ETV Bharat / state

ಆಯುಷ್ಮಾನ್​​​​ ಕಾರ್ಡ್​ಗೆ ಉಚಿತ ಕೋವಿಡ್ ಚಿಕಿತ್ಸೆ: ಡಿಸಿ ಡಾ. ಕೆ. ರಾಜೇಂದ್ರ

ಆಯುಷ್ಮಾನ್​​​​​​​​​ ಕಾರ್ಡ್​ನಿಂದ ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತ ಕೋವಿಡ್ ಚಿಕಿತ್ಸೆ ಪಡೆಯ ಬಹುದಾಗಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ತಿಳಿಸಿದರು.

author img

By

Published : Jul 2, 2020, 7:45 AM IST

DC Dr. K. Rajendra
ಆಯುಷ್‍ಮಾನ್ ಕಾರ್ಡ್​ಗೆ ಉಚಿತ ಕೋವಿಡ್ ಚಿಕಿತ್ಸೆ: ಡಿಸಿ ಡಾ. ಕೆ. ರಾಜೇಂದ್ರ

ಬಾಗಲಕೋಟೆ: ಆಯುಷ್ಮಾನ್​​​​​​​ ಕಾರ್ಡ್​ನಿಂದ ಜಿಲ್ಲೆಯಲ್ಲಿರುವ 26 ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ಉಚಿತ ಕೋವಿಡ್ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆಯುಷ್ಮಾನ್​​​​​​​ ಕಾರ್ಡ್​ ನೀಡುವ ಕಾರ್ಯಕ್ಕೆ ಥಂಬ್​ ನೀಡಿ ಕಾರ್ಡ್​ ಪಡೆಯುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಬಿಪಿಎಲ್, ಎಪಿಎಲ್ ಹಾಗೂ ಯಾವ ಪಡಿತರ ಕಾರ್ಡ್ ಇಲ್ಲದವರಿಗೂ ಸಹ ಈ ಆಯುಷ್ಮಾನ್​​​​ ಕಾರ್ಡ್ ಪಡೆಯಬಹುದಾಗಿದೆ. ವಿವಿಧ ಸರ್ಕಾರಿ ನೌಕರರು ಸಹ ಈ ಕಾರ್ಡ್ ಪಡೆಯಬಹುದಾಗಿದೆ. ಈ ಕಾರ್ಡ್ ಮೂಲಕ ಕೋವಿಡ್ ಚಿಕಿತ್ಸೆಗೆ ಆಯ್ಕೆಯಾದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಅವರು ತಿಳಿದರು. ಜಿಲ್ಲೆಯಲ್ಲಿರುವ 198 ಗ್ರಾಮ ಪಂಚಾಯಿತಿಗಳಲ್ಲಿ, 6 ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಹಾಗೂ 120 ಸಾಮಾನ್ಯ ನಾಗರಿಕ ಸೇವಾ ಕೇಂದ್ರ (ಸಿಎಸ್‍ಸಿ)ಗಳಲ್ಲಿ ಆಧಾರ್​​ ಕಾರ್ಡ್ ನಂಬರ್​ ನೀಡಿ ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸೇವಾ ಸಿಂಧು ಜಿಲ್ಲಾ ವ್ಯವಸ್ಥಾಪಕ ಸ್ವಾಗತ ಗುಡೆಗುಡಿ, ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಚೇತನ ಪಟ್ಟಣಶೆಟ್ಟಿ, ಸಕಾಲದ ಲಕ್ಷ್ಮಿಕಾಂತ ಜ್ಯೋತೆನ್ನವರ, ವಿಎಲ್‍ಇ ಹನಿಫ್​​​ ಇನಾಮದಾರ, ಜಿಲ್ಲಾಧಿಕಾರಿ ಆಪ್ತ ಸಹಾಯಕ ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೋವಿಡ್ ಚಿಕಿತ್ಸೆಗೆ ಆಯ್ಕೆಯಾದ ಖಾಸಗಿ ಆಸ್ಪತ್ರೆಗಳ ವಿವರ: ಬಾಗಲಕೋಟೆ ನಗರದ ಧನುಷ್ ಆಸ್ಪತ್ರೆ, ಕೆರೂಡಿ ಆಸ್ಪತ್ರೆ, ಶಾಂತಿ ಆಸ್ಪತ್ರೆ, ದಡ್ಡೇನವರ ಆಸ್ಪತ್ರೆ, ಆಶೀರ್ವಾದ ಆಸ್ಪತ್ರೆ, ಕಟ್ಟಿ ಆಸ್ಪತ್ರೆ, ಸ್ಪಂದನಾ ಆಸ್ಪತ್ರೆ, ಸಂಜೀವಿನಿ ಮಕ್ಕಳ, ಕಣ್ಣು ಆಸ್ಪತ್ರೆ, ಪಾಟೀಲ್ ಮೆಡಿಕೇರ್ ಆಸ್ಪತ್ರೆ, ಕುಂಟೋಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಗುಳೇದ ಆಥ್ರೋಕೇರ್ ಆಸ್ಪತ್ರೆ, ಶಕುಂತಲಾ ಆಸ್ಪತ್ರೆ, ಆಶ್ರಯ ಆಸ್ಪತ್ರೆ, ಕೆರೂಡಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ರೋಟರಿ ಕ್ಲಬ್ ಸರ್ಕಲ್,ಕುಮಾರೇಶ್ವರ ಆಸ್ಪತ್ರೆ, ಮಹಾಲಿಂಗಪುರದ ವೆಂಕಟೇಶ ಆಸ್ಪತ್ರೆ, ಆರೋಗ್ಯಧಾಮ ಆಸ್ಪತ್ರೆ, ಬೆಳಗಲ್ ಸರ್ಜಿಕಲ್ ಕ್ಲಿನಿಕ್, ರಿತಿ ಲೈಫ್ ಕೇರ್ ಆಸ್ಪತ್ರೆ, ಬಾದಾಮಿಯ ಕಾರೂಡಗಿ ಮೆಮೋರಿಯಲ್ ಆಸ್ಪತ್ರೆ, ಮುಧೋಳನ ಸಾಯಿ ಆಧಾರ ಆಸ್ಪತ್ರೆ, ಶಾರದಾ ಆರ್ಥೋಸ್ಪೆಷಾಲಿಟಿ ಆಸ್ಪತ್ರೆ, ರಬಕವಿಯ ತ್ರಿಶಲಾದೇವಿ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಆರ್ಥೋಕೇರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಇಲಕಲ್ಲಿನ ಮಹಾಂತೇಶ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ತೇರದಾಳದ ಪದ್ಮಾ ಆಸ್ಪತ್ರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.