ಬ್ಯಾಂಕ್ನಲ್ಲಿ ಹಣ ಡ್ರಾ ಮಾಡುವವರೇ ಇವರ ಟಾರ್ಗೆಟ್ : ಅಂತಾರಾಜ್ಯ ದರೋಡೆಕೋರರ ಬಂಧನ - ಬಾಗಲಕೋಟೆ ಕ್ರೈಂ ಸುದ್ದಿ
ಆಂಧ್ರಪ್ರದೇಶ ಮೂಲದವರ ದರೋಡೆಕೋರರಿಂದ ನಗದು ಹಾಗೂ ಆಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಹುನಗುಂದ ವೃತ್ತದ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಿಂದಾಗಿ ಕಳ್ಳರ ಬಂಧನವಾಗಿದೆ..

ಬಾಗಲಕೋಟೆ : ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿಕೊಂಡು ಹೋಗುವವರ ಗಮನವನ್ನು ಬೇರೆಡೆಗೆ ಸೆಳೆದು ದರೋಡೆ ಮಾಡುತ್ತಿದ್ದ ಹಾಗೂ ಮನೆ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಬಂಧನ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ ತಿಳಿಸಿದ್ದಾರೆ.
ಒಟ್ಟು 10 ಆರೋಪಿಗಳಿದ್ದ ಕಳ್ಳತನದ ಗ್ಯಾಂಗ್ ಅನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಒಟ್ಟು 6 ಕಡೆ ಪ್ರಕರಣ ದಾಖಲಾಗಿದ್ದು, ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ 38 ಕೇಸ್ಗಳು ಈ ದರೋಡೆಕೋರರ ಮೇಲಿವೆ.
ಬಂಧಿತ ಆರೋಪಿಗಳಿಂದ ಒಟ್ಟು 37.55 ಲಕ್ಷ ಹಣ ಹಾಗೂ 3.45 ಲಕ್ಷದ 59 ಗ್ರಾಂ ಬಂಗಾರದ ಆಭರಣಗಳನ್ನೊಳಗೊಂಡಂತೆ ಒಟ್ಟು 41 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆಂಧ್ರಪ್ರದೇಶ ಮೂಲದವರ ದರೋಡೆಕೋರರಿಂದ ನಗದು ಹಾಗೂ ಆಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಹುನಗುಂದ ವೃತ್ತದ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಿಂದಾಗಿ ಕಳ್ಳರ ಬಂಧನವಾಗಿದೆ. ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಲೋಕೇಶ್ ಜಗಲಸಾರ ₹50 ಸಾವಿರ ನಗದು ಬಹುಮಾನ ನೀಡುವ ಮೂಲಕ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.