ETV Bharat / state

ಬಾಗಲಕೋಟೆ: ತಡರಾತ್ರಿ ಕಾರು ಪಲ್ಟಿಯಾಗಿ ದುರಂತ, ಸ್ಥಳದಲ್ಲೇ ನಾಲ್ವರ ದುರ್ಮರಣ - ಲೋಕಾಪುರ ಕಾರು ಪಲ್ಟಿ

ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣದ ಬಳಿ ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ.

four-killed-in-car-accident-near-bagalakote
ಬಾಗಲಕೋಟೆ: ತಡರಾತ್ರಿ ಕಾರು ಪಲ್ಟಿಯಾಗಿ ದುರಂತ... ಸ್ಥಳದಲ್ಲೇ ನಾಲ್ವರ ದುರ್ಮರಣ
author img

By

Published : Oct 22, 2021, 10:10 AM IST

Updated : Oct 22, 2021, 12:34 PM IST

ಬಾಗಲಕೋಟೆ: ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಲೋಕಾಪುರ ಪಟ್ಟಣದ ಬಳಿ ತಡರಾತ್ರಿ ಸಂಭವಿಸಿದೆ. ಮುಧೋಳದಿಂದ ರಾಮದುರ್ಗ ಕಡೆಗೆ ಬರುತ್ತಿದ್ದ ಕಾರು ಲೋಕಾಪುರದ ಸಮೀಪ ರಸ್ತೆಯಿಂದ ಕಾಲುವೆಗೆ ಪಲ್ಟಿಯಾಗಿ ಬಿದ್ದಿದೆ.

ಬಡಕಿ ಗ್ರಾಮದ ನಿವಾಸಿ ಕಾರು ಚಾಲಕ ಸುನೀಲ್ (24), ಗುಡಮ್ಮನಾಳ ಗ್ರಾಮದವರಾದ ಮಹಾದೇವ್ ಪಾಟೀಲ್ (27), ಎರಿತಾತಾ ಕಂಬಾರ್ (26) ಹಾಗೂ ವಿಜಯ್ (26) ಮೃತಪಟ್ಟವರು. ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ರಾಮದುರ್ಗ ತಾಲೂಕಿನವರು ಎಂದು ತಿಳಿದುಬಂದಿದೆ. ಕಾರು ಕಾಲುವೆಗೆ ಬಿದ್ದಿದ್ದು, ಅದರಲ್ಲಿ ನೀರು ಹರಿಯುತ್ತಿರಲಿಲ್ಲ.

four-killed-in-car-accident-near-bagalakote
ಅಪಘಾತಕ್ಕೀಡಾದ ಕಾರು

ಇವರೆಲ್ಲ ಗೆಳೆಯರೊಂದಿಗೆ ಪಾರ್ಟಿ ಮಾಡಲೆಂದು ಮುಧೋಳಕ್ಕೆ ತೆರಳಿದ್ದರು. ಪಾರ್ಟಿ ಮುಗಿಸಿ ಮದ್ಯದ ನಶೆಯಲ್ಲಿ ರಾತ್ರಿ ಸುಮಾರು 2 ಗಂಟೆ ವೇಳೆಗೆ ಪಾಪಸ್​ ಬರುವಾಗ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರೇನ್ ಸಹಾಯದಿಂದ ಕಾರು ಸಹಿತ ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಸ್ಥಳಕ್ಕೆ ಲೋಕಾಪೂರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೈಸೂರು: ಮನೆಗೆ ನುಗ್ಗಿ ತನ್ನ ತಂದೆ, ಮಹಿಳೆಯನ್ನು ಕೊಂದ ಮಗ

Last Updated : Oct 22, 2021, 12:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.