ETV Bharat / state

2ಎ ಮೀಸಲಾತಿ ನೀಡುವಂತೆ ಒತ್ತಾಯ: ಸಿ.ಸಿ.ಪಾಟೀಲ್​​ ನೇತೃತ್ವದಲ್ಲಿ ಪಂಚಮಸಾಲಿ ಮುಖಂಡರ ಸಭೆ - ಬಸವನಗೌಡ ಪಾಟೀಲ ಯತ್ನಾಳ‌

ಪಂಚಮಸಾಲಿ ಸಮಾಜದ ಮುಖಂಡರಾದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಬಿಜೆಪಿ ಪಕ್ಷದ ಶಾಸಕ‌ ಬಸನಗೌಡ ಪಾಟೀಲ ಯತ್ನಾಳ‌ ಸೇರಿದಂತೆ ಇತರ ಮುಖಂಡರು‌ ಪಾಲ್ಗೊಂಡು ಮೀಸಲಾತಿಗಾಗಿ ಉಗ್ರ ಸ್ವರೂಪದ ಹೋರಾಟಕ್ಕೆ ಸಿದ್ಧ ಎಂದು‌ ಸಾರಿದರು.

meeting-of-panchamasaali-comuunity-leaders-in-bagalakote
ಸಿ.ಸಿ. ಪಾಟೀಲ ನೇತೃತ್ವದಲ್ಲಿ ಪಂಚಮಸಾಲಿ ಮುಖಂಡರ ಸಭೆ
author img

By

Published : Jan 9, 2021, 10:58 PM IST

ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಜನವರಿ 14ರಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲು‌ ನಿರ್ಧಾರ ಮಾಡಲಾಗಿದೆ.

ಸಿ.ಸಿ.ಪಾಟೀಲ ನೇತೃತ್ವದಲ್ಲಿ ಪಂಚಮಸಾಲಿ ಮುಖಂಡರ ಸಭೆ

ಈ ಹಿನ್ನಲೆ ಇಂದು ಕೂಡಲಸಂಗಮಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಸಿ.ಸಿ.ಪಾಟೀಲ ನೇತೃತ್ವದಲ್ಲಿ ಸಮಿತಿ ಆಗಮಿಸಿ ಸಭೆ ನಡೆಸಲಾಯಿತು. ಸಭೆಯಲ್ಲಿ ಪಕ್ಷಾತೀತವಾಗಿ ಪಂಚಮಸಾಲಿ ಸಮಾಜದ ಮುಖಂಡರಾದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಬಿಜೆಪಿ ಪಕ್ಷದ ಶಾಸಕ‌ ಬಸನಗೌಡ ಪಾಟೀಲ ಯತ್ನಾಳ‌ ಸೇರಿದಂತೆ ಇತರ ಮುಖಂಡರು‌ ಪಾಲ್ಗೊಂಡು ಮೀಸಲಾತಿಗಾಗಿ ಉಗ್ರ ಸ್ವರೂಪದ ಹೋರಾಟಕ್ಕೆ ಸಿದ್ಧ ಎಂದು‌ ಸಾರಿದರು.

ಓದಿ: ಪಂಚಮಸಾಲಿ ಸಮಾಜ 2ಎಗೆ ಸೇರ್ಪಡೆಗೆ ಒತ್ತಾಯಿಸಿ ವಿಧಾನಸೌಧಕ್ಕೆ ಮುತ್ತಿಗೆ: ಸ್ವಾಮೀಜಿ ಎಚ್ಚರಿಕೆ

ಸಭೆಯಲ್ಲಿ ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಸಿ.ಸಿ.ಪಾಟೀಲ ಹಾಗೂ ನಾನು ಹಿರಿಯರು. ದಿವಂಗತ ಅನಂತಕುಮಾರ್ ಅವರು ಮೊದಲ ಬಾರಿಗೆ ಮಂತ್ರಿ ಆದ ಸಮಯದಲ್ಲಿ ನಾನು ಮಂತ್ರಿ ಆಗಿದ್ದೇನೆ. ಈಗ ಸಚಿವ ಆಗಿರುವ ಸಿ.ಸಿ.ಪಾಟೀಲರಿಗೆ ಇರುಸು ಮುರುಸು ಆಗಬಹುದು ಎಂದರು.

ಈ ವೇಳೆ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪಂಚಮಸಾಲಿ ಸಮಾಜದ ಬೇಡಿಕೆಯನ್ನು ಈಡೇರಿಸುವುದಕ್ಕೆ ಸಕಾರಾತ್ಮಕವಾಗಿ ಒಪ್ಪಿಗೆ ನೀಡಿದ್ದಾರೆ. ಮತ್ತೆ ಅವರ ಜೊತೆಗೆ, ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಸಿ ಒಮ್ಮತ ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಶ್ರೀಗಳು ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ಇದಕ್ಕೆ ಪ್ರತಿಯಾಗಿ ಪಂಚಮಸಾಲಿ ಶ್ರೀಗಳು ಮಾತನಾಡಿ, ಜನವರಿ 14ರಂದು ಕೂಡಲಸಂಗಮದಿಂದ‌ ವಿಧಾನಸೌಧದವರೆಗೆ ಮೀಸಲಾತಿಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು 14ರ ಒಳಗೆ ಸಭೆ ನಡೆಸಿ, ಮೀಸಲಾತಿ ಬಗ್ಗೆ ನಿರ್ಧಾರ ತೆಗೆದುಕೊಂಡು ಭರವಸೆ ನೀಡಬೇಕು. ಆಗ ಮಾತ್ರ ಪಾದಯಾತ್ರೆ ರದ್ದುಗೊಳಿಸಿ, ವಿಜಯೋತ್ಸವ ಆಚರಣೆ ಮಾಡುತ್ತೇವೆ. ಇಲ್ಲವಾದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳುವುದು ಶತಸಿದ್ಧ ಎಂದು ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.