ETV Bharat / state

ನಮ್ಮ ಜನಾಂಗದ ಶಕ್ತಿ ತೋರಿಸುತ್ತೇವೆ.. ಸ್ವಪಕ್ಷೀಯರ ವಿರುದ್ಧ ಕಾಶಪ್ಪನವರ್ ಗುಡುಗು

ಡಿಸಿಸಿ ಬ್ಯಾಂಕ್​ನಲ್ಲಿ ಸಾಕಷ್ಟು ಅವ್ಯವಹಾರಗಳಿದ್ದು, ಅವೆಲ್ಲವನ್ನೂ ಬಯಲಿಗೆಳೆಯುತ್ತೇವೆ. ಎಸ್ ಆರ್ ಪಾಟೀಲ್ ಹಾಗೂ ಸರ್​ನಾಯಕ್ ಹತಾಶರಾಗಿದ್ದಾರೆ. ಅವರ ಹುಳುಕು ಮುಂದಿನ ದಿನಗಳಲ್ಲಿ ಹೊರ ಬರುತ್ತವೆ..

dsd
ಪಕ್ಷೀಯರ ವಿರುದ್ಧ ಕಾಶಪ್ಪನವರ್ ಗುಡುಗು
author img

By

Published : Nov 29, 2020, 2:43 PM IST

ಬಾಗಲಕೋಟೆ : ಎಸ್.ಆರ್ ಪಾಟೀಲ್ ಹಾಗೂ ಸರ್​ನಾಯಕ್​ಗೆ ಪಕ್ಷಕ್ಕಿಂತಲೂ ಜನಾಂಗದ ಮೇಲೆ ಪ್ರೀತಿ ಜಾಸ್ತಿಯಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಜನಾಂಗದ ಶಕ್ತಿ ತೋರಿಸುತ್ತೇವೆ ಎಂದು ಸ್ವಪಕ್ಷೀಯರ ವಿರುದ್ಧವೇ ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಗುಡುಗಿದ್ದಾರೆ.

ಪಕ್ಷೀಯರ ವಿರುದ್ಧ ಕಾಶಪ್ಪನವರ್ ಗುಡುಗು

ನಗರದಲ್ಲಿ ಮಾತನಾಡಿದ ಅವರು, ಯಾವ ವರಿಷ್ಠರಿಗೂ ನನಗೆ ಹೇಳಲು ಅಧಿಕಾರವಿಲ್ಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ್ ಸರ್​ನಾಯಕ್ ಸಹಕಾರಿ ಕ್ಷೇತ್ರದಲ್ಲಿ ಪಕ್ಷ ಬರಲ್ಲ ಎಂದಿದ್ರು. ಡಿಸಿಸಿ ಬ್ಯಾಂಕ್​ನಲ್ಲಿ ಸಾಕಷ್ಟು ಅವ್ಯವಹಾರಗಳಿದ್ದು, ಅವೆಲ್ಲವನ್ನೂ ಬಯಲಿಗೆಳೆಯುತ್ತೇವೆ. ಎಸ್ ಆರ್ ಪಾಟೀಲ್ ಹಾಗೂ ಸರ್​ನಾಯಕ್ ಹತಾಶರಾಗಿದ್ದಾರೆ. ಅವರ ಹುಳುಕು ಮುಂದಿನ ದಿನಗಳಲ್ಲಿ ಹೊರ ಬರುತ್ತವೆ.

ಬಿಜೆಪಿಯ ಶಿವನಗೌಡ ಅಗಸಿಮುಂದಿನ, ರಾಮಣ್ಣ ತಳೇವಾಡ ಜನಾಂಗದ ಪ್ರೀತಿಗೆ ಅಡ್ಡಮತದಾನ ಮಾಡಿದ್ದಾರೆ‌. ನನ್ನನ್ನ ವೋಟ್ ಮಾಡಲು ಕರೆದಿದ್ರೆ ನಾನು ಕೂಡಲಸಂಗಮಕ್ಕೆ ಬರ್ತೀನಿ, ನೀವು ಬನ್ನಿ ಆಣೆ ಮಾಡೋಣ ಎಂದು ಸವಾಲ್ ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.