ಬಾಗಲಕೋಟೆ: ನಾನು ಮುಂದಿನ ಮುಖ್ಯಮಂತ್ರಿ ಆಗಬೇಕು. ಸಾಧ್ಯವಾದ್ರೆ ಪ್ರಧಾನಮಂತ್ರಿ ಆಗಬೇಕು ಅಂತ ಪ್ರಯತ್ನ ನಡೆಸಿದ್ದೀನಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ತಮ್ಮ ಮನದಾಸೆ ಹೊರಹಾಕಿದ್ದಾರೆ.
ನಗರದ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಕೆಡಿಪಿ ಸಭೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಕಾಂಕ್ಷಿ ಆಗಿರುವುದು ನಿಜ. 8 ಅವಧಿಯಲ್ಲಿ 9 ಸಲ ಶಾಸಕನಾಗಿದ್ದೇನೆ. ಎಲ್ಲ ಅರ್ಹತೆಗಳು ನನಗಿವೆ. ಯಾವುದೇ ಕಪ್ಪು ಚುಕ್ಕೆ ಇಲ್ಲ. ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಆದಾಗ ಅಥವಾ ಮುಂದಿನ ಚುನಾವಣೆ ಆದಾಗ ಆಗಬಹುದು. ನನಗಿನ್ನೂ ವಯಸ್ಸಿದೆ. ಈಗ ನನಗೆ 60 ವರ್ಷ. ಇನ್ನು 15 ವರ್ಷ ವರ್ಷದಲ್ಲಿ ನಾನು ಮುಖ್ಯಮಂತ್ರಿ ಆಗಬೇಕು ಎಂದ ಅವರು, ಸಿಎಂ ಆಗುವುದು ನನ್ನ ಕೈಯಲ್ಲಿ ಇಲ್ಲ, ಅದಕ್ಕೆ ನಸೀಬು ಬೇಕು ಎಂದರು.
ಒಳ್ಳೆಯ ರೀತಿಯಲ್ಲಿ ನಿಭಾಯಿಸುತ್ತೇನೆ: ಎಂಎಲ್ಎ ಆಗಬೇಕು, ಮಂತ್ರಿ ಆಗಬೇಕು, ಸಿಎಂ ಆಗಬೇಕು, ಸಾಧ್ಯವಾದ್ರೆ ಪ್ರಧಾನಮಂತ್ರಿನೂ ಆಗಬೇಕು ಅಂತ ಪ್ರಯತ್ನ ಇದೆ. ನಾನು ಮಠಾಧೀಶ ಅಲ್ಲ, ರಾಜಕಾರಣಿ. ನನಗೂ ಆಸೆ ಇದೆ. ಅಕಸ್ಮಾತ್ ಇದೇ ಅವದಿಯಲ್ಲಿ ಸಿಎಂ ಅವಕಾಶ ಸಿಕ್ಕರೆ, ಒಳ್ಳೆಯ ರೀತಿಯಲ್ಲಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಬಸ್ ಆರಂಭವಾದ್ರೂ ಸಂಚಾರಕ್ಕೆ ಮನಸ್ಸು ಮಾಡದ ಪ್ರಯಾಣಿಕ: ಹುಬ್ಳಳ್ಳಿ ಬಸ್ ನಿಲ್ದಾಣಗಳು ಭಣಭಣ