ಬಾಗಲಕೋಟೆ: ಜಿಲ್ಲೆಯಲ್ಲಿ 96 ವರ್ಷದ ಅಜ್ಜಿಯೊಬ್ಬರು ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಸೇರಿ 40 ಜನಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇರುವ ಅವಿಭಕ್ತ ಕುಟುಂಬದಲ್ಲಿ ತುಂಬು ಜೀವನ ನಡೆಸುತ್ತಿದ್ದಾರೆ.
ಪಾವರ್ತಿಬಾಯಿ ಕಾಟವಾಗೆ ಐದು ತಲೆಮಾರಿನ ಸಂತತಿ ನೋಡುವ ಭಾಗ್ಯ ಸಿಕ್ಕಿದೆ. ಮನೆಯಲ್ಲಿ ಎಲ್ಲರೂ ಮಾಂಸಹಾರಿಗಳು ಆಗಿದ್ದರೆ, ಇವರು ಮಾತ್ರ ಸಸ್ಯಹಾರಿಗಳು. ಸ್ವಾತಿಕ ಆಹಾರ, ಸ್ವಾತಿಕ ಭಾವನೆ, ಆಧ್ಯಾತ್ಮಿಕ ಒಲವು ಹಿನ್ನೆಲೆ ಭಗವಂತ ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ಟಿದ್ದಾನೆ ಎಂದು ಹಿರಿಯ ಜೀವಿ ಪಾರ್ವತಿಬಾಯಿ ಹೇಳುತ್ತಾರೆ.
ಇವರ ಮಕ್ಕಳು, ಮೊಮ್ಮಕ್ಕಳು, ಅಜ್ಜಿಯನ್ನು ಮಗುವಿನ ರೀತಿಯಲ್ಲಿ ನೋಡಿಕೊಳ್ಳುವ ಜೊತೆಗೆ ಎಲ್ಲರೂ ದೇವಿಯ ಸ್ವರೂಪವನ್ನು ಕಾಣುತ್ತಾರೆ. ಹೀಗಾಗಿ ಹುಟ್ಟುಹಬ್ಬದ ಅಂಗವಾಗಿ ಎಲ್ಲರೂ ಪುಷ್ಪ ಸರ್ಮಪಣೆ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದಾರೆ. ತುಂಬು ಜೀವನ ನಡೆಸುತ್ತಿರುವ ಅಜ್ಜಿಗೆ ಎಸ್ಎಸ್ಕೆ ಸಮಾಜದ ವತಿಯಿಂದ ಸನ್ಮಾನ ಮಾಡಲಾಗಿದೆ.