ETV Bharat / state

ವಿಧಾನಸಭೆ ಚುನಾವಣೆ ವೇಳೆ ಹಾವು-ಮುಂಗುಸಿ... ಲೋಕ ಸಮರಕ್ಕೆ ಒಂದಾದ ಮುಖಂಡರು! - alliance

ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಬದ್ಧ ವೈರಿಗಳಾಗಿದ್ದ ನಾಯಕರು ಇಂದು ಮೈತ್ರಿ ಸರ್ಕಾರದ ಪ್ರತಿಫಲದಿಂದ ಮಿತ್ರರಾಗಿ ಭರ್ಜರಿಯಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ.

ಮೈತ್ರಿ ಪತ್ರಿಕಾಗೋಷ್ಠಿ
author img

By

Published : Mar 30, 2019, 5:45 PM IST

ಬಾಗಲಕೋಟೆ: ವಿಧಾನಸಭೆ ಚುನಾವಣೆಯಲ್ಲಿ ಹಾವು, ಮುಂಗಸಿಯಾಗಿದ್ದ ವಿಜಯಾನಂದ ಕಾಶಪ್ಪನವರ ಮತ್ತು ಎಸ್.ಆರ್.ನವಲಿ ಹೀರೆಮಠ ಸದ್ಯ ಮೈತ್ರಿ ಸರ್ಕಾರದ ಆಡಳಿತದಲ್ಲಿ ಮಿತ್ರರಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಮೈತ್ರಿ ಅಭ್ಯರ್ಥಿಯಾಗಿದ್ದು ಈ ಬೆಳವಣಿಗೆಗೆ ಕಾರಣವಾಗಿದೆ.

ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ವಿಜಯಾನಂದಗೆ ಎಸ್.ಆರ್.ನವಲಿ ಹೀರೆಮಠ ಸವಾಲ್ ಎಸೆದಿದ್ದರು. ಸದ್ಯ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯಾನಂದಗೆ ಜೆಡಿಎಸ್ ಸಹಕಾರ ಅನಿವಾರ್ಯ ಮತ್ತು ಗೆಲವಿನ ತಂತ್ರ ರೂಪಿಸಲು ನವಲಿ ಹೀರೆಮಠ ಸಹಕಾರ ಅಗತ್ಯವಿದೆ.

ಮೈತ್ರಿ ಪಕ್ಷದ ಪತ್ರಿಕಾಗೋಷ್ಠಿ

ಸದ್ಯ ಶತ್ರುಗಳು ಮಿತ್ರರಾಗಿ ಒಂದೇ ವೇದಿಕೆ ಹಂಚಿಕೊಂಡು ಜಂಟಿ ಪ್ರತಿಕಾಗೋಷ್ಠಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆ. ನಮ್ಮ ಮುಖಂಡರ ಮಾರ್ಗದರ್ಶನ ಹಾಗೂ ಸಲಹೆಯಿಂದಾಗಿ ಜೆಡಿಎಸ್-ಕಾಂಗ್ರೆಸ್ ಒಗ್ಗಟಾಗಿ ಚುನಾವಣೆ ಮಾಡುತ್ತಿದ್ದೇವೆ. ಈ ಹಿಂದೆ ನಡೆದ ಘಟನೆಗಳನ್ನು ಮರೆತು ಕಾಂಗ್ರೆಸ್ ಪಕ್ಷದ ಗೆಲವಿಗೆ ಶ್ರಮಿಸುತ್ತಿರುವುದಾಗಿ ತಿಳಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್.ನವಲಿ ಹೀರೆಮಠ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತಿದ್ದು, ಸಮ್ಮಿಶ್ರ ಸರ್ಕಾರ ರಚನೆ ಆದ ನಂತರ ಲೋಕಸಭಾ ಚುನಾವಣೆಗೆ ಜಂಟಿಯಾಗಿ ಕೆಲಸ ಮಾಡಲಾಗುತ್ತಿದೆ. ಈ ಹಿನ್ನೆಲೆ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ - ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ವೀಣಾ ಕಾಶಪ್ಪನವರ ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

Intro:Anchor

Body:ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಬದ್ದ ವೈರಿಗಳಾಗಿದ್ದರು.ಈಗಿನ ಲೋಕಸಭಾ ಚುನಾವಣೆಯಲ್ಲಿ ದೋಸ್ತಿ.ರಾಜಕೀಯ ದಲ್ಲಿ ಯಾರೋ ಶತ್ರುಗಳು ಅಲ್ಲ,ಮಿತ್ರರು ಅಲ್ಲ ಎಂಬ ವ್ಯಾಕ್ತ ಮತ್ತೆ ನಿಜವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಜರುಗಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹುನಗುಂದ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿಜಯಾನಂದ ಕಾಶಪ್ಪನವರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಎಸ್ ಆರ್ ನವಲಿಹೀರೆಮಠ ಪ್ರಮುಖ ಪತ್ರಿಸ್ಪರ್ಧೆ ಆಗಿ,ಬದ್ದ ವೈರಿಯಂತೆ ವಾಕ್ಸಮರ್ ನಡೆಸಿದ್ದರು. ವಿಜಯಾನಂದ ಕಾಶಪ್ಪನವರ ಸೋಲಿಗೆ ಪಕ್ಷೇತರ ಅಭ್ಯರ್ಥಿ ನವಲಿಹೀರೆಮಠ ಅವರೇ ಕಾರಣ ಆಗಿದ್ದರು.ಅಂದು ಬದ್ದ ವೈರಿ ಆಗಿದ್ದರು.ಇಂದು ದೋಸ್ತಿ ಆಗುವ ಸ್ಥಿತಿ ನಿರ್ಮಾಣ ವಾಗಿದೆ.ಏಕೆಂದರೆ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಸ್ಪರ್ಧೆ ಗೆ ಮಾಡುತ್ತಿರುವುದರಿಂದ ಸಮಿಶ್ರ ಸರ್ಕಾರದ ಜಂಟಿ ಅಭ್ಯರ್ಥಿಯಾಗಿದ್ದಾರೆ.ಈ ಹಿನ್ನಲೆ ಆಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಎಸ್. ಆರ್.ನವಲಿಹೀರೆಮಠ ಈಗ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದಾರೆ.ಅವರ ಸಹಕಾರ ದಿಂದ ಚುನಾವಣೆ ಗೆ ಹೋಗುವುದು ಅನಿವಾರ್ಯ ಆಗಿದ್ದರಿಂದ ಮತ್ತು ಗೆಲವು ತಂತ್ರ ರೂಪಿಸಲು ನವಲಿಹೀರೆಮಠ ಸಹಕಾರ ಅಗತ್ಯವಿದೆ.ಈ ಹಿನ್ನೆಲೆಯಲ್ಲಿ ವೈರಿಗಳಾಗಿದ್ದವರು.ಈಗ ದೋಸ್ತಿಗಳಾಗಿ ಒಂದೇ ವೇದಿಕೆ ಹಂಚಿಕೊಂಡು ಜಂಟಿ ಪ್ರತಿಕಾಗೋಷ್ಟಿ ನಡೆಸುವ ಮೂಲಕ ಸಮಿಶ್ರ ಪಕ್ಷದ ಅಭ್ಯರ್ಥಿ ಎಂದು ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ,ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ಸಮಿಶ್ರ ಸರ್ಕಾರ ಆಡಳಿತ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಮುಖಂಡರು ಮಾರ್ಗದರ್ಶನ ಹಾಗೂ ಸಲಹೆ ಯಿಂದಾಗಿ ಜೆಡಿಎಸ್- ಕಾಂಗ್ರೆಸ್ ಒಗ್ಗಟಾಗಿ ಚುನಾವಣೆ ಮಾಡುತ್ತಿದ್ದೇವೆ.ರಾಜಕೀಯ ದಲ್ಲಿ ಸ್ವಲ್ಪ ತಿಳುವಳಿಕೆ ಕಡಿಮೆ ಇದ್ದು,ಹಿರಿಯರ ಮಾರ್ಗ ದರ್ಶನ ದಲ್ಲಿ ಮುಂದೆ ನಡೆಯುತ್ತಿದ್ದೇವೆ.ರಾಜಕೀಯ ದಲ್ಲಿ ಯಾರೂ ಶತ್ರು ಇಲ್ಲಾ,ಮಿತ್ರರೂ ಇಲ್ಲ ಎಂಬಂತೆ ಹಿಂದೆ ನಡೆದ ಘಟನೆಗಳು ಮೆರತು ಒಗ್ಗಟಾಗಿ ಈ ಭಾರಿ ಕಾಂಗ್ರೆಸ್ ಪಕ್ಷದ ಗೆಲವಿಗೆ ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್.ನವಲಿಹೀರೆಮಠ ಮಾತನಾಡಿ,ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನ ದಲ್ಲಿ ನಡೆಯುತ್ತಿದ್ದು, ಸಮಿಶ್ರ ಸರ್ಕಾರದ ರಚನೆ ಆದ ನಂತರ ಲೋಕಸಭಾ ಚುನಾವಣೆ ಯು ಜಂಟಿಯಾಗಿ ಕಾರ್ಯ ಮಾಡಲಾಗುತ್ತಿದೆ. ಈ ಹಿನ್ನಲೆ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ - ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವೀಣಾ ಕಾಶಪ್ಪನವರ ಅವರಿಗೆ ಆಯ್ಕೆ ಮಾಡಿದ್ದು,ಪ್ರಾಮಾಣಿಕ ವಾಗಿ ಅವರ ಪರವಾಗಿ ಕೆಲಸ ಮಾಡಿ,ಕಾಂಗ್ರೆಸ್ ಪಕ್ಷದ ಜಯಗಳಿಸುವಂತೆ ಕೆಲಸ ಮಾಡಲಾಗುವದು ಎಂದು ತಿಳಿಸಿದರು. ಕೆಲ ಕಾರ್ಯಾಕರ್ತರು ಅಸಮಾಧಾನ ಗೊಂಡಿದ್ದರು.ಅವರ ಮನ ಒಲಿಸಿ ಜಯಗಳಿಸುವ ತಂತ್ರ ಮಾಡಲಾಗುವದು ಎಂದು ನವಲಿಹೀರೆಮಠ ತಿಳಿಸಿದರು..

Conclusion:Etv,News,Bagalkote
ETV Bharat Logo

Copyright © 2024 Ushodaya Enterprises Pvt. Ltd., All Rights Reserved.