ETV Bharat / state

ಒಂದು ಬಾರಿ ಪೂರ್ಣ ಬಹುಮತ ಕೊಟ್ಟು ಆಶೀರ್ವದಿಸಿ: ಕುಮಾರಸ್ವಾಮಿ - ನೂತನ ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನ ಸಮಾರಂಭ

ನೂತನವಾಗಿ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರಿಗೆ ಸನ್ಮಾನ ಮಾಡಲಾಯಿತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಜೆಡಿಎಸ್ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಸ್ವಾಗತಿಸಲಾಯಿತು.

hd-kumarswamy-talk
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
author img

By

Published : Jan 31, 2021, 7:43 PM IST

ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟಿಸುವ ಉದ್ದೇಶದಿಂದ ಇಂದು ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಗರದ ಕಾಳಿದಾಸ ಕಾಲೇಜು ಮೈದಾನದಲ್ಲಿ ಸಂಘಟನಾ ಸಮಾವೇಶ ಹಾಗೂ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸನ್ಮಾನ ಸಮಾರಂಭ ಜರುಗಿತು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ಓದಿ: ಬಿಗ್​​ ಬಿಗೆ 4 ಕೋಟಿಯ ಕಾರು ಗಿಫ್ಟ್​​ ಕೊಟ್ಟ ವಿಚಾರ ಬಾಯ್ಬಿಟ್ಟ ನಿರ್ದೇಶಕ!

ಬಸವಣ್ಣ, ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ‌ಮಾಡುವ ಮೂಲಕ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಜೊತೆಗೆ ಹೇಗೆ ಮೈತ್ರಿ ನಡೆಯಿತು ಎಂಬುದನ್ನು ವಿವರಿಸಿ ಹೇಳಿದರು.

ಒಂದು ಸಾರಿ ಪೂರ್ಣ ಪ್ರಮಾಣದ ಸರ್ಕಾರ ಕೊಡಿ. ಐದು ವರ್ಷದ ನಮ್ಮ ಆಡಳಿತ ಅವಧಿಯಲ್ಲಿ ಪ್ರತಿ ಮನೆಗೆ ಉದ್ಯೋಗ, ಮಕ್ಕಳಿಗೆ ಯುಕೆಜಿಯಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ, ಆರೋಗ್ಯದ ಕಾಳಜಿ‌ ಸೇರಿದಂತೆ ಐದು ಯೋಜನೆಗಳ ಮೂಲಕ ನಿಮ್ಮ ಸೇವೆ ಮಾಡುತ್ತೇನೆ. ನಾನು ಮಾತು ತಪ್ಪಿದರೆ ನಮ್ಮ‌ ಜೆಡಿಎಸ್ ಪಕ್ಷವೇ ವಿಸರ್ಜನೆ ಮಾಡಿ, ಇನ್ನು ಮುಂದೆ ರಾಜಕೀಯದಲ್ಲಿಯೇ ಕಾಣುವುದಿಲ್ಲ. ಒಂದು ಬಾರಿ ಪೂರ್ಣ ಸರ್ಕಾರ ಕೊಡುವ ಮೂಲಕ ಆಶೀರ್ವದಿಸಿ ಎಂದರು.

ಇನ್ನು ಇದೇ ಕಾರ್ಯಕ್ರಮದಲ್ಲಿ ನೂತನವಾಗಿ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರಿಗೆ ಸನ್ಮಾನ ಮಾಡಲಾಯಿತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಜೆಡಿಎಸ್ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಸ್ವಾಗತಿಸಲಾಯಿತು. ಅಲ್ಲದೇ ಪಕ್ಷದ ನೂತನ ಪದಾಧಿಕಾರಿಗಳಿಗೆ ಪಕ್ಷದ ಧ್ವಜ ನೀಡುವ ಮೂಲಕ‌‌ ಸನ್ಮಾನಿಸಿ ಗೌರವಿಸಲಾಯಿತು.

ಇನ್ನು ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಬೂತ್​​ ಮಟ್ಟದಿಂದ ಪಕ್ಷ ಸಂಘಟಿಸುವುದಕ್ಕೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಸಂಘಟನಾ ಸಮಾವೇಶದ ಆರಂಭಕ್ಕೂ ಮೊದಲು ವಿದ್ಯಾಗಿರಿಯ ಹೊಸ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಮೈತ್ರಿ ಸರ್ಕಾರದಲ್ಲಿ ನಾನು ಸಿಎಂ ಅಲ್ಲ, ಎಫ್​​ಡಿಎ ಕ್ಲರ್ಕ್ ಆಗಿದ್ದೆ. ನನ್ನ ಮೇಲೆ ‌ಕಾಂಗ್ರೆಸ್ ಹಾಗೂ ಬಿಜೆಪಿ‌ ನಾಯಕರ ಒತ್ತಡವಿತ್ತು ಎಂದು ಮೈತ್ರಿ ಸರ್ಕಾರದ ಸಂಕಟ ಬಿಚ್ಚಿಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.