ETV Bharat / state

ಓರ್ವ ಚಾಯ್​ವಾಲಾ PM ಆಗಿರುವಾಗ ನಂಗ್ಯಾಕೆ ಹಿಂಜರಿಕೆ.. ಬಾಗಲಕೋಟೆ ಇಂಜಿನಿಯರ್​ ಬನ್​ ಗಯಾ ಚಾಯ್​ವಾಲಾ!

ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ನಿವಾಸಿಯಾಗಿರುವ ಅಮೀರ್ ಸೋಯಲ್ ಡಿಪ್ಲೋಮಾದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಸದ್ಯ ಚಹಾ ಅಂಗಡಿ ನಡೆಸುತ್ತಿದ್ದಾರೆ.

bagalkote
ಚಾಯ್​ವಾಲಾ ಅಮೀರ್ ಸೋಯಲ್
author img

By

Published : Jul 4, 2021, 1:02 PM IST

Updated : Jul 4, 2021, 1:20 PM IST

ಬಾಗಲಕೋಟೆ: ''ಚಾಯ್​ವಾಲಾ ಆಗಿದ್ದವರು ಪ್ರಧಾನಮಂತ್ರಿ ಆಗ್ಬ​ಬೋದು, ಹಾಗಾದ್ರೆ ಇಂಜಿನಿಯರ್​ ಯಾಕ್​ ಚಾಯ್​ವಾಲಾ ಆಗ್​ಬಾರ್ದು ರೀ... ಏನಾದ್ರೂ ಸ್ಟಾರ್ಟ್​ ಅಪ್​ ಮಾಡೋಣ..ಪ್ರೊಫೇಶನ್​ ಯಾವುದಾದ್ರೆ ಏನು.. ಹಣ ಬರ್ತಿದೆ ಸಾಕು, ಬ್ಯುಸಿನೆಸ್​​ ನಡೀತಿದ್ರೆ ಸಾಕು, ಯಾವುದೇ ಕೆಲಸ ಮಾಡೋಕ್​ ಹಿಂಜರಿಬಾರ್ದು ರೀ ಅಚ್ಚುಕಟ್ಟಾಗಿ ಮಾಡಿದ್ರೆ ಪ್ರಾಫಿಟ್​​ ಪಕ್ಕಾ ರೀ'' ಅನ್ನೋದು ಇಂಜಿನಿಯರಿಂಗ್ ಓದಿ ಚಾಯ್​ವಾಲಾ ಆದ ಅಮೀರ್​​ ಸೋಯಲ್ ಅಭಿಪ್ರಾಯ.

ಚಾಯ್​ವಾಲಾ ಅಮೀರ್ ಸೋಯಲ್

ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ನಿವಾಸಿಯಾಗಿರುವ ಅಮೀರ್ ಸೋಯಲ್ ಡಿಪ್ಲೋಮಾದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಸದ್ಯ ಚಹಾ ಅಂಗಡಿ ನಡೆಸುತ್ತಿದ್ದಾರೆ. ಡಿಪ್ಲೋಮಾ ಬಳಿಕ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ರು. ಆದರೆ ಕಂಪನಿಯಲ್ಲಿನ ಕಿರಿಕಿರಿ ಹಾಗೂ ಕಡಿಮೆ ವೇತನದಿಂದ‌ ಬೇಸತ್ತು ತವರಿಗೆ ವಾಪಸ್​ ಆದ್ರು. ಆ ಬಳಿಕ ನಗರದಲ್ಲಿ 'ಇಂಜಿನಿಯರ್​ ಬನ್​ ಗಯಾ ಚಾಯ್​ವಾಲಾ' ತಾಂತ್ರಿಕ ಚಹಾವನ್ನು ಸವಿಯಿರಿ ಎಂಬ ಬೋರ್ಡ್​ಅನ್ನು ಅಂಗಡಿಗೆ ಹಾಕಿದ್ದಾರೆ. ಈ ಮೂಲಕ ಸ್ಪೆಷಲ್ ಚಹಾ ತಯಾರಿಸಿ ಸ್ವಯಂ ಉದ್ಯೋಗಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ.

ತಾವು ಚಹಾ ಬ್ಯುಸಿನೆಸ್ ಮಾಡಲು ಪ್ರೇರಣೆ ಪ್ರಧಾನಮಂತ್ರಿ ಮೋದಿ ಅವರೇ ಅಂತಾರೆ ಅಮೀರ್​. ಬಾಗಲಕೋಟೆ ನಗರದ ವಲ್ಲಭಭಾಯಿ ವೃತ್ತದ ಬಳಿ ಚಿಕ್ಕದಾದ ಡಬ್ಬಾ ಅಂಗಡಿ ಇಟ್ಟುಕೊಂಡು ಟೀ ವ್ಯಾಪಾರ ಮಾಡುತ್ತಿದ್ದಾರೆ. ಚಹಾ ಜೊತೆಗೆ ಬಿಸ್ಕತ್​, ಕೇಕ್, ಬನ್ ಹಾಗೂ ಟೋಸ್ಟ್ ಅನ್ನು ಹೈದರಾಬಾದ್​​ನಿಂದ ತರಿಸಿ ಮಾರಾಟ ಮಾಡಿ, ಪ್ರತಿ ತಿಂಗಳ ಖಾಸಗಿ ಕಂಪನಿಯ ವೇತನಕ್ಕಿಂತ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.

ಕೋವಿಡ್​ ಲಾಕ್​ಡೌನ್​ನಿಂದಾಗಿ ವ್ಯಾಪಾರ ಡಲ್​​ ಆಗಿದ್ದು, ಈಗೀಗ ಚೇತರಿಸಿಕೊಳ್ಳುತ್ತಿರುವುದಾಗಿ ಅಮೀರ್​ ಹೇಳಿದ್ದಾರೆ. ಈ ಹಿಂದೆ ಒಂದು ಸಾವಿರ ಕಪ್ ಚಹಾ ಮಾರಾಟ ಆಗುತ್ತಿತ್ತು. ಈಗ ಕೇವಲ 500 ಕಪ್​ ಚಹಾ ಮಾರಾಟ ಆಗುತ್ತಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ವಹಿವಾಟು ನಡೆಯಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಖಾಸಗಿ ಕೆಲಸಕ್ಕೆ ಗುಡ್​ ಬೈ ಹೇಳಿ ವ್ಯವಸ್ಥಿತವಾಗಿ ಚಹಾ ಅಂಗಡಿ ತೆರೆದು ಸ್ವ ಉದ್ಯೋಗ ಆರಂಭಿಸಿ ಅದರಲ್ಲಿ ಲಾಭ ಪಡೆಯುತ್ತಿರುವ ಬಗ್ಗೆ ಅಮೀರ್​ ಹೆಮ್ಮೆಯಿಂದ ಹರ್ಷ ವ್ಯಕ್ತಪಡಿಸುತ್ತಾರೆ.

Last Updated : Jul 4, 2021, 1:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.