ETV Bharat / state

ಅಬಕಾರಿ ಅಧಿಕಾರಿಗಳ ದಾಳಿ: 13 ಲೀಟರ್ ಕಳ್ಳಭಟ್ಟಿ, ಒಂದು ವಾಹನ ಜಪ್ತಿ - Bagalkote crime latest news

ಬಾಗಲಕೋಟೆ ತಾಲೂಕಿನ ಹೊಸೂರ ಗ್ರಾಮದ ಬಳಿ ಸೀತಿಮತಿ ತಾಂಡಾದಿಂದ ನಾಗಸಂಪಿಗೆ ಗ್ರಾಮಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಕಳ್ಳಭಟ್ಟಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Bagalkote
Bagalkote
author img

By

Published : Aug 14, 2020, 11:59 AM IST

ಬಾಗಲಕೋಟೆ: ತಾಲೂಕಿನ ಹೊಸೂರ ಗ್ರಾಮದ ಬಳಿ ಸೀತಿಮನಿ ತಾಂಡಾದಿಂದ ನಾಗಸಂಪಿಗೆ ಗ್ರಾಮಕ್ಕೆ ಆಟೋದಲ್ಲಿ ಸಾಗಿಸುತ್ತಿದ್ದ 13 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.

ಅಬಕಾರಿ ಉಪ ಆಯುಕ್ತ ರಮೇಶ್ ಕುಮಾರ ಹೆಚ್. ಆದೇಶದ ಮೇರೆಗೆ ಅಬಕಾರಿ ಉಪ ಅಧೀಕ್ಷಕ ಎಸ್.ಎಸ್.ಹಿರೇಮಠ ನೇತೃತ್ವದ ತಂಡ ಪತ್ತೆ ಹಚ್ಚಿ ದಾಳಿ ನಡೆಸಿದೆ. ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕ ಮಂಜುನಾಥ ಸಿಂಗರೆಡ್ಡಿ ಹಾಗೂ ಸಿಬ್ಬಂದಿ ಬಸವರಾಜ ಬಾಳಶೆಟ್ಟಿ, ಸುರೇಶ ಕುರಣಿ, ಶಿವಾನಂದ ತಳವಾರ, ರಾಜು ಬಳ್ಳಬಟ್ಟಿ ಇದ್ದರು.

ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ಮಾಹೆಯಲ್ಲಿ 327 ದಾಳಿ ಮಾಡಿದ್ದು, 16 ಪ್ರಕರಣ, 16 ಜನ ಆರೋಪಿಗಳು ಸೇರಿದಂತೆ 2 ತ್ರಿಚಕ್ರ ವಾಹನ, 6 ದ್ವಿಚಕ್ರ ವಾಹನ, 147 ಲೀಟರ್ ಕಳ್ಳಭಟ್ಟಿ ಸಾರಾಯಿ ಜಪ್ತಿ ಮಾಡಲಾಗಿದೆ.

ಕಳ್ಳಭಟ್ಟಿ, ನಕಲಿ ಮದ್ಯ, ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಈ ಕೆಳಗಿನ ಅಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಬಾಗಲಕೋಟೆ ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಬಕಾರಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆ ಇಂತಿದೆ. ಅಬಕಾರಿ ಉಪ ಆಯುಕ್ತ ರಮೇಶ ಕುಮಾರ್​ ಹೆಚ್. (9449597078), ಅಬಕಾರಿ ಉಪ ಅಧೀಕ್ಷಕರ ಎಸ್.ಎಸ್.ಹಿರೇಮಠ (9449597081), ಅಬಕಾರಿ ಉಪ ಅಧೀಕ್ಷಕ ಆರ್.ಮುದ್ದಿಗೌಡರ (9449597079), ಅಬಕಾರಿ ನಿರೀಕ್ಷಕ ಪಿ.ಎಂ.ಪಾಟೀಲ (9449597080), ಅಬಕಾರಿ ನಿರೀಕ್ಷಕ ವಿಠಲ ಪೀರಗಣ್ಣವರ (9449597082), ಮಲ್ಲನಗೌಡ ಪಾಟೀಲ (9663280426), ಸಂಗಮೇಶ ಮುರನಾಳ (8073463300), ಅನೀಲ ನಂದಿಕೇಶ್ವರ (9632828977), ಪಿ.ಎಂ.ಪಾಟೀಲ (9449597080).

ETV Bharat Logo

Copyright © 2025 Ushodaya Enterprises Pvt. Ltd., All Rights Reserved.