ETV Bharat / state

ಖಾಸಗಿ ಶಾಲೆಗಳ ಶುಲ್ಕ ಸಂಬಂಧ ಮೂರು ಸೂತ್ರಗಳ ನಿಯಮ ಅಳವಡಿಸಲು ನಿರ್ಧಾರ: ಸಚಿವ ಸುರೇಶ್​​ ಕುಮಾರ್​​​ - ಮೂರು ಸೂತ್ರಗಳ ನಿಯಮ ಅಳವಡಿಸಲು ಸರ್ಕಾರ ನಿರ್ಧಾರ

ಶಿಕ್ಷಣ ಇಲಾಖೆಯ ಆಯುಕ್ತರು, ಪೋಷಕರು ಮತ್ತು ಖಾಸಗಿ ಶಾಲೆಯ ಪ್ರತಿನಿಧಿಗಳ ಸಭೆ ಕರೆದು ಚರ್ಚೆ ಮಾಡಿ, ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಗಿದೆ. ಅವರು ಸರ್ಕಾರದ ಮುಂದೆ ಮೂರು ಸೂತ್ರ ಇಟ್ಟಿದ್ದಾರೆ. ಇಷ್ಟರಲ್ಲಿಯೇ ಪೋಷಕರಿಗೆ ಭಾರ ಆಗದಂತೆ ಮತ್ತು ಖಾಸಗಿ ಶಾಲಾ ಶಿಕ್ಷಕರಿಗೆ ವೇತನ ಸಿಗುವಂತಹ ಸೂತ್ರವನ್ನು ಪ್ರಕಟಿಸುತ್ತೇವೆ ಎಂದು ಸಚಿವ ಸುರೇಶ್​ ಕುಮಾರ್​ ಹೇಳಿದರು.

decision-to-adopt-three-formula-rule-for-private-schools-fees
ಶಿಕ್ಷಣ ಸಚಿವ
author img

By

Published : Jan 23, 2021, 5:01 PM IST

ಬಾಗಲಕೋಟೆ: ಖಾಸಗಿ ಶಾಲೆಗಳು ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ಸರ್ಕಾರದ ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಮೂರು ಸೂತ್ರಗಳ ನಿಯಮ ಅಳವಡಿಸಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣ ಸಚಿವ ಎಸ್.ಸುರೇಶ್​​ ಕುಮಾರ್​ ತಿಳಿಸಿದ್ದಾರೆ.

ಸಚಿವ ಸುರೇಶ್​ ಕುಮಾರ್​​

ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದ ಇನ್ಫೋಸಿಸ್ ಫೌಂಡೇಶನ್ ಕಂಪ್ಯೂಟರ್ ವಿತರಣಾ ಸಮಾರಂಭಕ್ಕೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ವಾರ ಶಿಕ್ಷಣ ಇಲಾಖೆಯ ಆಯುಕ್ತರು, ಪೋಷಕರು ಮತ್ತು ಖಾಸಗಿ ಶಾಲೆಯ ಪ್ರತಿನಿಧಿಗಳ ಸಭೆ ಕರೆದು ಚರ್ಚೆ ಮಾಡಿ, ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಗಿದೆ.

ಸರ್ಕಾರದ ಮುಂದೆ ಮೂರು ಸೂತ್ರ ಇಟ್ಟಿದ್ದಾರೆ. ಇದರ ಬಗ್ಗೆ ನಾನು ಹಾಗೂ ಪ್ರಧಾನ ಕಾರ್ಯದರ್ಶಿಗಳು ಚರ್ಚೆ ಮಾಡಿದ್ದೇವೆ. ಜೊತೆಗೆ ಎಂಎಲ್​ಸಿಗಳೊಂದಿಗೂ ಕೂಡ ಚರ್ಚೆ ಮಾಡಿದ್ದೇವೆ. ಇಷ್ಟರಲ್ಲಿಯೇ ಪೋಷಕರಿಗೆ ಭಾರ ಆಗದಂತೆ ಮತ್ತು ಖಾಸಗಿ ಶಾಲಾ ಶಿಕ್ಷಕರಿಗೆ ವೇತನ ಸಿಗುವಂತಹ ಸೂತ್ರವನ್ನು ಪ್ರಕಟಿಸುತ್ತೇವೆ ಎಂದರು.

ಓದಿ-ರೈತರ ಪ್ರತಿಭಟನೆಯಲ್ಲಿ ಹಿಂಸೆ ಸಂಚು: ಹೇಳಿಕೆ ಬದಲಾಯಿಸುತ್ತಿರುವ ಶಂಕಿತ ಆರೋಪಿ!

ವಿದ್ಯಾರ್ಥಿಗಳಿಗೆ ಪಾಸ್ ಕೂಡದೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹಾಗೂ ಎಸ್​ಎಸ್​ಎಲ್​ಸಿ ಪರೀಕ್ಷೆ ಈ ವರ್ಷದ ಜೂನ್ ಮೊದಲನೇ ವಾರ, ಪಿಯುಸಿ ಎರಡನೇ ವರ್ಷದ ಪರೀಕ್ಷೆ ಮೇ ಎರಡನೇ ವಾರದಲ್ಲಿ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದೇವೆ. ಈಗ ಇರುವ ಸಮಯದ ಬಗ್ಗೆ ಲೆಕ್ಕ ಹಾಕಿ, ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ತಜ್ಞರು, ಅಧ್ಯಯನದಲ್ಲಿ ಶೇಕಡಾ 3ರಷ್ಟು ಕಡಿಮೆ ಮಾಡಿದ್ದಾರೆ ಎಂದು ತಿಳಿಸಿದರು.

ಈಗಾಗಲೇ 6, 7, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ದೂರದರ್ಶನದ ಮೂಲಕ ಪಾಠ ಮಾಡಲಾಗುತ್ತಿತ್ತು. ವಿದ್ಯಾಗಮ ಸಹ ಮಾಡಲಾಗಿದೆ. ಅದರ ಆಧಾರ ಮೇಲೆ ಕಲಿಕೆಯ ಪರೀಕ್ಷೆ ಆಗಿ, ಮುಂದಿನ ತರಗತಿಗೆ ಕಳಿಸುವ ನಿರ್ಧಾರ ಮಾಡಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.