ಬಾಗಲಕೋಟೆ : ಜಿಲ್ಲೆಯಲ್ಲಿ ಒಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ರೆ, ಇನ್ನೊಂದೆಡೆ ಗುಣಮುಖರಾಗಿ ಡಿಸ್ಚಾರ್ಜ್ ಆಗುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಆತಂಕದ ನಡುವೆ ಸಮಾಧಾನದ ಸಂಗತಿಯಾಗಿದೆ.
ಇಂದು ಹೊಸದಾಗಿ 57 ಕೋವಿಡ್ ಪ್ರಕರಣ ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 1,225ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಕೋವಿಡ್‍ನಿಂದ ಮತ್ತೆ 186 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 680 ಸೋಂಕಿತರು, 509 ಸಕ್ರಿಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದಾಗಿ ದೃಢಪಟ್ಟ ಸೋಂಕಿತರ ಪೈಕಿ ಬಾಗಲಕೋಟೆ ತಾಲೂಕಿನಲ್ಲಿ 20, ಜಮಖಂಡಿ 13, ಮುಧೋಳ ಮತ್ತು ಬಾದಾಮಿ ತಲಾ 8, ಗುಳೇದಗುಡ್ಡ 2, ಇಲಕಲ್ಲ, ಬೀಳಗಿ, ಹುನಗುಂದದಲ್ಲಿ ತಲಾ ಒಂದು ಸೇರಿ 57 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಿಂದ ಕಳುಹಿಸಲಾಗಿದ್ದ 811 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ.
ಪ್ರತ್ಯೇಕವಾಗಿ 1264 ಜನರನ್ನು ನಿಗಾದಲ್ಲಿರಿಸಲಾಗಿದೆ. ಈವರೆಗೆ ಕಳುಹಿಸಲಾದ ಒಟ್ಟು 23,096 ಸ್ಯಾಂಪಲ್‍ಗಳ ಪೈಕಿ 20,820 ಪ್ರಕರಣ ನೆಗೆಟಿವ್, 1,225 ಪಾಸಿಟಿವ್ ಪ್ರಕರಣ, 39 ಜನ ಮೃತಪಟ್ಟಿದ್ದಾರೆ.