ಬಾಗಲಕೋಟೆ: ಲಂಬಾಣಿ ಜನಾಂಗವನ್ನು ಪರಿಶಿಷ್ಟ ಜಾತಿ/ಪಂಗಡದಿಂದ ಕೈ ಬಿಡದಂತೆ ಸರ್ಕಾರ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಇಳಕಲ್ ತಾಲೂಕಿನ ಚಿಕ್ಕ ಕೂಡಗಲಿ ತಾಂಡದ ಜನತೆ ಪತ್ರ ಚಳವಳಿ ನಡೆಸಿದ್ದಾರೆ.
ಸುಮಾರು 500ಕ್ಕೂ ಹೆಚ್ಚು ಪತ್ರದಲ್ಲಿ ಮನವಿ ಬರೆದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಳಿಸುವ ಮೂಲಕ ಪತ್ರ ಚಳವಳಿ ನಡೆಸಿದ್ದಾರೆ.
ಕೋರಮ, ಕೊಂಚ ಹಾಗೂ ಲಂಬಾಣಿ ಸೇರಿದಂತೆ ಇತರ ಸಮುದಾಯಗಳು ಎಸ್ಸಿ ಪಟ್ಟಿಯಿಂದ ಕೈಬಿಡುವ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ಎಸ್ಸಿ ಮೀಸಲಾತಿ ಆಯೋಗಕ್ಕೆ ವರದಿ ನೀಡುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಆಯೋಗಕ್ಕೆ ಮೀಸಲಾತಿಯಿಂದ ಲಂಬಾಣಿ ಜನಾಂಗದವರಿಗೆ ಕೈ ಬಿಡದಂತೆ ವರದಿ ಸಲ್ಲಿಸುವಂತೆ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.