ETV Bharat / state

ಬಸ್‌ ಪ್ರಯಾಣ ದರ ಏರಿಕೆ ಸದ್ಯಕ್ಕಿಲ್ಲ.. ಗಾಯದ ಮೇಲೆ ಬರೆ ಹಾಕಲ್ಲ ಎಂದರು ಡಿಸಿಎಂ ಸವದಿ!

ಸಾರಿಗೆ ಇಲಾಖೆಗೆ ನಷ್ಟವಾಗಲು ಹಿಂದಿನ ಸರ್ಕಾರದ ಆಡಳಿತವೇ ಕಾರಣ ಎಂದ ಅವರು, 2014ರಲ್ಲಿ ಡೀಸೆಲ್ ಬೆಲೆ 52 ರೂ.ಈಗ ₹72, ಟಯರ್​ ಬೆಲೆ 14 ಸಾವಿರ ಇದ್ರೆ, ಈಗ 19 ಸಾವಿರ ರೂ., ಇಷ್ಟು ಬೆಲೆ ಏರಿಗದ್ರೂ ಪ್ರಯಾಣ ದರ ಏರಿಕೆ ಆಗಿಲ್ಲ ಎಂದು ಸಮರ್ಥಿಸಿಕೊಂಡರು.

author img

By

Published : Jun 17, 2020, 9:08 PM IST

DCM Laxman Savadhi
ಡಿಸಿಎಂ ಲಕ್ಷ್ಮಣ್ ಸವದಿ

ಬಾಗಲಕೋಟೆ : ಲಾಕ್​ಡೌನ್​ನಿಂದ ರಸ್ತೆ ಸಾರಿಗೆ ಸಂಸ್ಥೆಗೆ 2300 ಕೋಟಿಗಿಂತ ಹೆಚ್ಚು ನಷ್ಟವಾಗಿದ್ದರೂ ಕಳೆದ ಹತ್ತು ದಿನಗಳಿಂದ ಡೀಸೆಲ್ ಬೆಲೆ ಏರುತ್ತಿದ್ರೂ ಸಹ ರಸ್ತೆ ಸಾರಿಗೆ ಸಂಸ್ಥೆಯ ಪ್ರಯಾಣಿಕ ದರವನ್ನು ಏರಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಸ್ಪಷ್ಟಪಡಿಸಿದರು.

ಜಿಲ್ಲೆಯ ಮುಧೋಳ ಪಟ್ಟಣದಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣದ ನೂತನ ಕಟ್ಟಡ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಬಸ್ ಪ್ರಯಾಣಿಕ ದರ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುವಂತೆ ಮಾಡುವುದಿಲ್ಲ. ಏಪ್ರಿಲ್, ಮೇ ತಿಂಗಳಲ್ಲಿ ಡೀಸೆಲ್‌ಗೆ ಹಣ ಇರಲಿಲ್ಲ. ಸಿಬ್ಬಂದಿಗೆ ವೇತನ ನೀಡುವುದಕ್ಕೂ ಹಣ ಇರಲಿಲ್ಲ. ಪ್ರತಿ ತಿಂಗಳು 326 ಕೋಟಿ ಹಣದಂತೆ 652 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ಪಡೆದು ಸಂಪೂರ್ಣವಾಗಿ ಸಂಬಳ ನೀಡಲಾಗಿದೆ ಎಂದರು.

ಡಿಸಿಎಂ ಲಕ್ಷ್ಮಣ್ ಸವದಿ

ಸಾರಿಗೆ ಇಲಾಖೆಗೆ ನಷ್ಟವಾಗಲು ಹಿಂದಿನ ಸರ್ಕಾರದ ಆಡಳಿತವೇ ಕಾರಣ ಎಂದ ಅವರು, 2014ರಲ್ಲಿ ಡೀಸೆಲ್ ಬೆಲೆ 52 ರೂ.ಈಗ ₹72, ಟಯರ್​ ಬೆಲೆ 14 ಸಾವಿರ ಇದ್ರೆ, ಈಗ 19 ಸಾವಿರ ರೂ., ಇಷ್ಟು ಬೆಲೆ ಏರಿಗದ್ರೂ ಪ್ರಯಾಣ ದರ ಏರಿಕೆ ಆಗಿಲ್ಲ ಎಂದು ಸಮರ್ಥಿಸಿಕೊಂಡರು.

ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಸಿಪಿಟಿಎಸ್‌ನ ಹಣವನ್ನು ಪಡೆದುಕೊಂಡು ಉತ್ತರ ಕರ್ನಾಟಕದ ನಾಲ್ಕು ಕಡೆಗೆ ಡ್ರಾಯಿಂಗ್ ಸೆಂಟರ್ ಮಾಡುವ ಗುರಿ ಹೊಂದಲಾಗಿದೆ ಎಂದ ಅವರು, ಇದನ್ನು 15 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿ,ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಚಾಲಕ ತರಬೇತಿ ನೀಡಿ, ವಸತಿ ನಿಲಯ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿ,ಅವರಿಗೆ ತರಬೇತಿಯನ್ನೂ ನೀಡಲಾಗುವುದು. ಅಲ್ಲದೇ ಅವರಿಗೆ ಚಾಲನಾ ಪ್ರಮಾಣ ಪತ್ರವನ್ನು ಕೊಡುವ ಮೂಲಕ ಸರ್ಕಾರಿ ಸೇವೆಗೆ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು.

ಇಂತಹ ತರಬೇತಿ ಘಟಕವು ಮುಧೋಳ,ಅಥಣಿ,ಕೊಪ್ಪಳ ಹಾಗೂ ಸವದತ್ತಿಯಲ್ಲಿ 15 ಕೋಟಿ ವೆಚ್ಚದಲ್ಲಿ ತೆರಯಲಾಗುವುದು ಎಂದ ಅವರು, ಕೊರೊನಾಗೆ ಹೆದರಿ ಪ್ರಯಾಣಿಕರು ಬಸ್ ಸಂಚಾರ ಮಾಡುತ್ತಿಲ್ಲ. ಇದರ ನಷ್ಟ ತುಂಬಲು ಸರ್ಕಾರದಿಂದ ಮತ್ತೆ ಹಣದ ನೆರವು ಪಡೆಯಲಾಗುವುದು ಎಂದರು. ಅಲ್ಲದೇ ವಿಧಾನ ಪರಿಷತ್ ಸದಸ್ಯರ ಆಯ್ಕೆ ಸಂಬಂಧ ಹೈಕಮಾಂಡ್​ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.