ETV Bharat / state

ಕನ್ನಡದ ಕಬೀರನ ಜೋತೆ 20 ವರ್ಷ ಸಂಗೀತ ಸೇವೆ ಸಲ್ಲಿಸಿದ ಕಲಾವಿದನಿಗಿಲ್ಲ 'ಮಾಸಾಶನ ಭಾಗ್ಯ' - kannada news

ಕವಿಯ ಮನದ ಭಾವನೆ ಕೋಗಿಲೆಗೆ ತಿಳಿಯುತ್ತದೆ ಎಂಬಂತೆ ನಾಡಿನಲ್ಲಿ ಹೂ ಮರೆ ಕಾಯಿಯಂತೆ ಜೀವನ ಸಾಗಿಸುತ್ತಿರುವ ಅನೇಕ ಕಲಾವಿದರಿಗೆ 'ಮಾಸಾಶನ' ಎನ್ನುವುದು ಕೈಗೆಟುಕದ ನಕ್ಷತ್ರವಾಗಿದೆ.

ಕಲಾವಿದ ಪ್ರಕಾಶ ರಾವಳ
author img

By

Published : Apr 9, 2019, 2:06 PM IST

ಬಾಗಲಕೋಟೆ : ಕಲಾವಿದರ ಬದುಕೇ ಹಾಗೆ, ತನ್ನ ಜೀವನವನ್ನೇ ಧಾರೆಯೆರೆದು ಕಲಾಪೋಷಣೆಗೆ ನಿಲ್ಲುತ್ತಾರೆ, ಕೊನೆಗೆ ತಮ್ಮ ಬದುಕು ಕತ್ತಲಾದರೂ ಕಲಾ ಆರಾಧನೆ ಮಾತ್ರ ಬಿಡುವುದಿಲ್ಲ. ಆದರೆ ಅಂತಹ ಸಾಧಕರಿಗೆ ಸರ್ಕಾರದ ಸೌಲಭ್ಯ ಸಿಗುವುದು ಕಷ್ಟಕರ ಸಂಗತಿಯಾಗಿದೆ.

ರಬಕವಿ-ಬನಹಟ್ಟಿ ತಾಲೂಕಿನ ನಿವಾಸಿಯಾಗಿರುವ ಪ್ರಕಾಶ ರಾವಳ ನಾಲ್ಕು ದಶಕಗಳಿಂದ ತಬಲಾ ವಾದ್ಯದೊಂದಿಗೆ ಗಾಯನಕ್ಕೆ ಜೀವ ತುಂಬಿ ಇದಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆದರೆ
ಬಡತನವೆಂಬ ಕೂಪದಿಂದ ಬದುಕು ಸಾಗಿಸುವದೇ ದುಸ್ಥರವಾಗಿದೆ. ಕಲಾವಿದರಿಗಾಗಿ ರೂಪಿಸಿರುವ ಸರ್ಕಾರದ ಮಾಸಾಶನಕ್ಕೆ ಕಚೇರಿಗೆ ಅಲೆದು ಸುಸ್ತಾಗಿ ಸದ್ಯ ಸುಮ್ಮನೇ ಕುಳಿತಿರುವದು ದುರದೃಷ್ಟಕರ ಸಂಗತಿಯಾಗಿದ್ದು, ಯಾವದೇ ರೀತಿಯ ಸಹಾಯ ಸರ್ಕಾರದಿಂದ ದೊರಕಿಲ್ಲ.

ಕನ್ನಡದ ಕಬೀರ, ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತರಾದ ಇಬ್ರಾಹಿಂ ಸುತಾರ ಅವರೊಂದಿಗೆ 20 ವರ್ಷಗಳ ಕಾಲ ತಬಲಾ ವಾದಕರಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರದ ಪುಣೆ, ಸಾಂಗ್ಲಿ, ಕೊಲ್ಹಾಪೂರ ಸೇರಿದಂತೆ ಅನೇಕ ಕಡೆಗಳಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ಇವರದಾಗಿದೆ. ನಗರದ ಆರಾಧ್ಯದೈವ ಶ್ರೀ ಕಾಡಸಿದ್ಧೇಶ್ವರ ದೇವಸ್ಥಾನದಲ್ಲಿ ಭಜನೆ, ಗಾಯನದೊಂದಿಗೆ ದಿನಂಪ್ರತಿ ಒಂದು ಗಂಟೆ ಕಾಲ ಸೇವೆ ಸಲ್ಲಿಸಿದವರು ಪ್ರಕಾಶ ರಾವಳ.

ಭಜನಾ ಪದ, ವಚನ ಹಾಗು ಜಾನಪದ ಗೀತೆಗಳನ್ನು ತಬಲಾ ವಾದನದೊಂದಿಗೆ ಹಾಡುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಕೀರ್ತಿ ಇವರದಾಗಿದೆ. ತಬಲಾದಲ್ಲಿನ 'ಬಯಲ ಬಾಜ್' ಹಾಗು 'ಲೈಟ್ ಮ್ಯೂಜಿಕ್‍' ನಲ್ಲಿ ಹೆಚ್ಚು ಕರಗತ ಮಾಡಿಕೊಂಡಿರುವ ಇಂತಹ ಮಹೋನ್ನತ ಕಲಾವಿದ ಕಳೆದ ನಾಲ್ಕೈದು ವರ್ಷಗಳಿಂದ ಮಾಶಾಸನಕ್ಕಾಗಿ ಸರ್ಕಾರಿ ಕಚೇರಿಗಳನ್ನು ಅಲೆದು, ಹಲವಾರು ಬಾರಿ ಅರ್ಜಿಗಳನ್ನು ನೀಡಿದರೂ ಯಾವದೇ ಪ್ರಯೋಜನವಾಗಿಲ್ಲ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.