ETV Bharat / state

ಬೆಳೆಯುತ್ತಿದೆ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ: ಉಮಾಶ್ರೀಗೆ ಸಿಗುತ್ತಾ ತೇರದಾಳ ಟಿಕೆಟ್​?

author img

By

Published : Nov 25, 2022, 9:33 AM IST

ಕಾಂಗ್ರೆಸ್​ನಲ್ಲಿ ತೇರದಾಳ ವಿಧಾನಸಭೆ ಕ್ಷೇತ್ರಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರ ಜೊತೆಗೆ ಈ ಬಾರಿ ಸ್ಥಳೀಯರಿಗೆ ಟಿಕೆಟ್​ ನೀಡಬೇಕು ಎಂಬ ಕೂಗು ಕೂಡ ಜೋರಾಗಿದೆ.

Actress Umashree
ನಟಿ ಉಮಾಶ್ರೀ

ಬಾಗಲಕೋಟೆ: ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮೊದಲನೇಯ ಕ್ಷೇತ್ರ ಮಾಜಿ ಸಿದ್ದರಾಮಯ್ಯ ಅವರು ಸ್ಪರ್ಧಿಸಿರುವ ಬಾದಾಮಿಯಾದರೆ, ಎರಡನೇಯ ಕ್ಷೇತ್ರ ತೇರದಾಳ. ಯಾಕೆಂದರೆ ಚಿತ್ರನಟಿ ಉಮಾಶ್ರೀ ಅವರು ಬೆಂಗಳೂರಿನಿಂದ ತೇರದಾಳಕ್ಕೆ ಬಂದು ಸ್ಪರ್ಧಿಸಿ ಗೆದ್ದು, ಸಚಿವೆಯಾಗಿ ಕೆಲಸ ಮಾಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡ ಉಮಾಶ್ರೀ ಅವರಿಗೆ ಈ ಬಾರಿ ತಮ್ಮ ಪಕ್ಷದವರಿಂದಲೇ ಕಂಟಕ ಇದ್ದಂತಿದೆ. ಈ ಮತಕ್ಷೇತ್ರದಿಂದ ಕೆಪಿಸಿಸಿಗೆ ಆಕಾಂಕ್ಷಿ ಅಭ್ಯರ್ಥಿಗಳಾಗಿ 12 ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಉಮಾಶ್ರೀ, ಸಿದ್ದು ಕೊಣ್ಣೂರ, ಡಾ. ದಾನಿಗೊಂಡ, ಡಾ. ದಡ್ಡೇನವರ, ಶ್ರೀಶೈಲ್ ದಳವಾಯಿ ಸೇರಿದಂತೆ ಇತರ ಹಲವರು ಅರ್ಜಿ ಸಲ್ಲಿಸಿದ ಪ್ರಮುಖರು. ಬಿಜೆಪಿ ಯಲ್ಲಿಯೂ ಈಗಿನ ಶಾಸಕರಾದ ಸಿದ್ದು ಸವದಿ ಸೇರಿದಂತೆ ಮನೋಹರ ಶಿರೋಳ, ಭೀಮಸಿ ಮುಗದುಮ ಸೇರಿದಂತೆ ಇತರರು ಸಾಲಿನಲ್ಲಿದ್ದಾರೆ.

ಸ್ಥಳೀಯರಿಗೆ ಅವಕಾಶ ನೀಡುವಂತೆ ಒತ್ತಾಯ: ಬಿಜೆಪಿಯಲ್ಲಿ ಅಷ್ಟೊಂದು ಸ್ಪರ್ಧೆ ಇಲ್ಲವಾದರೂ ಕಾಂಗ್ರೆಸ್ ಪಕ್ಷದ ಒಳ ಜಗಳದಿಂದಾಗಿ ಮತ್ತೆ ಈ ಬಾರಿ ಕೇಸರಿ ಪಕ್ಷಕ್ಕೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಉಮಾಶ್ರೀ ತೇರದಾಳ ಕ್ಷೇತ್ರದವರಲ್ಲ, ಬೆಂಗಳೂರಿನಿಂದ ಬಂದವರು. ಹೀಗಾಗಿ, ಈ ಬಾರಿ ಸ್ಥಳೀಯರಿಗೆ ಅವಕಾಶ ನೀಡಬೇಕೆನ್ನುವ ಕೂಗು ಜೋರಾಗಿದೆ. ಇದು ಉಮಾಶ್ರೀ ಸೇರಿದಂತೆ ಇತರ ಆಕಾಂಕ್ಷಿ ಅಭ್ಯರ್ಥಿಗಳಿಗೂ ಬಿಸಿ ತುಪ್ಪವಾಗಿದೆ.

ಉಮಾಶ್ರೀ ಸಚಿವರಾದ ಸಮಯದಲ್ಲಿ ಕ್ಷೇತ್ರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಆದರೆ ತಮ್ಮ ಪುತ್ರನ ಮೂಲಕ ವ್ಯವಹಾರ ಮಾಡುತ್ತಿರುವ ಬಗ್ಗೆ ಆಕ್ರೋಶ ಉಂಟಾಗಿ ಕಳೆದ ವಿಧಾನ ಸಭೆಯಲ್ಲಿ ಸೋಲು ಅನುಭವಿಸುವಂತಾಯಿತು. ಈಗ ಮತ್ತೆ ಆಕಾಂಕ್ಷಿಯಾಗಿರುವ ಉಮಾಶ್ರೀ ಅವರಿಗೆ ಸ್ಥಳೀಯರ ಸಮಸ್ಯೆಗಳೂ ಹೆಚ್ಚಾಗಿದೆ. ಕಳೆದ ಚುನಾವಣೆಗಿಂತಲೂ ಈ ಸಲ ಹೆಚ್ಚಿನ ಆಕಾಂಕ್ಷಿಗಳು ಒಂದಾಗಿ ಸ್ಥಳೀಯರಿಗೆ ಆದ್ಯತೆ ನೀಡವಂತೆ ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ ಸೇರಿದಂತೆ ಇತರರ ಗಮನಕ್ಕೆ ತಂದಿದ್ದಾರೆ.

ಬಿಜೆಪಿಗೆ ಪ್ಲಸ್​ ಆಗುವ ನಿರೀಕ್ಷೆ: ತೇರದಾಳ ಕ್ಷೇತ್ರದಲ್ಲಿ ತೇರದಾಳ, ರಬಕವಿ, ಬನ್ನಹಟ್ಟಿ ಹಾಗೂ ಮಹಾಲಿಂಗಪುರ ಪಟ್ಟಣಗಳು ಪ್ರಮುಖವಾಗಿ ಬರಲಿದ್ದು, ಇತರ ಕೆಲ ಗ್ರಾಮೀಣ ಪ್ರದೇಶಗಳೂ ಇವೆ. ಬಿಜೆಪಿಯಲ್ಲಿ ಸ್ಥಳೀಯರಿಗೆ ಟಿಕೆಟ್‌ ನೀಡಬೇಕೆಂಬ ಒತ್ತಾಯದ ಕೂಗಿಲ್ಲ. ಈಗಿನ ಶಾಸಕ ಸಿದ್ದು ಸವದಿ ಅವರೇ ಆಕಾಂಕ್ಷಿಯಾಗಿದ್ದು, ಅವರ ನಂತರ ಮನೋಹರ ಶಿರೋಳ ಎರಡನೇಯ ಆಕಾಂಕ್ಷಿ ಅಭ್ಯರ್ಥಿಯಾಗಿದ್ದಾರೆ.

ಸಿದ್ದು ಸವದಿ ಅವರ ಪ್ರಭಾವ ಕ್ಷೇತ್ರದಲ್ಲಿ ಕಡಿಮೆ ಆಗಿದ್ದು, ವಿರೋಧ ಹೆಚ್ಚಾಗುತ್ತಿದೆ. ಇತ್ತೀಚಿಗೆ ನೇಕಾರರ ಜೊತೆಗೆ ಹಾಗೂ ಪುರಸಭೆಯ ಅಧ್ಯಕ್ಷ ಆಯ್ಕೆ ವಿಷಯದಲ್ಲಿ ಹಾಗೂ ಇತರ ಚಿಕ್ಕಪುಟ್ಟ ವಿಷಯದಲ್ಲಿ ಅವರು ವಿವಾದ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್​ಗೆ ಪ್ಲಸ್ ಆಗುವ ನಿರೀಕ್ಷೆ ಇತ್ತು. ಆದರೆ ಕಾಂಗ್ರೆಸ್ ‌ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿ ಒಳ ಜಗಳದಿಂದಾಗಿ ಬಿಜೆಪಿಗೆ ಅನುಕೂಲ​ ಆಗಲಿದೆ ಎನ್ನುವ ಮಾತುಗಳಿವೆ. ತೇರದಾಳ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಹವಾ ಇಲ್ಲ, ಆದರೆ ಯಾರಾದರೂ ಸ್ಪರ್ಧೆ ಮಾಡಿದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗುತ್ತದೆ.

ಇದನ್ನೂ ಓದಿ: ಕುಮಟಾದಲ್ಲಿ ಕಾಂಗ್ರೆಸ್ ಜಾಗೃತಿ ಸಮಾವೇಶ: ಕೈ ತಪ್ಪಿರುವ ಕ್ಷೇತ್ರಗಳ ಮರಳಿ ಪಡೆಯಲು ಯತ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.