ETV Bharat / state

ಬಾಗಲಕೋಟೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮರ 241ನೇ ಜಯಂತ್ಯುತ್ಸವ.. - Kittur Chennamma Jayanthi at Srinivasa Kalyana Mantapa Bagalkot

ಬಾಗಲಕೋಟೆ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘಟನೆ ವತಿಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮರ 241ನೇ ಜಯಂತೋತ್ಸವ ಸಮಾರಂಭ ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಕಿತ್ತೂರು ರಾಣಿ ಚೆನ್ನಮ್ಮರ 241ನೇ ಜಯಂತೋತ್ಸವ ನಡೆಯಿತು
author img

By

Published : Nov 24, 2019, 5:08 PM IST

ಬಾಗಲಕೋಟೆ: ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘಟನೆ ವತಿಯಿಂದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮರ 241ನೇ ಜಯಂತೋತ್ಸವ ಸಮಾರಂಭ ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಚೆನ್ನಮ್ಮರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ವಿವಿಧ ವಾದ್ಯಗೋಷ್ಠಿಗಳ ಜೊತೆಗೆ ನೂರಾ ಒಂದು ಕುಂಭಮೇಳ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಬಳಿಕ ಯೋಗ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಜ್ಯೋತಿ ಬೆಳೆಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ವಿಜಯಪುರ ಶಾಸಕ ಬಸವರಾಜ ಪಾಟೀಲ ಯತ್ನಾಳ ಮಾತನಾಡಿ, ಪಂಚಮಸಾಲಿ ಜನಾಂಗದವರು ಅಧಿಕಾರ ಮತ್ತು ಹಣಕ್ಕೆ ಹೆಚ್ಚು ಒತ್ತು ನೀಡುವುದಿಲ್ಲ. ಇತರ ಸಮಾಜದವರ ಅಭಿವೃದ್ಧಿಗೂ ಶ್ರಮಿಸುತ್ತಾರೆ. ಯಾವುದೇ ಅಪಸ್ವರಗಳ ಬಗ್ಗೆ ಗಮನ ಹರಿಸದೆ ಅಭಿವೃದ್ಧಿಗೆ ಒತ್ತು ನೀಡುವುದೇ ನಮ್ಮ ಕಾಯಕವಾಗಿದೆ. ಆಲಮಟ್ಟಿ ಜಲಾಶಯ ಹಿನ್ನೀರಿನಿಂದ‌ ಮುಳುಗಡೆಯಾಗುವ ಗ್ರಾಮಗಳ ಅಭಿವೃದ್ಧಿಪಡಿಸಲು ಹಾಗೂ ಪರಿಹಾರ ಧನ‌‌ ನೀಡುವಂತೆ ಆಗ್ರಹಿಸಿ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು‌ ಮುಂದಾಗಿದ್ದೆ ಎಂದು ತಿಳಿಸಿದರು.

ಬೀಳಗಿ ಶಾಸಕ ಮುರಗೇಶ್​ ನಿರಾಣಿ ಮಾತನಾಡಿ, ಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಯೋಗ ಗುರು ಶ್ರೀ ವಚನಾನಂದ ಸ್ವಾಮೀಜಿಯವರ ಆದರ್ಶವನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಸಮಾಜದ ಯುವ ಜನತೆಗೆ ಅವರು ಮಾದರಿಯಾಗಿದ್ದಾರೆ ಎಂದು ಎಂದರು.

Intro:AnchorBody:ಬಾಗಲಕೋಟೆ-- ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘಟನೆ ಯಿಂದ ವೀರರಾಣಿ ಕಿತ್ತೂರ ಚನ್ನಮ್ಮಾರವರ 241 ಜಯಂತೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭ ಅಂಗವಾಗಿ ಚನ್ನಮ್ಮಾರವರ ಭಾವ ಚಿತ್ರದ ಮೆರವಣಿಗೆ ನಡೆಸಲಾಯಿತು. ವಿವಿಧ ವಾದ್ಯಗೋಷ್ಠಿ ಗಳ ಜೊತೆಗೆ ಒಂದನೂರು ಒಂದು ಕುಂಭ ಮೇಳ ಹೊತ್ತ ಮಹಿಳೆಯರು ಭಾಗವಹಿಸಿದ್ದರು. ನಂತರ ನಡೆದ ಸಮಾರಂಭದಲ್ಲಿ ಯೋಗ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಜ್ಯೋತಿ ಬೆಳೆಗಿಸುವ ಮೂಲಕ ಚಾಲನೆ ನೀಡಿದರು.
ಇದೇ ಸಮಯದಲ್ಲಿ ವಿಜಯಪುರ ಶಾಸಕ ಬಸವರಾಜ ಪಾಟೀಲ ಯತ್ನಾಳ ಮಾತನಾಡಿ,ಪಂಚಮಸಾಲಿ ಜನಾಂಗದವರು ಅಧಿಕಾರ ಹಾಗೂ ಹಣಕ್ಕಾಗಿ ಹೆಚ್ಚು ಒತ್ತು ನೀಡುವುದಿಲ್ಲ.ಇತರ ಸಮಾಜದವರ ಅಭಿವೃದ್ಧಿ ಗೂ ಶ್ರಮಿಸುತ್ತಾರೆ.ಈ ಹಿನ್ನೆಲೆ ರಾಜಕೀಯ ವಾಗಿ ಎಂತಹ ಹೇಳಿಕೆ ನೀಡಲು ಮುಂದಾಗಿರುತ್ತೇನೆ.ಆದರೆ ಇದಕ್ಕೆ ಕೆಲವರು ಅಪಸ್ವರ ವ್ಯಕ್ತಪಡಿಸಿದರು ಅದರ ಬಗ್ಗೆ ಗಮನ ಹರಿಸದೆ ಅಭಿವೃದ್ಧಿ ಗೆ ಹೆಚ್ಚು ಒತ್ತು ನೀಡುವುದೇ ನಮ್ಮ ಕಾಯಕವಾಗಿದೆ ಎಂದು ತಿಳಿಸಿದ ಯತ್ನಾಳ,ಆಲಮಟ್ಟಿ ಜಲಾಶಯ ಹಿನ್ನೀರಿನಿಂದ‌ ಮುಳಗಡೆ ಆಗುವ ಗ್ರಾಮಗಳ ಅಭಿವೃದ್ಧಿ ಹಾಗೂ ಪರಿಹಾರ ಧನ‌‌ ನೀಡುವಂತೆ ಅಟಲ್ ಬಿಹಾರಿ ವಾಜಪೇಯಿ ಅವರು, ಪ್ರಧಾನಿ ಇದ್ದಾಗಲೇ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಲು‌ ಮುಂದಾಗಿದ್ದೆ ಎಂದು ತಿಳಿಸಿದರು.
ಈ ಸಮಯದಲ್ಲಿ ಬೀಳಗಿ ಶಾಸಕರಾದ ಮುರಗೇಶ ನಿರಾಣಿ ಮಾತನಾಡಿ,ವಿಶ್ವದಲ್ಲೇ ಯೋಗವನ್ನು ಬಗ್ಗೆ ಜಾಗೃತಿ ಮೂಡಿಸುತ್ತಿರುವ ಯೋಗ ಗುರು ಶ್ರೀ ವಚನಾನಂದ ಸ್ವಾಮೀಜಿಯವರು ಆದರ್ಶ ವನ್ನು ಬೆಳೆಸಿಕೊಳ್ಳಬೇಕಾಗಿದೆ.ನಮ್ಮ ಸಮಾಜದ ಯುವ ಜನತೆಗೆ ಅವರು ಮಾದರಿಯಾಗಿದ್ದಾರೆ ಎಂದು ತಿಳಿಸಿದರು. ಇದೇ ಸಮಯದಲ್ಲಿ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿಕೊಂಡ ಯೋಗ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ,ಇಂದಿನ ಯು ಪೀಳಿಗೆ ದುಶ್ಚಟದಿಂದ ದೂರಾಗಿ ಯೋಗದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು...

ಬೈಟ್--- ಬಸವನಗೌಡ ಪಾಟೀಲ್ ಯತ್ನಾಳ( ಶಾಸಕರು)
ಬೈಟ್-- ಮುರಗೇಶ ನಿರಾಣಿ( ಶಾಸಕರು).Conclusion:ಈ ಟಿವಿ,ಭಾರತ,ಬಾಗಲಕೋಟೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.