ETV Bharat / state

ಕೋವಿಡ್ ರೋಗಿಗಳು ಮತ್ತು ಸಂಬಂಧಿಗಳಿಗೆ ಸಂಕಲ್ಪ ಸೇವಾ ಪ್ರತಿಷ್ಠಾನದ ಸೇವೆ - ಬಾಗಲಕೋಟೆ ಲೇಟೆಸ್ಟ್ ನ್ಯೂಸ್

ಖಾಸಗಿ ಆಸ್ಪತ್ರೆಗೆ ಬಂದವರಿಗೆ ಊಟ ಹೊಟೇಲ್ ಬಂದ್​ ಆಗಿರುವುದರಿಂದ ತೊಂದರೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಕೇವಲ ಖಾಸಗಿ ಆಸ್ಪತ್ರೆಗೆ ಮಾತ್ರ ಊಟದ ಕಿಟ್ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

food-kits-distributed-from-youth-in-bagalkote
ಕೋವಿಡ್ ರೋಗಿಗಳು ಮತ್ತು ಸಂಬಂಧಿಗಳಿಗೆ ಸಂಕಲ್ಪ ಸೇವಾ ಪ್ರತಿಷ್ಠಾನದ ಸೇವೆ
author img

By

Published : May 21, 2021, 1:31 AM IST

ಬಾಗಲಕೋಟೆ: ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಖಾಸಗಿ ಆಸ್ಪತ್ರೆಗೆ ಬಂದಿರುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಊಟದ ಕಿಟ್ ನೀಡುವ ಮೂಲಕ ‌ಬ್ರಾಹ್ಮಣ ಸಮಾಜದ ಯುವಕರು ಮಾನವೀಯತೆ ಮೆರೆಯುತ್ತಿದ್ದಾರೆ.

ಆಹಾರ ವಿತರಣೆ ಮಾಡುತ್ತಿರುವ ಸಂಕಲ್ಪ ಸೇವಾ ಪ್ರತಿಷ್ಠಾನ

ಸಂಕಲ್ಪ ಸೇವಾ ಪ್ರತಿಷ್ಠಾನ ಎಂದು ಸಂಘಟನೆ ಮಾಡಿಕೊಂಡು ಎಲ್ಲರೂ ಹಣ ಕೂಡಿಸಿ, ಪ್ರತಿ ನಿತ್ಯ 200 ಜನರಿಗೆ ಆಗುವ ಆಹಾರದ ಕಿಟ್ ಅನ್ನು ತೆಗೆದುಕೊಂಡು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಕೋವಿಡ್ ರೋಗಿಗಳು ಸೇರಿದಂತೆ ಅವರ ಸಂಬಂಧಿಕರು, ಊಟ ಮಾಡದೆ ಇರುವವರು , ಯಾರೇ ಇದ್ದರೂ, ಅವರನ್ನು ಕರೆದು ಊಟದ ಕಿಟ್ ನೀಡುತ್ತಾರೆ‌.

ಕಳೆದ ಮೂರು ದಿನಗಳಿಂದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಬೆಳ್ಳಗೆಯಿಂದ ಊಟಕ್ಕೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡು, ಎರಡು ಚಪಾತಿ, ಕಾಳು ಪಲ್ಯ, ಅನ್ನ ಹಾಗೂ ಊಪ್ಪಿನಕಾಯಿ ಇಟ್ಟು ಎಲ್ಲವೂ‌ ಪ್ಯಾಕ್ ಮಾಡಿ, ಪ್ಲಾಸ್ಟಿಕ್ ಚೀಲ ಹಾಕಿಕೊಂಡು, ಚಿಕ್ಕ ವಾಹನದ ಮೂಲಕ ಕೇವಲ‌ ಖಾಸಗಿ ಆಸ್ಪತ್ರೆಗಳಿಗೆ‌ ಬಂದಿರುವ ರೋಗಿಗಳಿಗೆ ಮಾತ್ರ ಊಟವನ್ನು‌ ವಿತರಿಸಿದ್ದಾರೆ.

ಇದನ್ನೂ ಓದಿ: ಭಯಂಕರ ವಾಮಾಚಾರಕ್ಕೆ ಬೆಚ್ಚಿ ಬಿದ್ದ ಬೇಲೂರು ತಾಲೂಕಿನ ಜನತೆ..!

ಊಟದ ‌ಕಿಟ್ ಜೊತೆಗೆ ಒಂದು‌ ನೀರಿನ ಬಾಟಲ್ ಸಹ ನೀಡುತ್ತಾರೆ. ಸರಕಾರಿ ಆಸ್ಪತ್ರೆಯಲ್ಲಿ ಆಹಾರವನ್ನು ವಿತರಣೆ ಮಾಡುತ್ತಾರೆ. ಹೀಗಾಗಿ ಖಾಸಗಿ ಆಸ್ಪತ್ರೆಗೆ ಬಂದವರಿಗೆ ಊಟ ಹೊಟೇಲ್ ಬಂದ್​ ಆಗಿರುವುದರಿಂದ ತೊಂದರೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಕೇವಲ ಖಾಸಗಿ ಆಸ್ಪತ್ರೆಗೆ ಮಾತ್ರ ಊಟದ ಕಿಟ್ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಯಾರದೇ ಸಹಾಯ ಹಸ್ತ ಇಲ್ಲದೆ, ಬ್ರಾಹ್ಮಣ ಸಮಾಜದ ಯುವಕರು ಸೇರಿಕೊಂಡು ಇಂತಹ ಕೆಲಸ ಮಾಡಲು‌ ಮುಂದಾಗಿದ್ದೇವೆ. ಯಾರಾದರೂ ಸಹಾಯ ನೀಡಿದರೆ ತೆಗೆದುಕೊಳ್ಳುವುದಾಗಿ ತಿಳಿಸಿದ್ದು, ಮುಂದೆ ಬಾದಾಮಿಯ ಮಂಗಗಳಿಗೂ ಹಣ್ಣು‌ ನೀಡುವ ಚಿಂತನೆ ಸಹ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.