ಬಾಗಲಕೋಟೆ: ದೇವರ ಹೆಸರನಲ್ಲಿ ನಡೆಯುವ ಪ್ರಾಣಿ ಬಲಿಯನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತಡೆಯಬೇಕು, ಇಲ್ಲವೇ ಕಾನೂನು ಉಲ್ಲಂಘನೆ ಆಗಲಿದೆ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಾಗಲಕೋಟೆ ಸಮೀಪವಿರುವ ಬೇವಿನಮಟ್ಟಿ ಗ್ರಾಮದಲ್ಲಿ ಫೆ.18 ರಿಂದ 20 ರವರಗೆ ದುರ್ಗಾದೇವಿ ಜಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿ ಬಲಿ ನಡೆಯುತ್ತದೆ. 1959 ರ ಕರ್ನಾಟಕ ಪ್ರಾಣಿ ಬಲಿಗಳ ಪ್ರತಿ ಬಂಧಕ ಕಾಯ್ದೆ ಹಾಗೂ ರಾಜ್ಯ ಹೈಕೋರ್ಟ್ ಆದೇಶಗಳ ಪ್ರಕಾರ ಪ್ರಾಣಿ ಬಲಿ ಶಿಕ್ಷಾರ್ಹ ಅಪರಾಧ. ಆದರೂ ಸಹ 60 ವರ್ಷಗಳಿಂದ ಪ್ರಾಣಿ ಬಲಿ ನಡೆಯುತ್ತಿದೆ ಎಂದರು.
ಬೇವಿನಮಟ್ಟಿ ಗ್ರಾಮದಲ್ಲಿ ಸುಮಾರು 10ಸಾವಿರ ಕ್ಕೂ ಅಧಿಕ ಪ್ರಾಣಿ ಬಲಿ ನಡೆಯಲಿದ್ದು, ಇಂತಹ ಮೂಢನಂಬಿಕೆ ತಡೆಯಬೇಕು ಎಂದು ಅವರು ಆಗ್ರಹಿಸಿದರು.