ETV Bharat / state

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕ್ಷೀರಭಾಗ್ಯ ಯೋಜನೆಯ ಹಾಲಿನ್ ಪೌಡರ್ ಪತ್ತೆ! - ಕ್ಷೀರಭಾಗ್ಯ ಯೋಜನೆ

ಕ್ಷೀರಭಾಗ್ಯ ಯೋಜನೆಯ ಹಾಲಿನ್ ಪೌಡರ್ ಮುಧೋಳ ಮತ್ತು ಜಮಖಂಡಿಯಲ್ಲಿ ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದನ್ನು ಸೀಜ್ ಮಾಡಲಾಗಿದೆ. ಅದರಲ್ಲಿ ಭಾಗಿಯಾದವರನ್ನು ಬೇರು ಸಮೇತ ಜಾಲಾಡುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೊಕೇಶ ಜಗಲಾಸರ್ ತಿಳಿಸಿದರು.

sp
sp
author img

By

Published : Oct 26, 2020, 9:59 PM IST

ಬಾಗಲಕೋಟೆ: ಜಮಖಂಡಿ ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಹಾಲಿನ ಪೌಡರ್ ಅಕ್ರಮ ದಂಧೆಯಲ್ಲಿ ತೊಡಗಿದ್ದವರನ್ನು ಒಂದು ವಾರದಲ್ಲಿ ಬೇರುಸಮೇತ ಹುಡುಕಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೊಕೇಶ ಜಗಲಾಸರ್ ತಿಳಿಸಿದರು.

ಜಮಖಂಡಿ ನಗರದ ಸಿಪಿಐ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಮಾಡುತ್ತಾ, ಯಾವುದೇ ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಇದರಲ್ಲಿ ಭಾಗಿಯಾದ ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು ಎಂದರು.

ಪ್ರಸಕ್ತ 2020ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 11 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಈ ತಿಂಗಳು ಕ್ಷೀರಭಾಗ್ಯ ಯೋಜನೆಯ ಹಾಲಿನ್ ಪೌಡರ್ ಮುಧೋಳ ಮತ್ತು ಜಮಖಂಡಿಯಲ್ಲಿ ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದನ್ನು ಸೀಜ್ ಮಾಡಿದ್ದಾರೆ. ಅದರಲ್ಲಿ ಭಾಗಿಯಾದವರನ್ನು ಬೇರು ಸಮೇತ ಜಾಲಾಡುತ್ತೇವೆ ಎಂದರು.

ಮಾರಾಟ ಮಾಡಿದವರು ಇದ್ದಾರೆ, ಖರೀದಿ ಮಾಡಿದವರು ಇದ್ದಾರೆ, ಸಾಗಣೆ ಮಾಡಿದವರು ಇದ್ದಾರೆ. ಇದರಲ್ಲಿ ಯಾರ್ಯಾರ ಕೈವಾಡ ಇದೆಯೋ ಅವರನ್ನು ಏಳೆಂಟು ದಿನಗಳಲ್ಲಿ ಕರೆತರುತ್ತೇವೆ. ತಪ್ಪಿಸಿಕೊಳ್ಳುವುದಕ್ಕೆ ಮುಂದಾದರೆ ಅವರನ್ನು ಬಂಧಿಸಿ ಕರೆತರುತ್ತೇವೆ ಎಂದರು.

ಅಪೌಷ್ಠಿಕತೆಯಿಂದ ಮಕ್ಕಳು ಬಳಲುತ್ತಿವೆ. ಆದರೆ ಇಷ್ಟು ಪ್ರಮಾಣದಲ್ಲಿ ಹಾಲಿನ ಪೌಡರ್ ಮಕ್ಕಳಿಗೆ ನೀಡದೇ ಸಾಮಾಜಿಕ ಅಪರಾಧ ಕಾರ್ಯ ಮಾಡಿದ್ದಾರೆ ಎಂದರು. ಸಂಸದರ ನಿಧಿಯಿಂದ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮ, ಚಿಕ್ಕಲಕಿ ಕ್ರಾಸ್, ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದರು.

ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗುತ್ತಿದ್ದಂತೆ ಟ್ರ್ಯಾಕ್ಟರ್​ಗಳು ಬಹಳಷ್ಟು ರಸ್ತೆಗೆ ಇಳಿಯುತ್ತವೆ. ಟ್ರ್ಯಾಕ್ಟರಗಳಲ್ಲಿ ಟೆಪ್‍ ರೆಕಾರ್ಡ್‍ಗಳನ್ನು ತೆಗೆದುಹಾಕಬೇಕು, ಟ್ರೇಲರ್​ಗಳಿಗೆ ರೇಡಿಯಂ ಅಂಟಿಸಬೇಕು. ಅದನ್ನು ಮಾಡದವರ ಮೇಲೆ ದೂರು ದಾಖಲಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ 1600 ಸಿಬ್ಬಂದಿಗಳು ಕಾರ್ಯನಿರ್ವಹಿಸುತಿದ್ದಾರೆ. ಸಿಬ್ಬಂದಿಗಳ ಕೊರತೆ ಇಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.