ETV Bharat / state

ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ; ಶಾಸಕ ಆನಂದ್​ ನ್ಯಾಮಗೌಡ ಪರಿಶೀಲನೆ

ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಉಂಟಾಗಿರುವ ಹಿನ್ನೆಲೆ, ಜಮಖಂಡಿ ಮತ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ,ಉಪವಿಭಾಗಾಧಿಕಾರಿ ವಿಕ್ರಮ್, ತಹಶಿಲ್ದಾರ್​ ಪ್ರಶಾಂತ ಚನಗೊಂಡ ಸೇರಿದಂತೆ ಇತರ ಅಧಿಕಾರಿಗಳು ಬೋಟ್​ನಲ್ಲಿ ತೆರಳಿ ಪರಿಶೀಲನೆ ನಡೆಸಿದರು.

ಕೃಷ್ಣ ನದಿಯಲ್ಲಿ ಪ್ರವಾಹ ಭೀತಿ ಹಿನ್ನೆಲೆ, ಪರಿಶೀಲನೆ ನಡೆಸಿದ ಶಾಸಕ ಆನಂದ್​ ನ್ಯಾಮಗೌಡ
author img

By

Published : Aug 3, 2019, 8:51 PM IST

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾ ನದಿಗೆ ಪ್ರವಾಹ ಭೀತಿ ಉಂಟಾಗಿರುವ ಹಿನ್ನೆಲೆ, ಜಮಖಂಡಿ ಮತ ಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ, ಉಪವಿಭಾಗಾಧಿಕಾರಿ ವಿಕ್ರಮ್, ತಹಶಿಲ್ದಾರ್​ ಪ್ರಶಾಂತ ಚನಗೊಂಡ ಸೇರಿದಂತೆ ಇತರ ಅಧಿಕಾರಿಗಳು ಬೋಟ್​ನಲ್ಲಿ ತೆರಳಿ ಪರಿಶೀಲನೆ ನಡೆಸಿದರು.

ಕೃಷ್ಣ ನದಿಯಲ್ಲಿ ಪ್ರವಾಹ ಭೀತಿ ಹಿನ್ನೆಲೆ, ಪರಿಶೀಲನೆ ನಡೆಸಿದ ಶಾಸಕ ಆನಂದ್​ ನ್ಯಾಮಗೌಡ

ಶಾಸಕರಾದ ಆನಂದ ನ್ಯಾಮಗೌಡ, ಬೋಟ್​ನಲ್ಲಿ ತೆರಳಿ ಮುಳುಗಡೆ ಭೀತಿ ಹೊಂದಿರುವ ಮುತ್ತೂರು, ಮೈಗೂರು ಹಾಗೂ ಕಂಕಣವಾಡಿ ಗ್ರಾಮದ ಉಂಟಾಗಿದ್ದ ಪ್ರವಾಹ ಸ್ಥಳಗಳನ್ನು ಪರೀಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕ ಆನಂದ ನ್ಯಾಮಗೌಡ, ಮಹಾರಾಷ್ಟ್ರ ರಾಜ್ಯದ ಕೊಯ್ನಾ ಜಲಾಶಯದಿಂದ 2.28 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಜಮಖಂಡಿ ತಾಲೂಕಿನ 20 ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆ ಭೀತಿ ಹೊಂದಿವೆ. ಈಗಾಗಲೇ ಕೆಲ ಗ್ರಾಮದಲ್ಲಿ ನಡುಗಡ್ಡೆ ಭೀತಿ ಇದೆ. ಸರ್ಕಾರದಿಂದ ತುರ್ತು ಪರಿಸ್ಥಿತಿ ನಿವಾರಿಸಲು ಈಗಾಗಲೇ 13 ಕೋಟಿ ರೂ ನೀಡಿದೆ. ಅಗತ್ಯ ಬಿದ್ದರೆ ಹೆಚ್ಚು ಪ್ರವಾಹ ಉಂಟಾದ ಗ್ರಾಮದ ಜನತೆಗೆ ಜಾನುವಾರ ಸ್ಥಳಾಂತರ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಬೋಟ್ ವ್ಯವಸ್ಥೆ, ಜನತೆಯ ಆರೋಗ್ಯದ ಬಗ್ಗೆ ಹಾಗೂ ತೊಂದರೆಗೆ ಒಳಗಾದ ಗ್ರಾಮದವರಿಗೆ 24*7 ಹೆಲ್ಪ್​ಲೈನ್ ವ್ಯವಸ್ಥೆ, ನೋಡಲ್ ಅಧಿಕಾರಿಗಳನ್ನು ಮತ್ತು 50 ಜನರ ನುರಿತ ಈಜುಗಾರರನ್ನು ನೇಮಿಸಲಾಗಿದೆ. ಪ್ರವಾಹ ಭೀತಿ ಹಿನ್ನೆಲೆ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

Intro:AnchorBody:ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾ ನದಿಗೆ ಪ್ರವಾಹ ಭೀತಿ ಉಂಟಾಗಿರುವ ಹಿನ್ನೆಲೆಯಲ್ಲಿ, ಜಮಖಂಡಿ ಮತಕ್ಷೇತ್ರದ ಶಾಸಕ ಆನಂದ ನ್ಯಾಮಗೌಡ,ಉಪವಿಭಾಗಾಧಿಕಾರಿ ಇಕ್ರಮ್,ತಹಶಿಲ್ದಾರ ಪ್ರಶಾಂತ ಚನಗೊಂಡ ಸೇರಿದಂತೆ ಇತರ ಅಧಿಕಾರಿಗಳು ಬೋಟ್ ದಲ್ಲಿ ತೆರಳಿ,ಜನರ ಸಮಸ್ಯೆ ಯನ್ನು ಆಲಿಸುವ ಮೂಲಕ ಗಮನ ಸೆಳೆದರು.
ಶಾಸಕರಾದ ಆನಂದ ನ್ಯಾಮಗೌಡ ಅವರು,ಸಾಮಾನ್ಯರಂತೆ ಬೋಟ್ ದಲ್ಲಿ ಸಂಚಾರ ಮಾಡಿ,ಮುಳಗಡೆ ಭೀತಿ ಹೊಂದಿರುವ ಮುತ್ತೂರು, ಮೈಗೂರು ಹಾಗೂ ಕಂಕಣವಾಡಿ ಗ್ರಾಮದ ಉಂಟಾಗಿದ್ದ ಪ್ರವಾಹ ಸ್ಥಳದಲ್ಲಿ ಸಂಚಾರ ಮಾಡಿ,ಪರಿಶೀಲನೆ ನಡೆಸಿದರು. ಬೋಟ್ ದಲ್ಲಿ ಅಧಿಕಾರಿಗಳು ಹಾಗೂ ಶಾಸಕರು ಸಾಮಾನ್ಯ ರಂತೆ ಕುಳಿತುಕೊಂಡು ಜನತೆಯ ಸಮಸ್ಯೆ ಆಲಿಸಿದರು.ಬರಿ ಕಾಲಿನಿಂದ ನೀರಿನಲ್ಲಿ ಸಂಚರಿಸಿ,ಪ್ರವಾಹ ಭೀತಿಯನ್ನು ಆಲಿಸಿದರು.ಈ ಸಂದರ್ಭದಲ್ಲಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ,ಮಹಾರಾಷ್ಟ್ರ ರಾಜ್ಯದ ಕೊಯನಾ ಜಲಾಶಯ ದಿಂದ 2.28 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು,ಜಮಖಂಡಿ ತಾಲೂಕಿನ 20 ಕ್ಕೂ ಹೆಚ್ಚು ಗ್ರಾಮಗಳು ಮುಳಗಡೆ ಭೀತಿ ಹೊಂದಿದೆ.ಈಗಾಗಲೇ ಕೆಲ ಗ್ರಾಮದಲ್ಲಿ ನಡುಗಡ್ಡೆ ಭೀತಿ ಹೊಂದಿದೆ.ಸರ್ಕಾರ ದಿಂದ ತುರ್ತು ಪರಿಸ್ಥಿತಿ ಗೆ ಈಗಾಗಲೇ 13 ಕೋಟಿ ಹಣ ನೀಡಿದೆ.ಅಗತ್ಯ ಬಿದ್ದರೆ,ಹೆಚ್ಚು ಪ್ರವಾಹ ಬಂದ ಗ್ರಾಮದ ಜನತೆಗೆ,ಜಾನುವಾರ ಸ್ಥಳಾಂತರ ಮಾಡಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಬೋಟ್ ವ್ಯವಸ್ಥೆ, ಜನತೆಯ ಆರೋಗ್ಯ ದ ಬಗ್ಗೆ ಹಾಗೂ ತೊಂದರೆಗೆ ಒಳಗಾದ ಗ್ರಾಮದವರಿಗೆ 24*7 ಹೇಲ್ಪ್ ಲೈನ್ ವ್ಯವಸ್ಥೆ, ನೋಡಲ್ ಅಧಿಕಾರಿಗಳನ್ನು ಮತ್ತು 50 ಜನರ ನುರಿತ ಈಜುಗಾರರನ್ನು ಸನ್ನದ್ದ ಮಾಡಲಾಗಿದೆ.ಪ್ರವಾಹ ಭೀತಿ ಹಿನ್ನೆಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಶಾಸಕರಾದ ಆನಂದ ನ್ಯಾಮಗೌಡ ಪ್ರವಾಹ ಭೀತಿಯನ್ನು ಅರಿತುಕೊಂಡು‌ ನೇರವಾಗಿ ಅಖಾಡಕ್ಕೆ ಇಳಿದು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವದು ಇತರ ಶಾಸಕರಿಗಿಂತ ಗಮನ ಸೆಳೆಯುವಂತಾಗಿದೆ.Conclusion:ಈ ಟಿವಿ,ಭಾರತ,ಬಾಗಲಕೋಟೆ..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.