ಬಾಗಲಕೋಟೆ: ಬಾದಾಮಿ ತಾಲೂಕಿನಲ್ಲಿ ಎರಡು ದಿನಗಳಿಂದ ನಿರಂತರ ಮಳೆ ಆಗುತ್ತಿರುವ ಹಿನ್ನೆಲೆ ಹುಲಿಗೆಮ್ಮ ಕೊಳ್ಳದ ಫಾಲ್ಸ್ ಮೈ ದುಂಬಿ ಹರಿಯುತ್ತಿದ್ದು, ಬೆಟ್ಟದ ಮೇಲಿಂದ ಅಪಾರ ಪ್ರಮಾಣದ ನೀರು ಧುಮ್ಮಿಕ್ಕಿಬಿಳುತ್ತಿರುವ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಚಾಲುಕ್ಯರ ಕಾಲದಲ್ಲಿ ನಿರ್ಮಾಣ ಆಗಿರುವ ಈ ಪ್ರದೇಶವು ಪ್ರಕೃತಿಯ ಸೌಂದರ್ಯದ ಮಧ್ಯೆ ಕಂಗೊಳಿಸುತ್ತದೆ. ಹುಲಿಗೆಮ್ಮ ದೇವಿಯ ದೇವಾಲಯ ಹಾಗೂ ಚಾಲುಕ್ಯರ ಕಾಲದಲ್ಲಿ ನಿರ್ಮಾಣ ಮಾಡಿರುವ ಚಿಕ್ಕ ಈಶ್ವರಲಿಂಗ ದೇವಾಲಯವೂ ಇಲ್ಲಿದ್ದು ಪ್ರತಿವರ್ಷ ಹಲವಾರು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಚಾಲುಕ್ಯರು ಈ ಸ್ಥಳವನ್ನು ಖಜಾನೆ ಇಡುವ ಸ್ಥಳವನ್ನಾಗಿ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ. ಇದು ಬಾದಾಮಿಯಿಂದ 20 ಕಿಲೋ ಮೀಟರ್ ದೂರದಲ್ಲಿದ್ದು, ವಿವಿಧ ಊರುಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ನೀರಿನಲ್ಲಿ ಮಿಂದೆದ್ದು ಆನಂದಿಸುತ್ತಿದ್ದಾರೆ.
ಇದನ್ನೂ ಓದಿ: ಮಳೆಗಾಲದಲ್ಲಿ ಮೈದುಂಬುವ ಹನುಮಾನ್ ಲಾಠಿ.. ವೀಕೆಂಡ್ನಲ್ಲಿ ಫಾಲ್ಸ್ ತುಂಬ ಪ್ರವಾಸಿಗರ ದಂಡು!