ಬಾಗಲಕೋಟೆ : ನಗರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಇನ್ನರ್ ವ್ಹೀಲ್ ಕಬ್ಲ್ ಮಹಿಳಾ ಸಂಘಟನೆಯ ಜಿಲ್ಲಾ ಸಮಾವೇಶ ನಡೆಯಿತು.
ಕೋಲ್ಕತ್ತಾದಿಂದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಮತಾ ಗುಪ್ತಾ, ಜ್ಯೋತಿ ಬೆಳಗಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.
ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲಾ ಇನ್ನರ್ ವ್ಹೀಲ್ ಕ್ಲಬ್ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಂದ ಗಮನ ಸೆಳೆದಿದೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಸಾಮಾಜಿಕ ಚಟುವಟಿಕೆಗಳ ಕಾರ್ಯ ಹಮ್ಮಿಕೊಂಡಿದೆ. ಮಮತಾ ಮಿಷನ್ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅನಾಥ ಮಕ್ಕಳ ಮುಕ್ತ ಭಾರತ ನಿರ್ಮಾಣ ಸಂಕಲ್ಪ ಮಾಡಲಾಗಿದೆ. ಶಾಲೆಗಳ ಅಭಿವೃದ್ಧಿ ಸೇರಿದಂತೆ ಇತರ ಸಾಮಾಜಿಕ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮಹಿಳಾ ಕ್ಲಬ್ ಸಾಧನೆಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಮಮತಾ ಮಿಷನ್ ಕುರಿತು ಜಾಗೃತಿ ಮೂಡಿಸಲು ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಮಹಿಳೆಯರು ಬೈಕ್ ಹಾಗೂ ಕಾರು ರ್ಯಾಲಿ ನಡೆಸಿದರು.