ETV Bharat / state

ಜಮಖಂಡಿಯಲ್ಲಿ ಅಕ್ರಮವಾಗಿ ಕೆಂಪು ಮಣ್ಣು ಸಾಗಾಟ ಆರೋಪ - Illegal sand shipping

ಜಂಬಗಿ ಸೇತುವೆಯಿಂದ ಅಕ್ರಮವಾಗಿ ಕೆಂಪು ಮಣ್ಣು ಸಾಗಾಟ ಮಾಡಲಾಗುತ್ತಿದೆ ಎಂದು ಅಲ್ಲಿನ ಸ್ಥಳೀಯರು ಆರೋಪ ಮಾಡಿದ್ದಾರೆ.

Illegal sand shipping in Bagalakot
ಮರಳು
author img

By

Published : May 28, 2020, 1:00 PM IST

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಪಟ್ಟಣದ ಬಳಿಯ ಜಂಬಗಿ ಸೇತುವೆಯಿಂದ ಅಕ್ರಮವಾಗಿ ಕೆಂಪು ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

ಜಮಖಂಡಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಇಟ್ಟಂಗಿ ಭಟ್ಟಿ ತಯಾರಿಸುವ ಕೇಂದ್ರಗಳಿವೆ. ಕೃಷ್ಣಾ ನದಿಯ ದಂಡೆ ಮೇಲಿರುವ ಕಪ್ಪು ಮಿಶ್ರಿತ ಮಣ್ಣನ್ನು ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೆಂಪು ಮಣ್ಣು

ಅಧಿಕಾರಿಗಳೇ ಶಾಮೀಲಾಗಿರುವ ಕಾರಣ ಈ ಕಾರ್ಯ ನಡೆಯುತ್ತಿದೆ. ಬೇಸಿಗೆ ಸಮಯದಲ್ಲಿ ನೀರು ಕಡಿಮೆಯಾದ ಬಳಿಕ ಪ್ರತಿ ವರ್ಷ ಹೀಗೆ ಅಕ್ರಮವಾಗಿ ಮಣ್ಣು ತೆಗೆದುಕೊಂಡು ಹೋಗಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.