ಬಾಗಲಕೋಟೆ: ಕೋವಿಡ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನಿರ್ಬಂಧಿತ ಪ್ರದೇಶಕ್ಕೆ ಪಡಿತರ ಆಹಾರ ಧಾನ್ಯಗಳನ್ನು ಮನೆ ಮನೆಗೆ ಸಾಗಿಸಲಾಗುತ್ತಿದ್ದು, ಆಹಾರ ಧಾನ್ಯಗಳ ಕಿಟ್ ತಯಾರಿಕೆ ಗೋದಾಮಿಗೆ ಅಪರ ಜಿಲ್ಲಾಧಿಕಾರಿ ಬಸವರಾಜ ಸೋಮಣ್ಣವರ ಭೇಟಿ ನೀಡಿ ಪರಿಶೀಲಿಸಿದರು.
35 ಕೆಜಿ ಅಕ್ಕಿ ಹಾಗೂ 2 ಕೆಜಿ ಗೋದಿಯ ಕಿಟ್ ತಯಾರಿಸಲಾಗುತ್ತಿದ್ದು, ಹಳೇ ಬಾಗಲಕೋಟೆಯ ನಿರ್ಬಂಧಿತ ಪ್ರದೇಶಕ್ಕೆ ವಾಹನದ ಮೂಲಕ ರವಾನಿಸಲಾಗುತ್ತಿದೆ. ಕಾರ್ಯನಿರ್ವಹಿಸುತ್ತಿದ್ದ ಕೆಲಸಗಾರರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಿದರು. ಗೋದಾಮಿನಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸುವಂತೆ ತಿಳಿಸಿದರು.
ತಾಲೂಕಿನ 25 ಗ್ರಾಮ ಲೆಕ್ಕಾಧಿಕಾರಿಗಳು, 48 ಜನ ಗ್ರಾಮ ಸಹಾಯಕರು, ಆಹಾರ ಇಲಾಖೆಯ ಸಿಬ್ಬಂದಿ ಹಾಗೂ ತಹಶೀಲ್ದಾರ ಕಚೇರಿ ಸಿಬ್ಬಂದಿ ಸೇರಿದಂತೆ ನೂರಾರು ಜನರು ಆಹಾರ ಕಿಟ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.