ಬಾಗಲಕೋಟೆ : ಕೊರೊನಾ ಕುರಿತು ಜಾಗೃತಿ ಮೂಡಿಸಲು 8 ಅಡಿ ಉದ್ದ 6 ಅಡಿ ಅಗಲದ ದೇಶದ ಅತೀ ದೊಡ್ಡ ಮಾಸ್ಕ್ ತಯಾರಿಸಲಾಗಿದೆ.
ಮಾರ್ಚ್ 29ರಂದು ಅಮೀನಗಢ ಗ್ರಾಮದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರದ ಜಾಗೃತಿ ಅಭಿಯಾನದ ಜೊತೆಗೆ 108 ಅಡಿಗಳ ಉದ್ದನೆಯ ಶ್ರೀಶೈಲ ಮಲ್ಲಯ್ಯನ ಧ್ವಜದೊಂದಿಗೆ ಪಾದಯಾತ್ರೆ ಮಾಡಿ ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ಖ್ಯಾತ ಕಲಾವಿದ ಅಸ್ಲಾಂ ಕಲಾದಗಿ ಆಕರ್ಷಕ ಮಲ್ಲಯ್ಯನ ಚಿತ್ರ, ಮಾಸ್ಕ್ ಜಾಗೃತಿಯ ಸಂದೇಶಗಳನ್ನು ಬಿಡಿಸಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. 29ರ ಸಂಜೆ 4 ಗಂಟೆಗೆ ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ್ 108 ಅಡಿಗಳ ಧ್ವಜ ಅನಾವರಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅನೇಕ ಸ್ವಾಮೀಜಿಗಳು, ಮುಖಂಡರು ಭಾಗಿಯಾಗಲಿದ್ದಾರೆ.