ಬಾಗಲಕೋಟೆ: ಅಗ್ನಿಪಥ್ ಯೋಜನೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿದೆ, ಇದರಿಂದ ಅನ್ಯಾಯಗುವಂತಹ ಪ್ರಶ್ನೆಯೇ ಇಲ್ಲ. ಬದಲಾಗಿ ಅನುಕೂಲವಾಗಲಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲೆಯ ಗಲಗಲಿ ಗ್ರಾಮದಲ್ಲಿ ಮಾತನಾಡಿದ ಅವರು, 4 ವರ್ಷ ದೇಶ ಸೇವೆ ಮಾಡಿ ಬಂದರೂ ಸರ್ಕಾರಿ ನೌಕರಿಯಲ್ಲಿ ಅವಕಾಶ ಸಿಗಲಿದೆ. ಜನರು ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿಕೊಂಡರು. ತಮಗೆ ಏನಾದ್ರೂ ಆತಂಕಗಳಿದ್ದರೆ, ನ್ಯಾಯಯುತ ಬೇಡಿಕೆ ಇದ್ದರೆ ಶಾಂತ ರೀತಿಯಿಂದ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕು. ಇದರಲ್ಲಿ ರಾಜಕೀಯ ಕೈವಾಡ ಇದೆ ಅಂತ ಕಣ್ಣಿಗೆ ಕಾಣಿಸುತ್ತಿದೆ. ರಾಜ್ಯ ಮತ್ತು ದೇಶದಲ್ಲಿ ಈ ಹಿಂಸಾಚಾರದ ಹಿಂದೆ ಯಾರಿದ್ದಾರೆಂದು ಗೊತ್ತಿದೆ. ಈ ಬಗ್ಗೆ ತನಿಖೆಯಾಗಲಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಇಡಿ ವಿಚಾರಣೆ ಬಗ್ಗೆ ಮಾತನಾಡಿ, ಕಾಂಗ್ರೆಸ್ ಪ್ರತಿಭಟನೆ ನಡುವಳಿಕೆ ಅಶ್ಚರ್ಯ ಆಗಿದೆ. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಆಡಳಿತದಲ್ಲಿ ಅನೇಕ ಇಡಿ ದಾಳಿಗಳು ಆಗಿವೆ. ಅಲ್ಲದೆ ಐಟಿ ರೇಡ್ ಸಹ ಆಗಿವೆ. ಇವೆಲ್ಲ ಸಾಂವಿಧಾನಿಕ ಸಂಸ್ಥೆಗಳು, ನ್ಯಾಯಯುತವಾಗಿ ಕಾನೂನಿನ ಚೌಕಟ್ಟಿನಲ್ಲಿ ತಮ್ಮ ಕೆಲಸ ಮಾಡುತ್ತವೆ. ನಾವೆಂದೂ ಸಹ ಅದನ್ನು ರಾಜಕೀಕರಣಗೊಳಿಸಲಿಲ್ಲ ಎಂದ ಸಚಿವರು, ಕಾಂಗ್ರೆಸ್ ಸಹ ರಾಜಕೀಕರಣಗೊಳಿಸೋದು ಸರಿಯಲ್ಲ ಎಂದರು.
ಇದನ್ನೂ ಓದಿ: ಭ್ರಷ್ಟಾಚಾರವನ್ನು ತಡೆಯೋ ದಮ್ ಮೋದಿಗಿಲ್ಲ: ಉಗ್ರಪ್ಪ