ETV Bharat / state

ಕೂಡಲಸಂಗಮದಲ್ಲಿ ಅಭಿವೃದ್ಧಿ ಮರೀಚಿಕೆ: ಪ್ರಾಧಿಕಾರಕ್ಕೆ ಶಾಶ್ವತ ಅಧಿಕಾರಿ ನೇಮಕ ಅಗತ್ಯ - Bagalkota

ಬಸವಣ್ಣನವರ ಐಕ್ಯ ಸ್ಥಳವಾಗಿರುವ ಕೂಡಲಸಂಗಮದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಶ್ವತ ಅಧಿಕಾರಿ ಇಲ್ಲದೆ, ಅಭಿವೃದ್ಧಿ ಮರೀಚಿಕೆ ಆಗುತ್ತಿರುವುದು ಚರ್ಚೆಯ ಸಂಗತಿಯಾಗಿದೆ.

ಕೂಡಲಸಂಗಮದಲ್ಲಿ ಅಭಿವೃದ್ಧಿ ಮರೀಚಿಕೆ
ಕೂಡಲಸಂಗಮದಲ್ಲಿ ಅಭಿವೃದ್ಧಿ ಮರೀಚಿಕೆ
author img

By

Published : Aug 27, 2020, 4:29 PM IST

Updated : Aug 27, 2020, 5:03 PM IST

ಬಾಗಲಕೋಟೆ: ಧಾರ್ಮಿಕ ಕ್ಷೇತ್ರ ಹಾಗೂ ಬಸವಣ್ಣನವರ ಐಕ್ಯ ಸ್ಥಳವಾಗಿರುವ ಕೂಡಲಸಂಗಮದಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಅಸೆಡ್ಡೆಯಿಂದಾಗಿ ಅಭಿವೃದ್ಧಿ ಮರೀಚಿಕೆ ಆಗಿದೆ.

ಕೂಡಲಸಂಗಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬ ಉದ್ದೇಶದಿಂದ 1998ರಲ್ಲಿ ಮುಖ್ಯಮಂತ್ರಿಯಾಗಿದ್ದ ದಿವಂಗತ ಜೆ.ಎಚ್. ಪಟೇಲರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದರು. ಇದಕ್ಕೆ ಆಯುಕ್ತರನ್ನಾಗಿ ನೇಮಕ ಮಾಡಿ 35 ಕೋಟಿ ರೂ. ಹಣ ನೀಡಿ ಸಭಾಭವನ, ಉದ್ಯಾನವನ, ಅಂತಾರಾಷ್ಟ್ರೀಯ ಮಟ್ಟದ ಬಸವಣ್ಣನವರ ಸಂಶೋಧನೆ ಕೇಂದ್ರ ಸೇರಿದಂತೆ ವಿವಿಧ‌ ಅಭಿವೃದ್ಧಿಗೆ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ 1998ರಿಂದ‌ ಇಲ್ಲಿಯವರೆಗೆ 24 ಜನರು ಪ್ರಾಧಿಕಾರದ ಆಯುಕ್ತರಾಗಿ ಕೆಲಸ ಮಾಡಿದ್ದಾರೆ. ಆದರೆ ಇದರಲ್ಲಿ ಕೇವಲ ನಾಲ್ಕು ಜನ ಬಿಟ್ಟರೆ, ಉಳಿದ‌ 20 ಜನ ಅಧಿಕಾರಿಗಳು ಪ್ರಭಾರಿ ಆಗಿ ಕೆಲಸ ಮಾಡಿದ್ದು ಎಂಬುದೇ ಗಮನಾರ್ಹವಾಗಿದೆ.

ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಶ್ವತ ಅಧಿಕಾರ ಇಲ್ಲದೆ, ಅಭಿವೃದ್ಧಿ ಮರೀಚಿಕೆ ಆಗುತ್ತಿರುವುದು ಚರ್ಚೆಯ ಸಂಗತಿಯಾಗಿದೆ. ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳೇ ಶಾಶ್ವತ ಅಧ್ಯಕ್ಷರಾಗಿದ್ದು, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು, ಹುನಗುಂದ ಶಾಸಕರು, ಬಸವನ ಬಾಗೇವಾಡಿ, ಬೀಳಗಿ ಮತಕ್ಷೇತ್ರದ ಶಾಸಕರು ಸದಸ್ಯರಾಗಿರುತ್ತಾರೆ. ಅಲ್ಲದೆ ಅವಳಿ ಜಿಲ್ಲೆಯ ವಿಧಾನ ಪರಿಷತ್ತ್ ಸದಸ್ಯರು ಪ್ರಾಧಿಕಾರಕ್ಕೆ ಸದಸ್ಯರಾಗಿದ್ದು, ಒಟ್ಟು ಎಂಟು ಜನ ಜನಪ್ರತಿನಿಧಿಗಳು ಆಡಳಿತ ಮಂಡಳಿಯ ಸದಸ್ಯರಾಗಿರುತ್ತಾರೆ. ಆದರೆ ಪ್ರಾಧಿಕಾರಕ್ಕೆ 1998, 2005-06 ಹಾಗೂ 2019 ಸಾಲಿನ ಒಂದರಿಂದ‌ ಎರಡು ವರ್ಷದವರೆಗೆ ಶಾಶ್ವತ ಆಯುಕ್ತರಾಗಿ ನಾಲ್ವರು ಅಧಿಕಾರಿಗಳು ಕೆಲಸ ನಿರ್ವಹಣೆ ಮಾಡಿರುವುದು ಬಿಟ್ಟರೆ, ಉಳಿದವರು ಪ್ರಭಾರಿ ಆಗಿಯೇ ಇದ್ದಾರೆ.

ಈಗ ಬಾಗಲಕೋಟೆ ಉಪ ವಿಭಾಗಾಧಿಕಾರಿ ಗಂಗಪ್ಪ ಎಂಬುವವರು ಆಯುಕ್ತರಾಗಿ ಪ್ರಭಾರಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕಳೆದ ವರ್ಷ ಪ್ರವಾಹದಿಂದ ಐಕ್ಯ ಮಂಟಪ ಸ್ಥಳದಲ್ಲಿ ಬಿರುಕು ಕಂಡಿದ್ದು, ಕೆಲಸದ ನೆಪದಲ್ಲಿ ಭಕ್ತರಿಗೆ ನಿಷೇಧ ಮಾಡಲಾಗಿದೆ. ಕೆಲಸ ಪೂರ್ಣಗೊಂಡು ಎರಡು ತಿಂಗಳ ಕಳೆದರೂ, ಇದುವರೆಗೆ ಐಕ್ಯ ಮಂಟಪಕ್ಕೆ ಪ್ರವೇಶ ನೀಡುತ್ತಿಲ್ಲ. ಇದರಿಂದ ಭಕ್ತರಿಗೆ ನಿರಾಶೆ ಮೂಡಿಸಿದೆ.

ಕೊರೊನಾದಿಂದ ಭಕ್ತರ ಸಂಖ್ಯೆ ಕಡಿಮೆ ಆಗಿದ್ದು, ಐಕ್ಯ ಮಂಟಪ ನಿಷೇಧದಿಂದ ಮತ್ತಷ್ಟು ಭಕ್ತರ ಸಂಖ್ಯೆ ವಿರಳವಾಗಿದೆ. ಆದ್ದರಿಂದ ಶೀಘ್ರವಾಗಿ ಐಕ್ಯ ಮಂಟಪ ಪ್ರವೇಶಕ್ಕೆ ಅನುಕೂಲ ಮಾಡಿಕೂಡಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ. ಇದರ ಜೊತೆಗೆ ಈ ಪ್ರಾಧಿಕಾರಕ್ಕೆ ಶಾಶ್ವತ ಆಯುಕ್ತರನ್ನು ನೇಮಕಗೊಳಿಸಬೇಕಿದೆ. ಹಿಂದಿನ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಅಕ್ಷರಧಾಮ ಮಾದರಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದಾಗಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಅದೂ ಸಹ ಈಗ ಮರೀಚಿಕೆಯಾಗಿ ಕೇವಲ ಘೋಷಣೆಯಾಗಿ ಉಳಿದಿದೆ.

ಪ್ರಮುಖ ಲಿಂಗಾಯತ ಧಾರ್ಮಿಕ ಕ್ಷೇತ್ರ ಹಾಗೂ ಅಣ್ಣ ಬಸವಣ್ಣನವರ ಐಕ್ಯ ಸ್ಥಳವಾಗಿರುವುದರಿಂದ ಈಗಾಗಲೇ ವಿಶ್ವ ವಿಖ್ಯಾತವಾಗಿ ಪ್ರಸಿದ್ಧಿ ಪಡೆಯಬಹುದಿತ್ತು. ಆದರೆ ಜನಪ್ರತಿನಿಧಿಗಳ ಅಸಡ್ಡೆಯಿಂದಾಗಿ ಅಭಿವೃದ್ಧಿ ಕಂಡು ಬರುತ್ತಿಲ್ಲ. ಆದ್ದರಿಂದ ಈಗಲಾದರೂ ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಗಮನ ಹರಿಸಿ, ಶಾಶ್ವತ ಅಧಿಕಾರಿಯನ್ನು ನೇಮಕ ಮಾಡಿ ಅಭಿವೃದ್ಧಿಪಡಿಸುತ್ತಾರೆಯೇ ಎಂಬುದು ಕಾದು ನೋಡಬೇಕಾಗಿದೆ.

Last Updated : Aug 27, 2020, 5:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.