ETV Bharat / state

ಗೆಲುವಿಗಾಗಿ ಅಭ್ಯರ್ಥಿಗಳ ಟೆಂಪಲ್​ ರನ್​... ಒಂದೇ ಸ್ಥಳದಲ್ಲಿ ಕಾಣಿಸಿಕೊಂಡ ಎದುರಾಳಿಗಳು

ಲೋಕಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿವಿಗಾಗಿ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಟೆಂಪಲ್ ರನ್ ಶುರು ಮಾಡಿದ್ದು, ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಗೆಲುವುಗಾಗಿ ದೇವರ ಮೊರೆ ಹೋದ ಲೋಕಸಭಾ ಅಭ್ಯರ್ಥಿಗಳು
author img

By

Published : Apr 7, 2019, 9:55 AM IST

ಬಾಗಲಕೋಟೆ: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಯಾವುದೇ ಪೂಜೆ ಪುನಸ್ಕಾರ ನಡೆದರೂ ಅದರಲ್ಲಿ ಭಾಗಿಯಾಗುತ್ತಿದ್ದು, ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ.

ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಯುಗಾದಿ ಹಬ್ಬದ ದಿನದಂದು ನಸುಕಿನ ಜಾವದಲ್ಲಿ ನಡೆದ ಜಟಾ ಪೂಜೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಹಾಗೂ ಬಿಜೆಪಿ ಅಭ್ಯರ್ಥಿ ಪಿ,ಸಿ. ಗದ್ದಿಗೌಡರ ಭಾಗವಹಿಸುವ ಮೂಲಕ ಗಮನ ಸೆಳೆದರು.

ಗೆಲುವುಗಾಗಿ ದೇವರ ಮೊರೆ ಹೋದ ಲೋಕಸಭಾ ಅಭ್ಯರ್ಥಿಗಳು

ಮಹಾಲಿಂಗಪುರ ಪಟ್ಟಣದಲ್ಲಿರುವ ಪ್ರಸಿದ್ದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ಯುಗಾದಿ ಹಬ್ಬದ ದಿನದಂದು ಬೆಳಗಿನ ಜಾವದ ಸಮಯದಲ್ಲಿ ಜಟಾ ಪೂಜಾ ಮಾಡಲಾಗುತ್ತದೆ. ಜಗದ್ಗುರು ರಾಜೇಂದ್ರ ಶಿವಯೋಗಿ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಜಟಾ ಪೂಜೆಯು ವಿಶೇಷವಾಗಿರುತ್ತೆ. ಅಲ್ಲಿ, ಲಿಂಗಕ್ಯವಾಗಿರುವ ಶ್ರೀಗಳ ಜಟಾವು ಪ್ರತಿ ವರ್ಷ ಸ್ವಲ್ಪ ಮಟ್ಟಿಗೆ ಬೆಳೆಯುತ್ತದೆ ಎಂಬ ನಂಬಿಕೆಯಿದೆ.

ಈ ಹಿನ್ನಲೆ ಭಕ್ತರು ಇಲ್ಲಿ ಪೂಜೆ ಸಲ್ಲಿಸಿದರೆ, ಇಷ್ಟಾರ್ಥಗಳು ಇಡೇರುತ್ತವೆ ಎಂಬ ನಂಬಿಕೆ ಇದೆ. ಹಾಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ನಸುಕಿನ ಜಾವ 4 ಗಂಟೆಗೆ ಆಗಮಿಸಿ, ಪೂಜೆಯಲ್ಲಿ ಭಾಗವಹಿಸಿದ್ದರು. ಭಕ್ತರ ಸಾಲಿನಲ್ಲಿ ಕುಳಿತುಕೊಂಡು ವಿಶೇಷವಾಗಿ ಪೂಜೆ ಸಲ್ಲಿಸಿದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.