ETV Bharat / state

ಈಶ್ವರಪ್ಪನವರ ಸಿಎಂ ಹೇಳಿಕೆಗೆ ಸಚಿವ ನಿರಾಣಿ ಹೇಳಿದ್ದು ಹೀಗೆ.. - ಮುರುಗೇಶ್ ನಿರಾಣಿ ಮುಂದೊಂದಿನ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದ ಈಶ್ವರಪ್ಪ

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಮುರುಗೇಶ್​ ನಿರಾಣಿಯವರು ಮುಂದಿನ ದಿನಗಳಲ್ಲಿ ಸಿಎಂ ಆಗ್ತಾರೆ ಎಂದಿದ್ದರು.

Minister Murugesh Nirani
ಸಚಿವ ಮುರುಗೇಶ್​ ನಿರಾಣಿ
author img

By

Published : Nov 29, 2021, 4:41 PM IST

ಬಾಗಲಕೋಟೆ: 'ಸಚಿವ ಈಶ್ವರಪ್ಪ ಅಭಿಮಾನಪೂರ್ವಕವಾಗಿ ಹಾಗೆ ಹೇಳಿರಬಹುದು. ನಮ್ಮ ಮೇಲಿರುವ ಪ್ರೀತಿ, ವಿಶ್ವಾಸ ಹಾಗೂ ನಮ್ಮ ಕೆಲಸ, ಸಾಧನೆಯ ಹಾದಿ ನೋಡಿ ಈ ರೀತಿ ಹೇಳಿದ್ದಾರೆ. ಇದಕ್ಕೆ ನಾನು ಋಣಿ' ಎಂದು ಮುರುಗೇಶ ನಿರಾಣಿ ಹೇಳಿದರು

'ನಮ್ಮ ಹಿರಿಯ ಸಹೋದರ ಬಸವರಾಜ್ ಬೊಮ್ಮಾಯಿಯವರು ರಾಜ್ಯದ ಮುಖ್ಯಮಂತ್ರಿಗಳಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಮತ್ತು ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನಾವು ಅವರಿಗೆ ಎಲ್ಲಾ ರೀತಿಯಲ್ಲಿಯೂ ಸಹಕಾರಿಯಾಗಿತ್ತೇವೆ. ಈ ಮೂಲಕ 2023ಕ್ಕೆ ಸಂಪೂರ್ಣವಾಗಿ ಬಿಜೆಪಿಯನ್ನು ಅಣಿಯಾಗಿಸುವುದು ನಮ್ಮ ಗುರಿ. ಕನಿಷ್ಠ ರಾಜ್ಯದಲ್ಲಿ 125 ಎಂಎಲ್ಎ ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕು. ಹೀಗಾಗಿ ಹೆಚ್ಚಿನ ಸ್ಥಾನ ಗಳಿಸಲು ನಾವು ಗಮನ ಹರಿಸಿದ್ದೇವೆ' ಎಂದರು.

ಸಿಎಂ ಸ್ಥಾನ ಸಿಗುತ್ತಾ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿ, 'ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಆಗುತ್ತದೆ. ಅದನ್ನೆಲ್ಲಾ ನಮ್ಮ ದೊಡ್ಡವರು ಮಾಡ್ತಾರೆ. ಹಿರಿಯರು ಏನೇ ಜವಾಬ್ದಾರಿ ಕೊಟ್ಟರೂ ನಿಷ್ಠಾವಂತ ಕಾರ್ಯಕರ್ತನಾಗಿ ನಿಭಾಯಿಸುತ್ತೇನೆ. 2023ರವರೆಗೆ ಸಿಎಂ ಬೊಮ್ಮಾಯಿ ಅವರೇ ಮುಂದುವರಿಯುತ್ತಾರೆ. ಈ ಹಿಂದೆ ಬೊಮ್ಮಾಯಿ ಮತ್ತು ನಾನು ಸಿಎಂ ರೇಸ್​​​​ನಲ್ಲಿದ್ದೆವು. ಆಗ ಬೊಮ್ಮಾಯಿಯವರ ಹೆಸರು ಅನೌನ್ಸ್ ಆದ್ರೂ ನನ್ನಲ್ಲಿ ಬದಲಾವಣೆಗಳು ಆಗಲಿಲ್ಲ. ನಾನು ಆಗಿದ್ದಕ್ಕಿಂತಲೂ ಹೆಚ್ಚು ಸಂತೋಷಪಟ್ಟೆ' ಎಂದು ಹೇಳದರು.

ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಮಾತನಾಡುತ್ತಾ, 'ಬಿಜೆಪಿ ಸ್ಪರ್ಧಿಸಿರುವ 20 ಸ್ಥಾನಗಳಲ್ಲಿ 15 ಸ್ಥಾನಗಳಲ್ಲಿ ಗೆಲ್ಲಲಿದೆ. ಮುಂದಿನ ದಿನಗಳಲ್ಲಿ ಮೇಲ್ಮನೆಯಲ್ಲಿ ಬಿಜೆಪಿ ಬಹುಮತ ಸಾಧಿಸಲಿದೆ. ಹೀಗಾಗಿ ಸ್ಪೀಕರ್ ಸ್ಥಾನ ಬಿಜೆಪಿ ಪಾಲಾಗಲಿದೆ. ಕಲಬುರಗಿ, ಯಾದಗಿರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಇದು ಸೂರ್ಯ-ಚಂದ್ರರು ಇರುವಷ್ಟೇ ಸತ್ಯ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ವಿಜಯಪುರ ಹಾಗೂ ಬಾಗಲಕೋಟೆ ಕಾರ್ಯಕರ್ತರ ಸಮಾವೇಶದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​​.ಈಶ್ವರಪ್ಪ ಮಾತನಾಡುತ್ತಾ, 'ನಮ್ಮ ನಾಯಕ ಮುರುಗೇಶ್ ನಿರಾಣಿ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದು ನೂರಕ್ಕೆ ನೂರರಷ್ಟು ‌ಖಚಿತ. ನಾನು ಈ ರೀತಿ ಹೇಳಿದೆ ಎಂದರೆ, ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರನ್ನು ತೆಗೆದುಬಿಡುತ್ತಾರೆ ಎಂದು ಯಾರೊಬ್ಬರೂ ಅನ್ಯಥಾ ‌ಭಾವಿಸಬಾರದು. ಅವರು ನಾಳೆಯೇ ಮುಖ್ಯಮಂತ್ರಿ ಆಗುತ್ತಾರೆ ಎಂದು ನಾನು ಹೇಳುವುದಿಲ್ಲ. ಒಂದು ದಿನ ಅವರೂ ಮುಖ್ಯಮಂತ್ರಿ ಆಗುತ್ತಾರೆ' ಎಂದು ‌ಸೂಚ್ಯವಾಗಿ ಹೇಳಿದ್ದರು.

ಇದನ್ನೂ ಓದಿ: ಸಿದ್ದುಗೆ ಸಿಎಂ ಕುರ್ಚಿ ಬಿಟ್ಟು ಬೇರೆ ಕಡೆ ಕೂತರೆ ಮುಳ್ಳು ಚುಚ್ಚಿದಂಗೆ : ಸಚಿವ ಈಶ್ವರಪ್ಪ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.