ಬಾಗಲಕೋಟೆ: ಮುಳುಗಡೆ ನಗರ ಬಾಗಲಕೋಟೆಯಲ್ಲಿ ಕೊರೊನಾ ಪ್ರಭಾವ ಹೆಚ್ಚಾಗಿರುವ ಪರಿಣಾಮ ಕೆಂಪು ವಲಯ ಎಂದು ಘೋಷಣೆ ಮಾಡಲಾಗಿದೆ. ಪರಿಣಾಮ, ಬಸವೇಶ್ವರ ವೃತ್ತದಿಂದ ಪ್ರಮುಖ ಎಂ.ಜಿ.ರಸ್ತೆ, ವಲ್ಲಭಭಾಯಿ ವೃತ್ತ, ಅಡತ್ ಬಜಾರ, ಬಸವೇಶ್ವರ ಕಾಲೇಜ್ ರಸ್ತೆ, ಬಸ್ ನಿಲ್ದಾಣ ಸೇರಿದಂತೆ ರೋಟರಿ ಸರ್ಕಲ್ವರೆಗೆ ಸಂಪೂರ್ಣ ನಗರ ಸ್ತಬ್ಧವಾಗಿದೆ.
ನಿಷೇಧಿತ ಪ್ರದೇಶ ಎಂದು ಜಿಲ್ಲಾಡಳಿತ ಘೋಷಿಸಿದ ಹಿನ್ನೆಲೆಯಲ್ಲಿ ಜನಜಂಗುಳಿಯಿಂದ ಇರುತ್ತಿದ್ದ ಕೆಲ ಪ್ರದೇಶದಲ್ಲಿ, ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಹೀಗಾಗಿ ವೈರಸ್ ಹರಡುವಿಕೆ ಭೀತಿಯಿಂದ ಇಡೀ ಹಳೆ ನಗರ ಭಣಗುಟ್ಟುತ್ತಿದೆ.
ಪೊಲೀಸ್ ಇಲಾಖೆ ವತಿಯಿಂದ ಸೀಲ್ಡೌನ್ ಆಗಿರುವ ಪ್ರದೇಶವನ್ನು ಡ್ರೋಣ್ ಕ್ಯಾಮರಾದಿಂದ ಸೆರೆ ಹಿಡಿಯಲಾಗಿದೆ.