ETV Bharat / state

ನಮಗೆ ಸೂರು ಕಲ್ಪಿಸಿ: ಬಾಗಲಕೋಟೆಯಲ್ಲಿ ನೆರೆ ಸಂತ್ರಸ್ತರ ಅಳಲು - ಕರ್ನಾಟಕ ಪ್ರವಾಹ 2019

ಹತ್ತು ವರ್ಷದಿಂದ ನಾವು ಹೋರಾಟ ಮಾಡುತ್ತಿದ್ದು, ಸರ್ಕಾರ ಕಣ್ಣು ತೆರೆದಿಲ್ಲ. ಸಂತ್ರಸ್ತರ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ನೆರೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.

swde
ಬಾಗಲಕೋಟೆಯಲ್ಲಿ ಪ್ರತಿಭಟಿಸಿ ನೆರೆ ಸಂತ್ರಸ್ತರ ಅಳಲು
author img

By

Published : Nov 26, 2019, 7:52 PM IST

ಬಾಗಲಕೋಟೆ: ನೆರೆ ಸಂತ್ರಸ್ತರಿಗೆ ಪರಿಹಾರಧನ ಹಾಗೂ ಮನೆಗಳನ್ನು ನಿರ್ಮಾಣ ಮಾಡುವಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕು ತಹಶೀಲ್ದಾರ್ ​ಕಚೇರಿ ಎದುರು ನೆರೆ ಸಂತ್ರಸ್ತರು ಪ್ರತಿಭಟನೆ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ನೆರೆ ಸಂತ್ರಸ್ತರಿಂದ ಪ್ರತಿಭಟನೆ
ಘಟಪ್ರಭಾ ನದಿ ಪ್ರವಾಹದಿಂದ ಮನೆಗಳು ಹಾನಿಗೊಳಗಾಗಿದ್ದು, ಸರ್ಕಾರದಿಂದ ಪುನರ್​ ನಿರ್ಮಾಣ ಮಾಡುವಲ್ಲಿ ಅನ್ಯಾಯವಾಗಿದೆ. ಈ ಕುರಿತು ಅಗತ್ಯ ಕ್ರಮ ಜರುಗಿಸಿ ಅನ್ಯಾಯವಾದ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಢವಳೇಶ್ವರ ಗ್ರಾಮದ 2009ರಲ್ಲಿ ಉಂಟಾದ ಪ್ರವಾಹ ಸಂದರ್ಭ ಮತ್ತು ಇತ್ತೀಚಿನ ಪ್ರವಾಹ ಸಂದರ್ಭಗಳಲ್ಲಿಯೂ ಢವಳೇಶ್ವರ ಗ್ರಾಮದಲ್ಲಿನ ಬಡವರಿಗೆ ಮಾತ್ರ ಅನ್ಯಾಯವಾಗಿದೆ. ಘಟಪ್ರಭಾ ನದಿಯ ಪ್ರವಾಹದ ಹಿನ್ನೆಲೆ ಗ್ರಾಮ ಸಂಪೂರ್ಣ ಮುಳುಗಿ ಹೋಗಿತ್ತು. ಹೀಗಾಗಿ ಸಾಕಷ್ಟು ಮನೆಗಳು ಬಿದ್ದು ಜನರ ಬದುಕು ಬೀದಿಗೆ ಬಂದಿತ್ತು. ಈ ಮಧ್ಯೆ ಸರ್ಕಾರ ತಕ್ಷಣ ಪರಿಹಾರ ನೀಡಿ ಮನೆಗಳ ಸರ್ವೇ ಕಾರ್ಯ ನಡೆಸಲು ಆರಂಭಿಸಿದಾಗ ಅಧಿಕಾರಿಗಳು ತಮಗಿಷ್ಟ ಬಂದತೆ ಮನೆಗಳ ಸರ್ವೇ ಕಾರ್ಯ ಮಾಡಿದ್ದಾರೆ ಎಂದು ಸಂತ್ರಸ್ತ ಮುಖಂಡ ಕಲ್ಲಪ್ಪ ಕಡಬಲ್ಲನವರ ಆರೋಪಿಸಿದ್ದಾರೆ.

Intro:AnchorBody:ಬಾಗಲಕೋಟೆ--ನೆರೆ ಸಂತ್ರಸ್ತರಿಗೆ ಪರಿಹಾರ ಧನ ಹಾಗೂ ಮನೆಗಳನ್ನು ನಿರ್ಮಾಣ ಮಾಡುವಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ,ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತಹಶಿಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು..

ಘಟಪ್ರಭಾ ನದಿಯ ಪ್ರವಾಹದಿಂದ ವಾಸವಾಗಿರುವ ಮನೆಗಳು ಹಾನಿಗೊಳಗಾಗಿದ್ದು ಸರಕಾರದಿಂದ ಪುನರ ನಿರ್ಮಾಣ ಮಾಡುವಲ್ಲಿ ಅನ್ಯಾಯವಾಗಿದ್ದು ಅದರ ಕುರಿತು ಅಗತ್ಯ ಕ್ರಮ ಜರುಗಿಸಿ ಅನ್ಯಾಯವಾದ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು ಎಂದು ರಬಕವಿ-ಬನಹಟ್ಟಿ ತಾಲ್ಲೂಕಿನ ಆಗ್ರಹಿಸಿ ಢವಳೇಶ್ವರ ಗ್ರಾಮದ ಗ್ರಾಮಸ್ಥರು ಮುಖಂಡ ಕಲ್ಲಪ್ಪ ಕಡಬಲ್ಲನವರ ನೇತೃತ್ವದಲ್ಲಿ ಧರಣಿ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಢವಳೇಶ್ವರ ಗ್ರಾಮದ ಸಂತ್ರಸ್ತ ಮುಖಂಡರಾದ ಕಲ್ಲಪ್ಪ ಕಡಬಲ್ಲನವರ ಮಾತನಾಡಿ, ೨೦೦೯ರಲ್ಲಿ ಉಂಟಾದ ಪ್ರವಾಹ ಸಂದರ್ಭ ಮತ್ತು ಇತ್ತೀಚಿಗಿನ ಪ್ರವಾಹ ಸಂದರ್ಭಗಳಲ್ಲಿಯೂ ಢವಳೇಶ್ವರ ಗ್ರಾಮದಲ್ಲಿನ ಬಡವರಿಗೆ ಮಾತ್ರ ಅನ್ಯಾಯವಾಗಿದೆ. ಇತ್ತೀಚಿಗೆ ಘಟಪ್ರಭಾ ನದಿಯ ಪ್ರವಾಹದ ಹಿನ್ನೆಲೆಯಲ್ಲಿ ಇಡೀ ಗ್ರಾಮ ಸಂಪೂರ್ಣ ಮುಳುಗಿ ಹೋಗಿತ್ತು. ಹೀಗಾಗಿ ಸಾಕಷ್ಟು ಮನೆಗಳು ಬಿದ್ದು ಜನರ ಬದುಕು ಬೀದಿಗೆ ಬಂದಿತ್ತು. ಈ ಮಧ್ಯೆ ಸರ್ಕಾರ ತಕ್ಷಣ ಪರಿಹಾರ ನೀಡಿ ಮನೆಗಳ ಸರ್ವೇ ಕಾರ್ಯ ನಡಿಸಲು ಆರಂಭಿಸಿದಾಗ ಅಧಿಕಾರಿಗಳು ತಮಗಿಷ್ಟ ಬಂದತೆ ಮನೆಗಳ ಸರ್ವೇ ಕಾರ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದೇ ಕುಟುಂಬದವರಿಗೆ ೪ ಮನೆ ಮಂಜೂರು ಮಾಡಿದ್ದಾರೆ. ಅದರಲ್ಲೂ ಹಿಂದುಳಿದ, ದಲಿತ ವರ್ಗದವರಿಗೆ ನ್ಯಾಯ ಸಿಕ್ಕಿಲ್ಲ. ಉಳಿದಂತಹ ಮುಂದುವರೆದತಹ ಜನರಿಗೆ ಮನೆಗಳು ದೊರಕಿವೆ. ಅಧಿಕಾರಿಗಳು ಹಾಗೂ ಸ್ಥಳಿಯ ಪಟ್ಟಬಧ್ದ ಹಿತಾಸಕ್ತಿಗಳು ಬಡ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವುದರ ಜೊತೆಗೆ ಅವರ ಶೋಷಣೆ ಮಾಡುತ್ತಿದ್ದಾರೆ.
         ಪ್ರವಾಹದಿಂದ ದುಃಖಕ್ಕೆ ಒಳಗಾಗಿ, ಇರಲು ಮನೆಯಿಲ್ಲ, ಉದ್ಯೋಗವಿಲ್ಲ, ತಿನ್ನಲು ಅನ್ನ ಇಲ್ಲ ಇಂತಹ ಪರಸ್ಥಿತಿಯಲ್ಲಿ ಬಡವರು ಒದ್ದಾಡಿ ಸಾಯುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಾವು ಹೋರಾಟ ಮಾಡುತ್ತಿದ್ದು ಸರಕಾರ ಕಣ್ಣು ತೆರೆದಿಲ್ಲ. ಸಂತ್ರಸ್ತರ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು..
         
ಈ ಸಂದರ್ಭದಲ್ಲಿ ಶಿವಯ್ಯ ಹಿರೇಮಠ, ಕಲಂಧರ ನಧಾಪ, ರಮೇಶ ಮರಾಠಿ, ಮಲ್ಲಪ್ಪ ಪಟೇದ, ಚಂದ್ರವ್ವ ಕಡಬಲ್ಲನವರ, ಬಸಪ್ಪ ಪಾಟೀಲ, ಮಾಲವ್ವ ವಡರಟ್ಟಿ, ಚಂದ್ರವ್ವ ತಳವಾರ, ಸುಲವ್ವ ಮಾಂಗ, ಸಂಗೀತಾ ಮಾಂಗ, ಗಂಗವ್ವ ವಡರಟ್ಟಿ ಸೇರಿದಂತೆ ೩೦ಕ್ಕೂ ಅಧಿಕ ಫಲಾನುಭವಿಗಳು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಬೈಟ್--ಕಲ್ಲಪ್ಪ ಕಡಬಲ್ಲನವರ( ಸಂತ್ರಸ್ತರ ಮುಖಂಡ)Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.