ಬಾಗಲಕೋಟೆ: ಜಿಲ್ಲೆಯಲ್ಲಿ ಮಲ್ಲಪ್ರಭಾ ಹಾಗೂ ಘಟಪ್ರಭಾ ನದಿಯ ಅಬ್ಬರ ಕಡಿಮೆ ಆಗಿದ್ದು, ಕೃಷ್ಣ ನದಿಯ ಪ್ರವಾಹ ಮಾತ್ರ ಮುಂದುವರೆದಿದೆ .ಈ
ಕೃಷ್ಣಾ ನದಿ ಪ್ರವಾಹದ ಎಫೆಕ್ಟ್ನಿಂದ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸಮೀಪದ ರಸ್ತೆ ಸೇತುವೆ ಕೊಚ್ಚಿ ಹೋಗಿದೆ.
ಹುಬ್ಬಳ್ಳಿ-ವಿಜಯಪುರ ರಾಜ್ಯ ಹೆದ್ದಾರಿ-34 ರ ರಸ್ತೆ ಸೇತುವೆ ಇದಾಗಿದ್ದು, ಸುಮಾರು 48 ಅಡಿ ಎತ್ತರವಿದೆ. ಕಳೆದ ಹದಿನೈದು ದಿನಗಳಿಂದ ಪ್ರವಾಹದಲ್ಲಿ ಈ ಸೇತುವೆ ಮುಳುಗಿತ್ತು. ಇನ್ನೂ ಕೂಡ ನೀರಿನ ಹರಿವು ಕಡಿಮೆ ಆಗದ ಕಾರಣ ಸೇತುವೆ ಹಾಳಾಗಿದೆ. ಜಮಖಂಡಿ-ವಿಜಯಪುರ ಸಂಪರ್ಕದ ಈ ಮುಖ್ಯ ರಸ್ತೆ ನಿತ್ಯ ಸಾವಿರಾರು ವಾಹನ ಸಂಚರಿಸುವ ಮಾರ್ಗವಾಗಿತ್ತು.
ಜಮಖಂಡಿ ತಾಲೂಕಿನ 20 ಕ್ಕೂ ಹೆಚ್ಚು ಗ್ರಾಮಗಳಿಗೆ ಈ ಸೇತುವೆ ರಸ್ತೆ ಮೂಲಕವೇ ಬರಬೇಕು. ಪ್ರವಾಹದ ಹಿನ್ನೆಲೆ ಹದಿನೈದು ದಿನಗಳಿಂದ ಸಂಚಾರ ಬಂದ್ ಆಗಿತ್ತು. ಹೀಗಾಗಿ ವಿಜಯಪುರದಿಂದ ಧಾರವಾಡ ಹಾಗೂ ಬೆಳಗಾವಿ ಸಂಚಾರ ಮಾಡುವ ಮಾರ್ಗ ಬದಲಾವಣೆ ಮಾಡಲಾಗಿತ್ತು. ಪ್ರವಾಹ ನೀರು ಕಡಿಮೆ ಆದ ಬಳಿಕ ಸೇತುವೆಗೆ ಎಷ್ಟೊಂದು ಹಾನಿ ಆಗಿದೆ ಎಂಬುದು ತಿಳಿಯಲಿದೆ.