ಬಾಗಲಕೋಟೆ: ಸಿದ್ದರಾಮಯ್ಯ ಅಂದ್ರೆ ಒಂದು ದೊಡ್ಡ ಆಲದ ಮರ ಇದ್ದಂಗೆ. ಇವೆಲ್ಲಾ ಸೀಳುನಾಯಿಗಳೇ ಮತ್ತಿನ್ನೇನು? ಎಂದು ಬಿಜೆಪಿಗರಿಗೆ ಸೀಳು ನಾಯಿ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಬೆಂಬಲ ವ್ಯಕ್ತಪಡಿಸಿದರು.
ಬಾಗಲಕೋಟೆ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯ ಬಳಿಕ ಮಾತನಾಡಿ, ಆ ಸಿ.ಟಿಗೆ ರವಿ ಬಾಯಿಲ್ಲ, ಬಗದಾಳಿಲ್ಲ (ನಾಲಿಗೆ ಹಿಡಿತವಿಲ್ಲ). ದೇಶದಲ್ಲಿ ಆರ್ಎಸ್ಎಸ್ನವರು ಪಂಡಿತರು ಅಂತ ತಿಳಿದುಕೊಂಡಿದ್ದಾರೆ. ಇವರು ಪಂಡಿತರಾ? ಸ್ವಾತಂತ್ರ್ಯ ಹೋರಾಟಗಾರರಾ? ಇವ್ರನ್ನು ಒಪ್ಪಿಕೊಳ್ಳೋಕೆ ಎಂದರು.
ಪಂಚಮಸಾಲಿ ಮೀಸಲಾತಿ ವಿಚಾರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕೊಟ್ಟ ಗಡುವುಗಳು ಮುಗಿದಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯಾವುದೇ ನಿರ್ಧಾರವನ್ನು ಹೇಳಿಲ್ಲ. ಬರುವ ಜೂನ್ 27ರ ವರೆಗೆ ಯಾವುದಾದ್ರೂ ಒಂದು ತೀರ್ಮಾನವನ್ನು ಹೇಳಬೇಕು. ಇಲ್ಲವಾದಲ್ಲಿ ಜೂನ್ 27ರಂದು ಸಮಾಜದಬಾಂಧವರು ಬುತ್ತಿ ಕಟ್ಟಿಕೊಂಡು ಶಿಗ್ಗಾಂವಿಯಲ್ಲಿ ಸಿಎಂ ಮನೆ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ರಾಜಕಾರಣ ಮಾಡಬಾರದು: ಬಸವರಾಜ ಹೊರಟ್ಟಿ