ETV Bharat / state

ಉಗ್ರನನ್ನು ಅಮಾಯಕ ಅಂತ ಡಿಕೆಶಿ ಹೇಳಿಲ್ಲ, ಅವರ ಅರ್ಥಾನೇ ಬೇರೆ: ಮಾಜಿ ಡಿಸಿಎಂ ಜಿ ಪರಮೇಶ್ವರ್ - ಉಗ್ರರಿಗೆ ಕಾಂಗ್ರೆಸ್ ಸಪೋರ್ಟ್

ಉಗ್ರರಿಗೆ ಕಾಂಗ್ರೆಸ್ ಸಪೋರ್ಟ್ ಮಾಡುತ್ತಿದೆ ಎಂದು ಹೇಳುವುದು ಚುನಾವಣಾ ಸಮಯದಲ್ಲಿ ಬಿಜೆಪಿಯವರ ಸ್ಟ್ರಾಟಜಿ ಆಗಿದೆ. ನಾವು ಹೇಳಿದ್ದನ್ನು ಜನಕ್ಕೆ ಬೇರೆ ರೀತಿ ತಿಳಿಸೋಕೆ ಹೋಗುತ್ತಾರೆ. ಅದು ಇವತ್ತು ಹೊಸದಲ್ಲ, ಬಹಳ ಹಿಂದೆನೂ ನೋಡಿದ್ದೇವೆ ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್ ಅವರು ಹೇಳಿದರು.

ಮಾಜಿ ಡಿಸಿಎಂ ಜಿ ಪರಮೇಶ್ವರ್
ಮಾಜಿ ಡಿಸಿಎಂ ಜಿ ಪರಮೇಶ್ವರ್
author img

By

Published : Dec 18, 2022, 4:54 PM IST

ಮಾಜಿ ಡಿಸಿಎಂ ಜಿ ಪರಮೇಶ್ವರ್ ಅವರು ಮಾತನಾಡಿದರು

ಬಾಗಲಕೋಟೆ: ಉಗ್ರನನ್ನು ಅಮಾಯಕ ಅಂತ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಲ್ಲ. ಅವರ ಅರ್ಥಾನೇ ಬೇರೆ. ಬಿಜೆಪಿ ಪಕ್ಷದವರು ಅದನ್ನ ಟ್ವಿಸ್ಟ್ ಮಾಡಿದ್ದಾರೆ ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.

ಅವರು ಬಾಗಲಕೋಟೆ ಜಿಲ್ಲೆಯ ಬಾಡಗಂಡಿ ಗ್ರಾಮದಲ್ಲಿ ಎಸ್ ಆರ್ ಪಾಟೀಲ್​​ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತ, ಉಗ್ರರಿಗೆ ಸಪೋರ್ಟ್ ಮಾಡ್ತಿದ್ದಾರೆ. ಉಗ್ರರಿಗೆ ಕಾಂಗ್ರೆಸ್ ಸಪೋರ್ಟ್ ಮಾಡುತ್ತಿದೆ ಎನ್ನುವುದು ಚುನಾವಣಾ ಸಮಯದಲ್ಲಿ ಬಿಜೆಪಿಯವರ ಸ್ಟ್ರಾಟಜಿ ಆಗಿದೆ. ನಾವು ಹೇಳಿದ್ದನ್ನು ಜನಕ್ಕೆ ಬೇರೆ ರೀತಿ ತಿಳಿಸೋಕೆ ಹೋಗುತ್ತಾರೆ. ಅದು ಹೊಸದಲ್ಲ, ಬಹಳ ಹಿಂದಿನಿಂದಲೂ ನೋಡಿದ್ದೇವೆ. ನಮ್ಮ ಹೇಳಿಕೆಯನ್ನೇ ಬೇರೆ ರೀತಿಯಲ್ಲಿ ಅರ್ಥೈಸುವ ಹಾಗೆ ಜನಕ್ಕೆ ಹೇಳುತ್ತಾರೆ. ಅದೇ ಅವರ ಸ್ಟ್ರಾಟಜಿ, ಎಂದ ಪರಮೇಶ್ವರ್​ ನಾವು ಸಹ ಕೌಂಟರ್​ ನೀಡುತ್ತೇವೆ ಎಂದರು.

ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ: ಇದೇ ಸಮಯದಲ್ಲಿ ಯತ್ನಾಳ್​ ಅವರನ್ನೇ ಸಿಎಂ ಮಾಡ್ತೀವಿ ಎಂಬ ಕಾಶಪ್ಪನವರ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ರಾಷ್ಟ್ರಮಟ್ಟದ ಶಿಸ್ತು ಪಾಲನಾ ಸಮಿತಿಯಲ್ಲಿದ್ದೇನೆ. ಕೆಪಿಸಿಸಿಯಿಂದ ನಮಗೆ ರೆಫರ್ ಆದ್ರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿ ಆದಾಗ ಸೂಕ್ತ ಕ್ರಮ ಕೈಗೊಂಡಿದ್ದೀವಿ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಎಲ್ಲವೂ ಗೊತ್ತಿದೆ ಎಂಬ ಪ್ರಶ್ನೆಗೆ ಅವರೊಂದು ರಿಪೋರ್ಟ್ ಕೊಡಲಿ ಎಂದರು.

ಇದೇ ಸಮಯದಲ್ಲಿ ಹಾಗಾದ್ರೆ ಸಿದ್ದರಾಮಯ್ಯ ಅವರ ಮೇಲೆ ಕ್ರಮ ಆಗುತ್ತಾ? ಎಂಬ ಪ್ರಶ್ನೆಗೆ ರಿಪೋರ್ಟ್ ಯಾರ ಮೇಲೆ ಬರುತ್ತೋ ಅವರ ಮೇಲೆ ಕ್ರಮ ಕೈಗೊಳ್ತೀವಿ ಎಂದು ಉತ್ತರಿಸಿದರು. ಅಧಿವೇಶನದಲ್ಲಿ ಸಾವರ್ಕರ್ ಭಾವಚಿತ್ರ ಅನಾವರಣ ವಿಚಾರವಾಗಿ ಮಾತನಾಡಿ, ಅನೇಕ ವಿವಾದಗಳನ್ನು ರಾಜ್ಯದಲ್ಲಿ ಬಿಜೆಪಿ ಈಗಾಗಲೇ ಹುಟ್ಟುಹಾಕಿದೆ. ಅದು ತಿಳಿದೋ ತಿಳಿಯದೋ ಅಂತ ಹೇಳೋಕೆ ಬರಲ್ಲ. ತಿಳಿಯದೇ, ಗೊತ್ತಿದ್ದೇ ಅವರು ಇಂತಹ ವಿವಾದಗಳನ್ನು ಹುಟ್ಟುಹಾಕ್ತಿದ್ದಾರೆ. ಅವರಿಗೆ ಗೊತ್ತಿದೆ. ವೀರ ಸಾವರ್ಕರ್ ಬಗ್ಗೆ ಬಹಳಷ್ಟು ಪ್ರತಿಕ್ರಿಯೆಗಳಿವೆ‌. ಆದ್ದರಿಂದ ಅದನ್ನ ಮಾಡಬೇಕು, ಮಾಡಬಾರದು ಅನ್ನೋದನ್ನು ವಿರೋಧ ಪಕ್ಷ ಚರ್ಚೆ ಮಾಡಬೇಕಲ್ಲ.

ಸದನ ಬರಿ ರೂಲಿಂಗ್ ಪಾರ್ಟಿಗೆ ಅಷ್ಟೇ ಸೀಮಿತ ಅಲ್ಲ. ಇಡೀ ವಿಧಾನಸೌಧ, ಸುವರ್ಣಸೌಧದಲ್ಲಿ ನಡೆಯೋದು ಆಡಳಿತ ಪಕ್ಷದ್ದು ಮಾತ್ರ ಅಲ್ಲ. ಎಲ್ಲ ಪಕ್ಷಗಳದ್ದು ಮತ್ತು ಇಡೀ ಜನಸಮುದಾಯಕ್ಕೆ ಸೇರಿದ್ದು. ಏಕಾಏಕಿ ಅವರು ತೀರ್ಮಾನ ತಗೊಳ್ತಾರೆ ಅಂದ್ರೆ ಏನು ಅರ್ಥ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಎಲ್ಲರನ್ನೂ ಕೇಳಿ ಮಾಡಬೇಕು. ಅದು ಕನಿಷ್ಠ ಪ್ರಜ್ಞೆ. ಅದನ್ನು ಕೂಡ ಅವರು ತಿಳಿದುಕೊಳ್ಳಲ್ಲ ಅಂದ್ರೆ ನಾವು ಅದನ್ನೂ ಕೂಡ ಚರ್ಚೆ ಮಾಡ್ತೇವೆ ಎಂದರು.

ಇದೇ ಸಮಯದಲ್ಲಿ ಸಿದ್ದರಾಮಯ್ಯ ಕೆಲ ಆಕಾಂಕ್ಷಿಗಳ ಟಿಕೆಟ್ ಘೋಷಣೆ ವಿಚಾರವಾಗಿ ಮಾತನಾಡಿದ ಪರಮೇಶ್ವರ್​, ಯಾರೋ ಬಂದು ನಮ್ಮ ಹತ್ರ ಒಂದು ಅವಕಾಶ ಮಾಡಿಕೊಡಿ ಅಂತ ಹೇಳಿದ್ದರೆ, ಅದರಲ್ಲಿ ತಪ್ಪಿದೆಯಾ? ನಾನು ಅವರಿಗೆ ಅರ್ಜಿ ಹಾಕಬೇಡಿ ಅಂತ ಹೇಳೋಕೆ ಆಗುತ್ತಾ. ಸಿದ್ದರಾಮಯ್ಯ ಯಾರನ್ನೂ ಘೋಷಣೆ ಮಾಡಿಲ್ಲ. ಕೆಲವೆಡೆ ಸಿಟ್ಟಿಂಗ್ ಎಂಎಲ್​ಎ ಇದ್ದಾಗ, ಆ ಕ್ಷೇತ್ರಕ್ಕೆ ಸಿದ್ದರಾಮಯ್ಯ ಆಗಲಿ ಡಿಕೆಶಿ ಆಗಲಿ ಅಥವಾ ನಾನಾಗಲಿ ಹೋದರೆ, ನಮ್ಮಲ್ಲಿ ಒಂದು ಪದ್ಧತಿ ಇದೆ ಎಂದು ತಿಳಿಸಿದರು.

ನೀವು ಕೇಳಿದ್ದಕ್ಕೆ ಉತ್ತರ ಕೊಡಬಹುದು: ಸದ್ಯ ಶಾಸಕ ಇದ್ದ ಕಡೆಗೆ ಎಲ್ಲರಿಗೂ ಕೊಟ್ಟುಬಿಡೋಣ ಅಂತ ಒಂದು ರೆಗ್ಯುಲೇಷನ್​ ಮಾಡ್ತಾರೆ. ನಮಗೆ ಅಲ್ಲಿ ಮಾಜಿ ಸಮರ್ಥವಾಗಿದ್ದಾರೆ ಅವರು ಗೆಲ್ಲುತ್ತಾರೆ ಅಂತ ಮಾಹಿತಿ ಇರುತ್ತದೆ. ಆ ಸಮಯದಲ್ಲಿ ಆಯ್ತಪ್ಪ ನೋಡೋಣ ನಡಿ ಮಾಡು ಅಂತ ಹೇಳ್ತಾರೆ. ಅದು ಹೊರತುಪಡಿಸಿ ನಮ್ಮ ಎಲೆಕ್ಷನ್ ಕಮಿಟಿಯಲ್ಲಿ ಆಗಲಿ, ಎಐಸಿಸಿನಲ್ಲಿ ಆಗಲಿ, ಸೆಂಟ್ರಲ್ ಎಲೆಕ್ಷನ್ ಕಮಿಟಿ ಅಂತ ಇದೆ. ಅವಾಗ ಫೈನಲ್ ಆಗುವುದು ಎಂದರು. ಇದನ್ನೆಲ್ಲಾ ಬಿಟ್ಟು ಸಿದ್ದರಾಮಯ್ಯ ಮಾಡೋ ಹಾಗಿದ್ರೆ ನೀವು ಕೇಳಿದಕ್ಕೆ ಉತ್ತರ ಕೊಡಬಹುದು ಎಂದು ಪರಮೇಶ್ವರ್​ ಹೇಳಿದರು.

ಓದಿ: ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶದ ಮೂಲಕ ಹಿಂದುಳಿದ ವರ್ಗದ ಒಗ್ಗಟ್ಟು ಪ್ರದರ್ಶನ: ಪರಮೇಶ್ವರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.