀಡಿ ಸ್ವಾಗತಿಸಿದರು. ಬಾಗಲಕೋಟೆಯ ರೈಲ್ವೆ ನಿಲ್ಧಾಣದಲ್ಲಿ ಗೂಡ್ಸ್‌ಶೆಡ್ ನಿರ್ಮಾಣ ಕಾಮಗಾರಿ, ರೈಲ್ವೆ ಇಲಾಖೆ ಸಿಬ್ಬಂದಿಗೆ ನೂತನ ವಸತಿ ಗೃಹ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಬಾಗಲಕೋಟೆ ಕುಡಚಿ ರೈಲ್ವೆ ಮಾರ್ಗದ ಕಾಮಗಾರಿಯನ್ನು ವೇಗವಾಗಿ ಮಾಡಬೇಕು. ಖಜ್ಜಿಡೋಣಿಯಿಂದ ಲೋಕಾಪುರದವರೆಗೆ ರೈಲ್ವೆ ಮಾರ್ಗವಾಗಿದ್ದು ಮುಂದಿನ ಕಾಮಗಾರಿ ತೀವ್ರಗತಿಯಲ್ಲಿ ಆಗಬೇಕು. ಬರುವ ವಿಧಾನಸಭೆಯ ಅಧಿವೇಶನದಲ್ಲಿಯೂ ಕೂಡ ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಗಮನಕ್ಕೆ ತರಲಾಗುವುದು ಎಂದು ಶಾಸಕರು ಹೇಳಿದರು.

ರೈಲ್ವೆ ಅಧಿಕಾರಿಗಳ ತಂಡ ರೈಲ್ವೆ ನಿಲ್ದಾಣದಲ್ಲಿ ಆಗಬೇಕಾದ ನೀಲಕ್ಷೆಯ ಪ್ರಕಾರ ಕಾಮಗಾರಿಗಳ ಸ್ಥಳವನ್ನು ಪರಿಶೀಲಿಸಿತು. ಗೂಡ್ಸ್ ಶೆಡ್, ಹಾಗೂ ಇಲಾಖೆಯ ಸಿಬ್ಬಂದಿಗೆ ನಿರ್ಮಾಣವಾಗಬೇಕಾದ ವಸತಿ ಗೃಹ ಸ್ಥಳ, ರೈಲ್ವೆ ನಿಲ್ದಾಣ ಸುತ್ತ ಸಂಚರಿಸಿ ವೀಕ್ಷಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.