ETV Bharat / state

3ನೇ ಪಂಚಮಸಾಲಿ ಪೀಠ ವಿಚಾರ.. ಕೂಡಲಸಂಗಮ ಸ್ವಾಮೀಜಿಗಳ ವಿರುದ್ಧ ಮನಗೂಳಿ‌ ಸ್ವಾಮೀಜಿ ಆಕ್ರೋಶ..

ಯಾರು ಸಮಾಜ ಒಡೆಯುತ್ತಿದ್ದಾರೆ ಅನ್ನೋದಕ್ಕೆ ಸಮಾಜದ ಜನರೇ ಉತ್ತರ ಕೊಡ್ತಾರೆ. ನಾವು ಪೀಠ ಸ್ಥಾಪನೆ ಮಾಡುತ್ತಿರುವುದು ಯಾವುದೋ ಉದ್ದೇಶಕ್ಕಾಗಿ ಅಲ್ಲ. ನೀವು ನಮ್ಮವರು ಅಂತಾ ನಾನು ನಿಮಗೆ ಈಗಾಗಲೇ ತಿಳಿಸಿದ್ದೇನೆ. ಎಷ್ಟೇ ಪೀಠಗಳಾಗಲಿ, ಎಷ್ಟೇ ಸ್ವಾಮಿಗಳಾಗಲಿ ಸಮಾಜದ ಅಭಿವೃದ್ಧಿಗೆ ಎಲ್ಲರೂ ದುಡಿಯುತ್ತಾರೆ..

managooli sangana basava swamiji
ಮನಗೊಳಿ ಮಠದ ಸಂಗನ ಬಸವ ಸ್ವಾಮೀಜಿ
author img

By

Published : Feb 6, 2022, 7:36 PM IST

Updated : Feb 6, 2022, 8:01 PM IST

ಬಾಗಲಕೋಟೆ : ಸಮಾಜವನ್ನು ನೀವೇಕೆ ಕಟ್ಟುತ್ತೀರಿ. ನಿಮಗಿಂತ ಪೂರ್ವದಲ್ಲಿ ಹರಿಹರ ಮಹಾಂತ ಸ್ವಾಮಿಗಳು ಕಟ್ಟಿದ್ದಾರೆ. ಪ್ರಥಮ ಪೀಠವದು. ನಿಮ್ಮ ಪೀಠ ಯಾಕೆ ಪ್ರಥಮ ಆಗುತ್ತೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿಗಳಿಗೆ ಮನಗೂಳಿ ಮಠದ ಸಂಗನ ಬಸವ ಸ್ವಾಮೀಜಿಗಳು ತಿರುಗೇಟು‌ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, 10 ಲಕ್ಷ ಜನರನ್ನು ಕೂಡಿಸಿ ಯಾರು ಪೀಠ ಮಾಡಿದ್ದಾರೆ. ನೀವೆಷ್ಟು ಜನರನ್ನು ಕೂಡಿಸಿದ್ದೀರಿ. ನಾವು ಈವರೆಗೆ ಈ ಬಗ್ಗೆ ಮಾತನಾಡಿಲ್ಲ. ಇಂದು ಮಾತನಾಡುವ ಸಂದರ್ಭ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ನೀವೊಬ್ಬರೇ ಸಮಾಜ ಕಟ್ಟಿಲ್ಲ. ಸಮಾಜದ ಜನರು ಮುಗ್ಧರೆಂದು ಏನು ಹೇಳಿದರೂ ನಂಬುತ್ತಾರೆಂದು ತಿಳಿದು ಕೊಂಡಿದ್ದಿರೇನು. ಗುರು ಪರಂಪರೆಯ ಸ್ವಾಮೀಜಿ ಸೇರಿ ಅನೇಕ ಶ್ರೀಗಳು ಸಮಾಜ ಕಟ್ಟಿದ್ದಾರೆ. ನೀವು ಒಂದೇ ಸಮಾಜಕ್ಕೆ ಪ್ರೀತಿಯಿಂದ ಕಾಣುತ್ತಿರಬೇಕು.

3ನೇ ಪಂಚಮಸಾಲಿ ಪೀಠದ ಕುರಿತಂತೆ ಮನಗೂಳಿ ಮಠದ ಶ್ರೀ ಸಂಗನ ಬಸವ ಸ್ವಾಮೀಜಿ ಮಾತನಾಡಿರುವುದು..

ನಾವು ಬೇರೆ ಬೇರೆ ಸಮಾಜದ ಜನರನ್ನು ಕಟ್ಟಿಕೊಂಡು ಸಮಾಜ ಬೆಳೆಸುತ್ತಿದ್ದೇವೆ. 2ಎ ಮೀಸಲಾತಿ ಹೋರಾಟ ನೀವೊಬ್ಬರೇ ಮಾಡಿದ್ದೀರಾ, ಬೇರೆ ಯಾರೂ ಮಾಡಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಮನಗೂಳಿ ಅಪ್ಪಗೋಳು ಸಮಾಜದ ಜನರನ್ನು ಕರೆತಂದು ದುಡ್ಡು ಕೊಟ್ಟಿದ್ದಾರೆ. ಬಾಗೇವಾಡಿ ಅವರು ಕೊಟ್ಟಿದ್ದಾರೆ, ಇಡೀ ಬಾಗಲಕೋಟೆ ಜನರು ಕೊಟ್ಟಿದ್ದಾರೆ. ಎಷ್ಟು ಜನ ನಿಮಗೆ ಹಣ ಸಹಾಯ ಕೊಟ್ಟಿಲ್ಲವಾ, ನೀವೊಬ್ಬರೇ ಸಮಾಜ ಕಟ್ಟಿದ್ದೀರಾ ಎಂದು ಪ್ರಶ್ನಿಸಿದರು. ಮತ್ತೊಬ್ಬರನ್ನು ನಿಂದನೆ ಮಾಡೋದು ಬಿಟ್ಟು ಎಲ್ಲರೂ ನಮ್ಮವರು ಎನ್ನುವ ರೀತಿಯಲ್ಲಿ ಹೋಗೋದು ಒಳ್ಳೆಯದು ಎಂದು ಸಲಹೆ ನೀಡಿದರು.

ಯಾರು ಸಮಾಜ ಒಡೆಯುತ್ತಿದ್ದಾರೆ ಅನ್ನೋದಕ್ಕೆ ಸಮಾಜದ ಜನರೇ ಉತ್ತರ ಕೊಡ್ತಾರೆ. ನಾವು ಪೀಠ ಸ್ಥಾಪನೆ ಮಾಡುತ್ತಿರುವುದು ಯಾವುದೋ ಉದ್ದೇಶಕ್ಕಾಗಿ ಅಲ್ಲ. ನೀವು ನಮ್ಮವರು ಅಂತಾ ನಾನು ನಿಮಗೆ ಈಗಾಗಲೇ ತಿಳಿಸಿದ್ದೇನೆ. ಎಷ್ಟೇ ಪೀಠಗಳಾಗಲಿ, ಎಷ್ಟೇ ಸ್ವಾಮಿಗಳಾಗಲಿ ಸಮಾಜದ ಅಭಿವೃದ್ಧಿಗೆ ಎಲ್ಲರೂ ದುಡಿಯುತ್ತಾರೆ.

ಈ ಪೀಠ ಬರುವ ದಿನಗಳಲ್ಲಿ ಕೆಲಸ ಮಾಡಿ ತೋರಿಸುತ್ತದೆ. 80 ಸಾವಿರದಿಂದ 1 ಲಕ್ಷ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿ ತೋರಿಸುತ್ತೇವೆ. ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನ ಮಾಡುತ್ತೇವೆ, ಬರೋದು ಬಿಡೋದು ನಿಮ್ಮ ವಿಚಾರ ಎಂದರು.

ಇದನ್ನೂ ಓದಿ: ಒಂದು ಸಮುದಾಯಕ್ಕೆ ಒಬ್ಬರೇ ಗುರು.. ಅವರು ಬೇಕಿದ್ರೇ ಮನೆಗೊಂದು, ಊರಿಗೊಂದು ಪೀಠ ಮಾಡಲಿ.. ಕೂಡಲಸಂಗಮ ಶ್ರೀ

ಪಂಚಮಸಾಲಿ ಪೀಠಕ್ಕೆ ಸಚಿವ ನಿರಾಣಿ ನೀಡಿರುವ ಕಾಣಿಕೆಗಳನ್ನೆಲ್ಲ ಮರಳಿಸುವೆ ಎಂಬ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮುರುಗೇಶ್ ನಿರಾಣಿಯವರ ಮನಸ್ಸು ಹಾಲಿನಂತೆ. ಅವರ ಮತಕ್ಷೇತ್ರದಲ್ಲಿ ನಾವೆಲ್ಲ ವಿಚಾರ ಮಾಡಬೇಕು. ಬೀಳಗಿ ಮತಕ್ಷೇತ್ರದಲ್ಲಿ ಪಂಚಮಸಾಲಿ ಮತಗಳು ಎಷ್ಟಿವೆ?.

ಕೇವಲ ಮುರೂವರೆಯಿಂದ ಐದು ಸಾವಿರ ವೋಟ್. ಒಬ್ಬ ರಾಜಕೀಯ ವ್ಯಕ್ತಿ ಒಂದೇ ಸಮಾಜದ ಮೇಲೆ ನಂಬಿಕೆ ಇಡಲ್ಲ. ಉತ್ತರ ಕರ್ನಾಟಕದಲ್ಲೇ ಸ್ವಾಮೀಜಿಯವರ ಮೇಲೆ ಹೆಚ್ಚು ವಿಶೇಷ ಅಭಿಮಾನ ಇಟ್ಟುಕೊಂಡಿರುವ ವ್ಯಕ್ತಿ ಇದ್ರೆ ಅದು ಮುರುಗೇಶ್ ನಿರಾಣಿ ಎಂದು ಸಚಿವರ ಪರವಾಗಿ ಬ್ಯಾಟಿಂಗ್ ಬೀಸಿದರು. ನಿರಾಣಿ ಒಂದೇ ಸಮಾಜಕ್ಕಲ್ಲ, ಎಲ್ಲ ಸಮಾಜಗಳ ಬೆನ್ನೆಲುಬಾಗಿ ನಿಂತಿರುವ ಅಪರೂಪದ ರಾಜಕಾರಣಿ ಎಂದರು.

ರಾಜಕಾರಣಿಗಳು ನಮ್ಮವರೇ. ಕೂಡಲಸಂಗಮ ಪೀಠಕ್ಕೂ ಸೇವೆ ಮಾಡ್ತಿದ್ದಾರೆ. ಹರಿಹರ ಪೀಠಕ್ಕೂ ಸೇವೆ ಮಾಡಿದ್ದಾರೆ. ಮನಗೂಳಿ ಮಠಕ್ಕೂ ಬಂದಿದ್ದಾರೆ. ಸರ್ವ ಸಮಾಜದ ಎಲ್ಲ ವ್ಯಕ್ತಿಗಳು ಬರುತ್ತಾರೆ. ಕರೆಯುವ ಪದ್ಧತಿ ಇದೆ, ಕರೆಯುತ್ತೇವೆ. ಮುಂದಿನದ್ದು ಅವರಿಗೆ ಬಿಟ್ಟದ್ದು ಎಂದು ಮನಗೂಳಿ ಸ್ವಾಮೀಜಿ ಟಾಂಗ್‌ ನೀಡಿದರು.

Last Updated : Feb 6, 2022, 8:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.