ಬಾಗಲಕೋಟೆ: ಜಿಲ್ಲೆಯಲ್ಲಿ ಮೃತಪಟ್ಟಿದ್ದ ಕೊರೊನಾ ಸೋಂಕಿತ ವೃದ್ಧನ ಪತ್ನಿ ಹಾಗೂ ಸಹೋದರನ ಪ್ರಥಮ ವರದಿ ನೆಗೆಟಿವ್ ಬಂದಿದೆ.
ನಗರದ ಹಳಪೇಟ ಮಡು ಏರಿಯಾದ 76 ವರ್ಷದ ವೃದ್ಧನಿಗೆ ಮಾರ್ಚ್ 30 ಕೊರೊನಾ ದೃಢಪಟ್ಟಿತ್ತು. ಏಪ್ರಿಲ್ 3ರಂದು ಆತ ಮೃತಪಟ್ಟಿದ್ದ. ಬಳಿಕ ಆತನ ಮನೆಯ ಸದಸ್ಯರೆಲ್ಲರನ್ನೂ ತಪಾಸಣೆ ಮಾಡಿದಾಗ ವೃದ್ಧನ ಪತ್ನಿ ಪಿ-162 ಹಾಗೂ ಆತನ ಸಹೋದರ ಪಿ-161 ಗೆ ಸೋಂಕು ತಗಲಿರುವುದು ಏಪ್ರಿಲ್ 6 ರಂದು ದೃಢಪಟ್ಟಿತ್ತು. ಹೀಗಾಗಿ ಅವರನ್ನ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು.
14 ದಿನಗಳು ಬಳಿಕ ಮತ್ತೊಮ್ಮೆ ಅವರ ಗಂಟಲು ದ್ರವ ತಪಾಸಣೆಗೆ ಕಳುಹಿಸಲಾಗಿದ್ದು,ಇದೀಗ ಅವರ ಪ್ರಥಮ ವರದಿ ನೆಗೆಟಿವ್ ಬಂದಿದೆ. ಇವರ ದ್ವಿತೀಯ ವರದಿ ಬಂದ ಬಳಿಕ ಕೋವಿಡ್ 19 ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿ ಅನಂತ್ಕುಮಾರ್ ದೇಸಾಯಿ ತಿಳಿಸಿದ್ದಾರೆ.