ಬಾಗಲಕೋಟೆ: ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಹೊರಟ ವಲಸೆ ಕಾರ್ಮಿಕರು ಬಾಗಲಕೋಟೆ ಗಡಿ ತಲುಪಿದ್ದಾರೆ.
15 ಕಾರ್ಮಿಕ ತಂಡ ಏಳು ದಿನಗಳ ನಿರಂತರ ನಡಿಗೆಯ ಬಳಿಕ ಬಾಗಲಕೋಟೆ ತಲುಪಿದ್ದು, ಇಲ್ಲಿಂದ ಬೀಳಗಿ ಮಾರ್ಗದ ಮೂಲಕ ವಿಜಯಪುರಕ್ಕೆ ಹೋಗಲಿದ್ದಾರೆ. ಬಳಿಕ ಮಹಾರಾಷ್ಟ್ರಕ್ಕೆ ತೆರಳಿ, ಅಲ್ಲಿಂದ ತವರು ರಾಜ್ಯ ಮಧ್ಯಪ್ರದೇಶಕ್ಕೆ ತೆರಳಲಿದ್ದಾರೆ.
ಹೀಗೆ ನಡೆದು ಹೊರಟಿದ್ದ ಕಾರ್ಮಿಕರಿಗೆ ಬೀಳಗಿ ಎಪಿಎಂಸಿ ಅಧ್ಯಕ್ಷ ಗುರಪ್ಪ ಊಟ ಹಾಗೂ ಧನಸಹಾಯ ನೀಡಿದರು.