ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯಕ್ಕೆ ಬಂದಿದ್ದು ಕಾಂಗ್ರೆಸ್ ಪಕ್ಷದ ವಿರೋಧಿಯಾಗಿ. ಜನತಾ ಪಕ್ಷದಿಂದ ಬಂದಿರುವವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಅಳವಡಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಜಲ ಸಂಪನ್ಮೂಲಗಳ ಸಚಿವ ಗೋವಿಂದ ಕಾರಜೋಳ ಟಾಂಗ್ ನೀಡಿದ್ದಾರೆ.
ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ಮಾತನಾಡಿದ ಅವರು, ಗುಜರಾತ್ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಚುನಾವಣೆ ನಡೆಯಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷವು ಇಡೀ ದೇಶದಲ್ಲಿ ನಶಿಸಿ ಹೋಗಲಿದೆ ಎಂದರು. ಗುಜರಾತ್ ಫಲಿತಾಂಶ ಬಗ್ಗೆ ಮಾತನಾಡುತ್ತಾ, ದೇಶದ ಇತಿಹಾಸದಲ್ಲಿಯೇ ಇದೊಂದು ಐತಿಹಾಸಿಕ ಚುನಾವಣೆ. 120 ವರ್ಷಗಳ ಹಳೆಯ ಪಕ್ಷ ಕಾಂಗ್ರೆಸ್, ಗುಜರಾತ್ನಲ್ಲಿ ಕೇವಲ 16 ಸ್ಥಾನ ಗೆಲ್ಲೋ ಮೂಲಕ ಪ್ರತಿಪಕ್ಷದ ಸ್ಥಾನವೂ ಕೂಡಾ ಅವರಿಗೆ ಸಿಕ್ಕಿಲ್ಲ. ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ ಅಂತ ಮೋದಿ 10 ವರ್ಷಗಳ ಹಿಂದೇನೇ ಹೇಳಿದ್ದರು. ಈಗ ಕಾಂಗ್ರೆಸ್ ಮುಕ್ತ ಭಾರತ ಆಯ್ತು ಎಂದರು.
ಮುಂದಿನ ಚುನಾವಣೆಗಳಿಗೆ ಈ ಚುನಾವಣೆ ದಿಕ್ಸೂಚಿ ಆಗುತ್ತಾ ಎಂಬ ವಿಚಾರವಾಗಿ ಮಾತನಾಡಿ, ಖಂಡಿತವಾಗಿಯೂ ಆಗುತ್ತದೆ. ದೇಶದಲ್ಲಿ ಮೋದಿ ಆಡಳಿತವನ್ನು ಜನ ಮೆಚ್ಚಿದ್ದಾರೆ. ದೇಶ ಸುರಕ್ಷತೆಯಿಂದ ಕೂಡಿರಬೇಕು ಎಂದರೆ ಮೋದಿ ಆಡಳಿತವೇ ಇರಬೇಕು ಅನ್ನೋ ಜನರ ಬಯಕೆ. ಇಡೀ ಪ್ರಪಂಚದ ಎಲ್ಲರೂ ಮೋದಿ ಅವರೇ ವಿಶ್ವದ ನಾಯಕರಾಗುವಂತೆ ಬಯಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ನಗರದಲ್ಲಿ ಇನ್ನೂ ಐದು ಹೊಸ ಸಂಚಾರಿ ಠಾಣೆ: ಸಿಎಂ ಬಸವರಾಜ ಬೊಮ್ಮಾಯಿ