ETV Bharat / state

ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಕೃಷ್ಣೆ: ನದಿ ತೀರದತ್ತ ಸುಳಿಯದಂತೆ ಜನರಿಗೆ ಸೂಚನೆ - ಪ್ರವಾಹದ ಭೀತಿ

ಕಳೆದ 15 ದಿನಗಳಿಂದ ತನ್ನ ಒಡಲೊಳಗೆ ಹರಿಯುತ್ತಿದ್ದ ಕೃಷ್ಣಾ ನದಿ ಇಂದು ತುಂಬಿ ಹರಿಯುತ್ತಿದೆ. ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗಿರುವ ಹಿನ್ನೆಲೆ ಜನರಲ್ಲಿ ಮತ್ತೆ ಆತಂಕ ಮನೆಮಾಡಿದೆ.

ಕೃಷ್ಣೆ
author img

By

Published : Sep 6, 2019, 8:00 PM IST

Updated : Sep 6, 2019, 8:10 PM IST

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ ಮತ್ತೆ ಜೋರಾಗಿರುವುದರಿಂದ ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ನದಿ ಅಬ್ಬರಿಸುತ್ತಿದೆ. ಹೀಗಾಗಿ ಈ ಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಕಳೆದ 15 ದಿನಗಳಿಂದ ತನ್ನ ಒಡಲೊಳಗೆ ಹರಿಯುತ್ತಿದ್ದ ಕೃಷ್ಣೆ, ಇಂದು ಒಡಲು ತುಂಬಿದ್ದು, ನೀರಿನ ರಭಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆ ರಾಜ್ಯದ ಜನರ ನಿದ್ದೆಗೆಡಿಸಿದೆ. ಇತ್ತೀಚೆಗಷ್ಟೇ ಗಂಜಿ ಕೇಂದ್ರದಿಂದ ತಮ್ಮ ತಮ್ಮ ಗ್ರಾಮಗಳಿಗೆ ಮರಳಿರುವ ಜನರು ಮತ್ತೊಂದು ಪ್ರವಾಹದ ಆತಂಕದಲ್ಲಿ ಬದುಕುವಂತಾಗಿದೆ.

ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಕೃಷ್ಣೆ

ಹಿಪ್ಪರಗಿ ಜಲಾಶಯದಲ್ಲಿ ಶುಕ್ರವಾರದಂದು 1.06 ಲಕ್ಷ ಕ್ಯೂಸೆಕ್ ಒಳಹರಿವಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಒಟ್ಟು 531 ಮೀ. ಎತ್ತರವಿರುವ ಹಿಪ್ಪರಗಿ ಜಲಾಶಯದಲ್ಲಿ 522.4 ಮೀ.ನಷ್ಟು ನೀರಿನ ಪ್ರಮಾಣವಿದೆ. 525 ಮೀಟರ್​ ನಷ್ಟಾದರೆ ಮತ್ತೆ ಅಪಾಯದ ಮಟ್ಟ ಮೀರುವ ಸಾಧ್ಯತೆ ಇದೆ. ಇದೇ ಕಾರಣದಿಂದ ಜನತೆ ನದಿಯ ದಡದತ್ತ ಜಾನುವಾರುಗಳನ್ನು ಒಯ್ಯುವದು, ಬಟ್ಟೆ ಒಗೆಯುವುದು, ಸ್ನಾನಕ್ಕೆಂದು ತೆರಳದಂತೆ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ.

Intro:AnchorBody:
ಅಪಾಯಮಟ್ಟದಲ್ಲಿ ಹರಿಯುತ್ತಿರುವ ಕೃಷ್ಣೆ
*ನದಿ ದಡಕ್ಕೆ ಜನ-ಜಾನುವಾರುಗಳು ತೆರಳಬಾರದು

ಬಾಗಲಕೋಟೆ--ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ ಮತ್ತೇ ಜೋರಾಗಿರುವದರಿಂದ ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಕೃಷ್ಣೆಯು ಮತ್ತಷ್ಟು ಜೋರಾಗಿ ಹರಿಯುತ್ತಿದ್ದು ಮತ್ತೇ ಪ್ರವಾಹದ ಭೀತಿ ಎದುರಾಗಿದೆ.
         ಕಳೆದ 15 ದಿನಗಳಿಂದ ತನ್ನ ಒಡಲೊಳಗೆ ಹರಿಯುತ್ತಿದ್ದ ಕೃಷ್ಣೆ ಶುಕ್ರವಾರದಂದು ಒಡಲು ತುಂಬಿ ಹರಿಯುತ್ತಿದ್ದು, ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮತ್ತೆ ಮಳೆಯ ಅಬ್ಬರ ರಾಜ್ಯದ ಜನತೆಯ ನಿದ್ರೆ ಹಾಳು ಮಾಡುವಲ್ಲಿ ಕಾರಣವಾಗಿದ್ದು, ಇದೀಗಷ್ಟೇ ಕಾಳಜಿ ಕೇಂದ್ರದಿಂದ ತಮ್ಮ ತಮ್ಮ ಗ್ರಾಮಗಳಲ್ಲಿನ ಮನೆಗಳಿಗೆ ತೆರಳಿರುವ ಜನತೆ ಆತಂಕದಲ್ಲಿ ಬದುಕು ಸಾಗಿಸುವಲ್ಲಿ ಕಾರಣವಾಗಿದೆ.
         ಹಿಪ್ಪರಗಿ ಜಲಾಶಯದಲ್ಲಿ ಶುಕ್ರವಾರದಂದು ನೀರಿನ ಹರಿವಿನ ಪ್ರಮಾಣ 1.06 ಲಕ್ಷ ಕ್ಯುಸೆಕ್ಸ್ ಒಳಹರಿವಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಹಾಕಲಾಗುತ್ತಿದೆ.
         ಒಟ್ಟು 531 ಮೀ. ಎತ್ತರವಿರುವ ಹಿಪ್ಪರಗಿ ಜಲಾಶಯದಲ್ಲಿ 522.4 ಮೀ.ನಷ್ಟು ನೀರಿನ ಪ್ರಮಾಣವಿದ್ದು, 525 ಮೀ.ನಷ್ಟಾದರೆ ಮತ್ತೇ ಅಪಾಯದ ಮಟ್ಟ ಮೀರುವ ಸಾಧ್ಯತೆ ಹೆಚ್ಚಾಗಿದೆ.
         ಇದೇ ಕಾರಣದಿಂದ ಜನತೆ ನದಿಯದ ದಡದತ್ತ ಜಾನುವಾರುಗಳನ್ನು ಒಯ್ಯುವದು, ಬಟ್ಟೆ ಒಗೆಯುವದು, ಸ್ನಾನಕ್ಕೆಂದು ತೆರಳುವದನ್ನು ಮಾಡಬಾರದೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
Last Updated : Sep 6, 2019, 8:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.