ETV Bharat / state

ಕೋವಿಡ್-19 ಭೀತಿ ... ಗ್ರಾಮೀಣ ಟಾಸ್ಕ್​ಪೋರ್ಸ್ ತಂಡದಿಂದ ಜಾಗೃತಿ - ಗ್ರಾಮೀಣ ಟಾಸ್ಕ್​ಪೋರ್ಸ್ ತಂಡದಿಂದ ಜಾಗೃತಿ

ಗ್ರಾಮೀಣ ಟಾಸ್ಕ್​ಪೋರ್ಸ್ ತಂಡ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೊರ ರಾಜ್ಯ ಮತ್ತು ಬೇರೆ ಜಿಲ್ಲೆಗಳಿಂದ ಆಗಮಿಸುವರ ಬಗ್ಗೆ ಮಾಹಿತಿ ಪಡೆಯುವುದರ ಜೊತೆಗೆ ಗ್ರಾಮಕ್ಕೆ ಆಗಮಿಸಿದವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವ ಕಾರ್ಯವನ್ನು ಮಾಡುತ್ತಿವೆ ಎಂದು ಬಾಗಲಕೋಟೆ ಜಿಲ್ಲಾ ಪಂಚಾಯತ್​ ಸಿಇಓ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

Awareness from the Rural Task Force Team
ಗ್ರಾಮೀಣ ಟಾಸ್ಕ್​ಪೋರ್ಸ್ ತಂಡದಿಂದ ಜಾಗೃತಿ
author img

By

Published : Mar 27, 2020, 10:25 AM IST

ಬಾಗಲಕೋಟೆ: ಪ್ರತಿ ಗ್ರಾಮ ಮಟ್ಟದಲ್ಲಿ ರಚಿಸಲಾದ ಗ್ರಾಮೀಣ ಟಾಸ್ಕ್​ಪೋರ್ಸ್​ ತಂಡಗಳ ಮೂಲಕ ಕೊರೊನಾ ವೈರಸ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್​ ಸಿಇಓ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು ಗ್ರಾಮೀಣ ಟಾಸ್ಕ್​ಪೋರ್ಸ್ ತಂಡ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೊರ ರಾಜ್ಯ ಮತ್ತು ಬೇರೆ ಜಿಲ್ಲೆಗಳಿಂದ ಆಗಮಿಸುವರ ಬಗ್ಗೆ ಮಾಹಿತಿ ಪಡೆಯುವುದರ ಜೊತೆಗೆ ಗ್ರಾಮಕ್ಕೆ ಆಗಮಿಸಿದವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವ ಕಾರ್ಯವನ್ನು ಈ ತಂಡಗಳು ಮಾಡುತ್ತಿವೆ. ಗ್ರಾಮಗಳಲ್ಲಿನ ಅಗತ್ಯ ವಸ್ತುಗಳಾದ ಹಾಲು, ತರಕಾರಿ ಮತ್ತು ಕಿರಾಣಿ ಅಂಗಡಿಗಳಲ್ಲಿ ಜನರು ಅಂತರ ಕಾಯ್ದುಕೊಳ್ಳುವಂತೆ ಮಾಡಲಾಗುತ್ತಿದೆ. ಪ್ರತಿಯೊಂದು ಅಂಗಡಿಗಳ ಮುಂದೆ 3 ಅಡಿ ಅಂತರದಲ್ಲಿ ಮಾರ್ಕ್​ಗಳನ್ನು ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಗಂಭೀರತೆಯ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ಮೂಲಕ ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದಂತೆ ಪ್ರತಿ ಗ್ರಾಮಗಳ ಮನೆಗಳ ಬಾಗಿಲಿಗೆ ನೋಟಿಸ್ ಸಹ ಅಂಟಿಸಲಾಗುತ್ತಿದೆ. ಈಗಾಗಲೇ ಚಿಕನಾಳ, ಕ್ಯಾದಿಗ್ಗೇರಿ, ಸೂಳಿಕೇರಿ, ಸುನಗ,
ಕಲಾದಗಿ, ಗದ್ದನಕೇರಿ ಕ್ರಾಸ್, ಆನದಿನ್ನಿ ಕ್ರಾಸ್, ಮರೋಳ, ಗಲಗಲಿ, ಮೆಳ್ಳಿಗೇರಿ, ಕುಳಲಿ, ಅಂಕಲಗಿ,ಚೊಳಚಗುಡ್ಡ, ಮುರಡಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ, ಪೌಡರ ಸಿಂಪರಣೆ ಹಾಗೂ ಫಾಗಿಂಗ್ ಕಾರ್ಯವನ್ನು ಸಹ ಮಾಡಲಾಗುತ್ತಿದೆ ಎಂದಿದ್ದಾರೆ.

ಹುನಗುಂದ ತಾಲೂಕಿನ ಮುರಗಡಿ ಗ್ರಾಮಕ್ಕೆ ಬೆಂಗಳೂರು ಮತ್ತು ಮಂಗಳೂರಿನಿಂದ ಆಗಮಿಸಿದವರನ್ನು ಟಾಸ್ಕ್​ಪೋರ್ಸ್ ತಂಡದಿಂದ ಪ್ರತಿಯೊಬ್ಬರನ್ನು ಸಮೀಪದ ಗುಡೂರ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಯಿತು. ಅಂಕಲಗಿ ಗ್ರಾಮಗಳಲ್ಲಿ ಗುಂಪು ಗುಂಪಾಗಿ ಕುಳಿತವರನ್ನು ಮನೆಗಳಲ್ಲಿ ಇರುವಂತೆ ಅರಿವು ಮೂಡಿಸಲಾಯಿತು ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.