ETV Bharat / state

ನನಗೆ ಜೀವನದಲ್ಲಿ ಆಸೆ ಇದೆ, ಆದ್ರೆ ದುರಾಸೆ ಇಲ್ಲ: ಸಿಎಂ ಸ್ಥಾನದ ಕುರಿತು ಕಾರಜೋಳ ಪ್ರತಿಕ್ರಿಯೆ - ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿಕೆ

ನನ್ನ ಮಾಹಿತಿ ಪ್ರಕಾರ ಯಡಿಯೂರಪ್ಪ ಅವರಿಗೆ ಯಾವುದೇ ಸೂಚನೆ ಇಲ್ಲ. ಅವರು ಮುಖ್ಯಮಂತ್ರಿ ಆಗಿದ್ದಾರೆ, ಮುಂದೇನೂ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ. ಜುಲೈ 25ಕ್ಕೂ ಇರ್ತಾರೆ 26ಕ್ಕೂ ಇರ್ತಾರೆ ಏನೂ ಚಿಂತೆ ಮಾಡಬೇಡಿರಿ ಎಂದು ಗೋವಿಂದ್​ ಕಾರಜೋಳ ಹೇಳಿದ್ದಾರೆ.

ಸಿಎಂ ಸ್ಥಾನದ ಕುರಿತು ಕಾರಜೋಳ ಪ್ರತಿಕ್ರಿಯೆ
ಸಿಎಂ ಸ್ಥಾನದ ಕುರಿತು ಕಾರಜೋಳ ಪ್ರತಿಕ್ರಿಯೆ
author img

By

Published : Jul 24, 2021, 7:19 PM IST

ಬಾಗಲಕೋಟೆ : ಪ್ರವಾಹದಿಂದ ತೊಂದರೆ ಆಗಿರುವ ಮುಧೋಳ ತಾಲೂಕಿನ ಮಿರ್ಜಿ ಗ್ರಾಮಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ಶಕ್ತಿಯುತವಾಗಿದೆ. ನಮ್ಮ ನಾಯಕರಾದ ಯಡಿಯೂರಪ್ಪ, ಪ್ರವಾಹ ಮತ್ತು ಕೊರೊನಾ ಮದ್ಯೆಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾಳೆ ಬೆಳಗಾವಿಗೆ ಸಿಎಂ ಆಗಮಿಸುತ್ತಿದ್ದು, ಸ್ಥಳ ಪರಿಶೀಲನೆ ಮಾಡಲಿದ್ದಾರೆ ಎಂದರು.

ಸಿಎಂ ಸ್ಥಾನದ ಕುರಿತು ಕಾರಜೋಳ ಪ್ರತಿಕ್ರಿಯೆ

ಸಿಎಂ ಸ್ಥಾನಕ್ಕೆ ಮುರುಗೇಶ್ ನಿರಾಣಿ ಸೇರಿದಂತೆ ಹಲವರು ಲಾಬಿ ವಿಚಾರವಾಗಿ ಮಾತನಾಡಿ, ಪರೋಕ್ಷವಾಗಿ ಸಿಎಂ ಸ್ಥಾನದ ಆಕಾಂಕ್ಷಿಗಳಿಗೆ ಟಾಂಗ್ ನೀಡಿದರು. ನನಗೆ ಗೊತ್ತಿಲ್ಲ, ನನ್ನ ಮಾಹಿತಿ ಪ್ರಕಾರ ಯಡಿಯೂರಪ್ಪ ಅವರಿಗೆ ಯಾವುದೇ ಸೂಚನೆ ಇಲ್ಲ. ಅವರು ಮುಖ್ಯಮಂತ್ರಿ ಆಗಿದ್ದಾರೆ, ಮುಂದೇನೂ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ. ಜುಲೈ 25 ಕ್ಕೂ ಇರ್ತಾರೆ 26ಕ್ಕೂ ಇರ್ತಾರೆ ಏನೂ ಚಿಂತೆ ಮಾಡಬೇಡಿರಿ ಎಂದರು.

ಸಿಎಂ ಸ್ಥಾನಕ್ಕೆ ಕಾರಜೋಳ ಹೆಸರು ಪ್ರಸ್ತಾಪದ ವಿಚಾರವಾಗಿ ಪ್ರತಿಕ್ರಿಯೆ ‌ನೀಡಿ, ಬಹಳ ಸ್ವಾಭಾವಿಕವಾಗಿ ನೀವು ಕೇಳಿದ್ದೀರಿ. ನನಗೆ ಜೀವನದಲ್ಲಿ ಆಸೆ ಇದೆ. ಆದ್ರೆ ದುರಾಸೆ ಇಲ್ಲ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು. ನಾನು ಯಾವ ದೆಹಲಿಗೂ ಹೋಗಲ್ಲ, ಮುಂಬೈಗೂ ಹೋಗಲ್ಲ ಎಂದರು.

ಇದನ್ನೂ ಓದಿ : ಮುರುಗೇಶ್ ನಿರಾಣಿಗೆ ಸಿಎಂ ಪಟ್ಟ ನೀಡಿದರೆ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ: ಕಾರಜೋಳ ಎಚ್ಚರಿಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.