ETV Bharat / state

ಕಾಂಗ್ರೆಸ್ಸಿಗರಿಗೆ ಮುಸಲ್ಮಾನರೇ ತಂದೆ-ತಾಯಿ, ಕೈ ಮುಸಲ್ಮಾನರ ಪಕ್ಷ ಎಂದು ರಾಹುಲ್ ಹೇಳಿದ್ದಾರಲ್ಲ: ಬಿಜೆಪಿ ಮುಖಂಡ

2 ಮಗುವನ್ನ ಹೆತ್ತವರು ನಾವು ಟ್ಯಾಕ್ಸ್ ಕಟ್ಟಬೇಕು. ಅದೇ 10 ಮಕ್ಕಳ ಹೆತ್ತವರು ಅದರ ಉಪಯೋಗ ತಗೆದುಕೊಳ್ಳಬೇಕು ಎಂದು ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಕಾಂಗ್ರೆಸ್​ ಪಕ್ಷದ ಬಗ್ಗೆ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದರು.

ನಾರಾಯಣಸಾ ಭಾಂಡೆಗೆ
ನಾರಾಯಣಸಾ ಭಾಂಡೆಗೆ
author img

By

Published : Jan 28, 2022, 7:36 AM IST

ಬಾಗಲಕೋಟೆ: ಮಸೀದಿಗಳ ಮೇಲೆ ಧ್ವನಿವರ್ಧಕ ಬಳಸಿ ನಮಾಜ್ ಮಾಡುವುದರಿಂದ ಜನರಿಗೆ ತೊಂದರೆ ಆಗುತ್ತಿದೆ. ಇದನ್ನ ನಿರ್ಬಂಧಿಸಬೇಕು ಎಂದು ಡಿಸಿ ಹಾಗೂ ಎಸ್​ಪಿಗೆ ಮನವಿ ಸಲ್ಲಿಸಿರುವುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಪಕ್ಷದ ಮುಖಂಡ ನಾರಾಯಣಸಾ ಭಾಂಡೆಗೆ ಹೇಳಿದರು.

ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರಿಗೆ ಮುಸಲ್ಮಾನರೇ ತಂದೆ - ತಾಯಿ. ಕಾಂಗ್ರೆಸ್ ಪಕ್ಷ ಮುಸಲ್ಮಾನರ ಪಕ್ಷ ಎಂದು ರಾಹುಲ್ ಗಾಂಧಿಯವರೇ ಹೇಳಿದ್ದಾರಲ್ಲ. ಎಲ್ಲ ಸವಲತ್ತುಗಳನ್ನ ಮುಸಲ್ಮಾನರಿಗೆ ಮೊದಲು ಕೊಡಬೇಕೆಂದು ಕೈ ಪಕ್ಷದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರಲ್ಲ. ಅದನ್ನ ನಾವು ಪೇಪರ್​ನಲ್ಲಿ ನೋಡಿದ್ದೇವೆ. ಎರಡು ಮಕ್ಕಳನ್ನ ಹೆತ್ತವರು ನಾವು ಟ್ಯಾಕ್ಸ್ ಕಟ್ಟಬೇಕು. ಹತ್ತು ಮಕ್ಕಳನ್ನ ಹೆತ್ತವರು ಅದರ ಉಪಯೋಗ ತಗೆದುಕೊಳ್ಳಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಪಕ್ಷದ ಮುಖಂಡ ನಾರಾಯಣಸಾ ಭಾಂಡೆಗೆ

ಉಸ್ಮಾನ್ ಗಣಿ ಹುಮನಾಬಾದ್ ವಿರುದ್ಧ ಕಿಡಿ: ಇದೇ ಸಮಯದಲ್ಲಿ ಭಾರತ ಮಾತೆಗೆ ಅವಮಾನ ಮಾಡಿದ ಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ್ ಗಣಿ ಹುಮನಾಬಾದ್ ವಿರುದ್ಧ ಅವರು ಕಿಡಿಕಾರಿದರು. ಬಸವಣ್ಣನವರ ಬಗ್ಗೆ ಹೀನಾಯವಾಗಿ ಮಾತಾಡಿದ್ರು ಕೂಡ ಯಾವ ಮಠಾಧೀಶರು ಪ್ರತಿಕ್ರಿಯೆ ನೀಡದಿರುವುದು ನನಗೆ ಇದು ಆಶ್ಚರ್ಯ ಆಯಿತು ಎಂದರು.

ಶಾಲಾ - ಕಾಲೇಜುಗಳಲ್ಲಿ ಬುರ್ಖಾ ನಿಷೇಧಿಸಬೇಕು: ಬೆಳಗ್ಗೆ, ಮಧ್ಯಾಹ್ನ,ರಾತ್ರಿ ದಿನಕ್ಕೆ ಏಳೆಂಟು ಸಲ ನಮಾಜ್ ಮಾಡುತ್ತಾರೆ. ಇದರಿಂದ ಅನೇಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಮಸೀದಿ ಸುತ್ತಮುತ್ತಲಿನ ಪರಿಸರಕ್ಕೆ ತೊಂದರೆ ಆಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಸೀದಿಗಳ ಧ್ವನಿವರ್ಧಕ ಮೂಲಕವೇ ಹಿಂದೂಗಳ ಮೇಲೆ ಹಲ್ಲೆಗೆ ಕರೆ ನೀಡಲಾಗುತ್ತಿದೆ. ಶಾಲಾ - ಮಕ್ಕಳಲ್ಲಿ ಸಮಾನತೆಗಾಗಿ ಸಮವಸ್ತ್ರ ಜಾರಿಗೆ ತರಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಬುರ್ಖಾ ಧರಿಸಲು ಅವಕಾಶ ನೀಡಬಾರದು ಎಂದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.