ಬಾಗಲಕೋಟೆ: ಆರೋಗ್ಯ ಸಚಿವ ಬಿ.ಶ್ರೀರಾಮುಲು ಬಾಗಲಕೋಟೆಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ,ಪರಿಶೀಲನೆ ನಡೆಸಿದರು.
ಬಳ್ಳಾರಿಯಿಂದ ಬಾಗಲಕೋಟೆ ನಗರಕ್ಕೆ ಆಗಮಿಸಿದ ಸಚಿವ ಶ್ರೀರಾಮುಲು, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ವೇಳೆ ಆಸ್ಪತ್ರೆ ಸಮಸ್ಯೆಯನ್ನು ಆಲಿಸುವುದಕ್ಕೆ ಬಿಡದೇ, ಅವರ ಅಭಿಮಾನಿಗಳು ಹಾಗೂ ರಾಜಕೀಯ ಮುಖಂಡರು ಸ್ವಾಗತ ಕೋರಿ ಹೂವಿನ ಹಾರ ಹಾಕಿದ್ರು. ಇದರಿಂದ ಆಸ್ಪತ್ರೆಯ ಆವರಣ ಹಾಗೂ ಒಳರೋಗಿಗಳ ವಿಭಾಗದಲ್ಲಿ ಗೊಂದಲಮಯ ವಾತಾವರಣ ಉಂಟಾಗಿ, ರೋಗಿಗಳು ಕಿರಿ ಕಿರಿ ಅನುಭವಿಸುವಂತಾಯಿತು.
ಸಚಿವ ಶ್ರೀರಾಮುಲು,ಆಸ್ಪತ್ರೆಯ ಯಾವುದೇ ಮಾಹಿತಿ ಹಾಗೂ ವಾರ್ಡ್ಗಳನ್ನು ಸರಿಯಾಗಿ ವೀಕ್ಷಣೆ ಮಾಡದೇ, ಗದ್ದಲದಲ್ಲಿ ಹೆರಿಗೆ ವಾರ್ಡ್ಗೆ ಹೋಗಿ ಬಾಣಂತಿಯರಕ ಆರೋಗ್ಯ ವಿಚಾರಿಸಿ,ಚಿಕ್ಕ ಮಕ್ಕಳ ಆರೋಗ್ಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಳಿಕ ಹೊರಗಡೆ ನೆಲೆದ ಮೇಲೆ ಕುಳಿತುಕೊಂಡೇ ಅಹವಾಲು ಸ್ವೀಕರಿಸಿದ್ರು. ಈ ಸಮಯದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ, ಡಾ.ಅನಿಲ ದೇಸಾಯಿ ಹಾಗೂ ಜಿಲ್ಲಾ ಸರ್ಜನ್ ಡಾ. ಪ್ರಕಾಶ ಬಿರಾದಾರ ಸೇರಿದಂತೆ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.