ಬಾಗಲಕೋಟೆ: ದೀಪಾವಳಿ ಹಬ್ಬದ ಅಂಗವಾಗಿ ವೀರಾಪೂರ ಗ್ರಾಮದಲ್ಲಿ ಸ್ಥಳೀಯ ಯುವಕ ಮಂಡಳಿ ವತಿಯಿಂದ ಅಂತಾರಾಜ್ಯ ಮಟ್ಟದ 58 ಕೆಜಿ ವಿಭಾಗದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು.
ದಕ್ಷಿಣ ಕನ್ನಡ, ಸುಳ್ಯ, ದಾವಣಗೆರೆ, ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಮಹಾರಾಷ್ಟ್ರದ ಕೊಲ್ಲಾಪುರ, ಪುಣೆ, ಸಾಂಗ್ಲಿಯಿಂದ ಕಬಡ್ಡಿ ಕ್ರೀಡಾಪಟುಗಳು ಭಾಗವಹಿಸಿದ್ದರು.
ಹಗಲು-ರಾತ್ರಿ ನಡೆಯುವ ಈ ಪಂದ್ಯಾವಳಿಗೆ 50ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ 15,001 ರೂ., ದ್ವಿತೀಯ ಬಹುಮಾನ 10,001, ತೃತೀಯ ಬಹುಮಾನ 7001 ಹಾಗೂ ನಾಲ್ಕನೇ ಬಹುಮಾನ 5001 ರೂ. ಮತ್ತು ಟ್ರೋಫಿ ಇಡಲಾಗಿದೆ.