ಬಾಗಲಕೋಟೆ: ಮಲ್ಲಪ್ರಭಾ ನದಿಯ ಅಬ್ಬರ ತಗ್ಗಿದ ಪರಿಣಾಮ ಬಾದಾಮಿ ತಾಲೂಕಿನ ಪ್ರವಾಹ ಭೀತಿ ಉಂಟಾಗುವ ಗ್ರಾಮದ ಜನ ಸ್ವಲ್ಪ ಮಟ್ಟಿಗೆ ನಿರಾಳವಾಗಿದ್ದಾರೆ.
ಬಾದಾಮಿ ತಾಲೂಕಿನಲ್ಲಿ ನದಿ ನೀರು ಇಳಿಕೆಯಿಂದ, ಜಲಾವೃತಗೊಂಡ ಸೇತುವೆ ಸಂಚಾರ ಮುಕ್ತವಾಗಿದೆ. ಜಲಾವೃತ ಆಗಿದ್ದ ಚೊಳಚಗುಡ್ಡ ಸೇತುವೆಯಲ್ಲಿ ಶಾಂತವಾದ ಮಲ್ಲಪ್ರಭೆಯಿಂದ ಬಾಗಲಕೋಟೆಯಿಂದ ಗದಗ ಸಂಚಾರಕ್ಕೆ ಮುಕ್ತವಾಗಿದೆ.
ಕಳೆದ ದಿನ ಸೇತುವೆ ಮೇಲಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಗದಗ, ರೋಣ ಹಾಗೂ ಗಜೇಂದ್ರಗಡ ಸೇರಿದಂತೆ ಗದಗ ಜಿಲ್ಲೆಗೆ ಸಂಚಾರ ಇಲ್ಲದೆ ಪರದಾಡುವಂತಾಗಿತ್ತು. ಈಗ ನೀರು ಇಳಿಕೆ ಆಗಿರುವುದರಿಂದ ವಾಹನ ಸಂಚಾರ ಮತ್ತೆ ಆರಂಭವಾಗಿದೆ.